‘ಸಿಟಿ ಲೈಟ್ಸ್ ’ನಲ್ಲಿದುನಿಯಾ ವಿಜಯ್ ‘ಕಂದಮ್ಮ’

Contributed bybabitha.salian@timesgroup.com|Vijaya Karnataka
city lights movie features dunia vijays song kandamma release
‘ಸಿಟಿ ಲೈಟ್ಸ್ ’ನಲ್ಲಿದುನಿಯಾ ವಿಜಯ್ ‘ಕಂದಮ್ಮ’

ದುನಿಯಾ ವಿಜಯ… ನಿರ್ದೇಶನದಲ್ಲಿಅವರ ಪುತ್ರಿ ಮೋನಿಷಾ ಹಾಗೂ ವಿನಯ್ ರಾಜ್ ಕುಮಾರ್ ನಟಿಸಿರುವ ‘ಸಿಟಿ ಲೈಟ್ಸ್ ’ ಸಿನಿಮಾದ ಮೆಲೊಡಿಯಸ್ ಹಾಡು ‘ಕಂದಮ್ಮ ಕಂದಮ್ಮ’ ಇತ್ತೀಚೆಗೆ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ನಿರ್ದೇಶನದಲ್ಲಿಸಂಚಿತ್ ಹೆಗ್ಡೆ ಹಾಡಿರುವ ಈ ಹಾಡಿಗೆ ನಾಗಾರ್ಜುನ ಶರ್ಮ ಸಾಹಿತ್ಯ ರಚಿಸಿದ್ದಾರೆ. ಸಮಾಜದಲ್ಲಿಮಂಗಳಮುಖಿಯರನ್ನು ಗೌರವಯುತವಾಗಿ ನೋಡಬೇಕು ಎಂಬ ಉದ್ದೇಶದಿಂದ ಈ ಸಿನಿಮಾದಲ್ಲಿಉಮಾಶ್ರೀ ಅವರೊಂದಿಗೆ ಮಂಗಳಮುಖಿಯರಿಗೆ ಪ್ರಮುಖ ಪಾತ್ರ ನೀಡಲಾಗಿದೆ ಎಂದಿದೆ ಚಿತ್ರತಂಡ.
ಹಾಡಿನ ಬಗ್ಗೆ ಹೇಳಿರುವ ದುನಿಯಾ ವಿಜಯ್ , ‘ನಾವು ಪ್ರೀತಿಯಿಂದ ಚಿನ್ನಮ್ಮ, ಕಂದಮ್ಮ, ಬಂಗಾರಿ ಎಂದು ಕರೆಯುವ ಅಕ್ಕರೆಯ ಪದಗಳನ್ನೇ ಪೋಣಿಸಿ ಈ ಹಾಡಿನ ಸಾಹಿತ್ಯ ರಚಿಸಲಾಗಿದೆ. ಇದರ ದೃಶ್ಯದಲ್ಲಿಮಕ್ಕಳಿಗೆ ಜಂಕ್ ಫುಡ್ ಹಾಗೂ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಸಣ್ಣ ಸಂದೇಶವನ್ನೂ ಸೇರಿಸಲಾಗಿದೆ’ ಎಂದಿದ್ದಾರೆ. ನಟ ವಿನಯ… ರಾಜ್ ಕುಮಾರ್ , ‘ವಿಜಯ್ ನಿರ್ದೇಶನದಲ್ಲಿಕೆಲಸ ಮಾಡುವುದು ಆರಾಮವಾಗಿತ್ತು. ಸಂಚಿತ್ ಹೆಗಡೆ ಗಾಯನ ಹಾಗೂ ಹಾಡಿನ ಭಾವನೆಗಳು ಅದ್ಭುತವಾಗಿ ಬಂದಿವೆæ’ ಎಂದು ತಿಳಿಸಿದ್ದಾರೆ. ‘ಸಿಟಿ ಲೈಟ್ಸ್ ’ ಚಿತ್ರದಲ್ಲಿಒಟ್ಟು ಆರು ಹಾಡುಗಳಿವೆ.