ಪೇಜ್ 8 ಲೀಡ್

Contributed byDHEERAJ K|Vijaya Karnataka
misconceptions about healthy foods truths and marketing strategies
‘ಆರೋಗ್ಯಕರ’ ಎಂಬ ಭ್ರಮೆ

ಇಂಟ್ರೋ
ಇಂದಿನ ದಿನಗಳಲ್ಲಿನಾವು ತಿನ್ನುವ ಬಹುಪಾಲು ಪ್ಯಾಕ್ ಮಾಡಿದ ಆಹಾರಗಳು ಅಲ್ಟಾ್ರ-ಪ್ರೊಸೆÓ್ಡ… ಫುಡ್ಸ್ ವಿಭಾಗಕ್ಕೆ ಸೇರುತ್ತವೆ. ಇವುಗಳನ್ನು ಸಕ್ಕರೆ, ರಾಸಾಯನಿಕ, ಮತ್ತು ಪ್ರಿಸರ್ವೇಟಿವ್ ಗಳನ್ನು ಬಳಸಿ ಕಾರ್ಖಾನೆಗಳಲ್ಲಿತಯಾರಿಸಲಾಗುತ್ತದೆ. ಆದರೆ, ಇವು ಆರೋಗ್ಯಕ್ಕೆ ಅಪಾಯಕಾರಿ ಎಂಬ ಸತ್ಯ ಮುಚ್ಚಿಡಲು ಕಂಪನಿಗಳು ಬಳಸುವ ಚಾಣಾಕ್ಷ ಮಾರ್ಕೆಟಿಂಗ್ ತಂತ್ರಗಳ ಕುರಿತ ಮಾಹಿತಿ ಇಲ್ಲಿದೆ.

ಹೆಲ್ತ… ಹಾಲೋ ಎಫೆಕ್ಟ್

ಒಂದು ಉತ್ಪನ್ನದಲ್ಲಿರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿಯಂತಹ ಕೇವಲ ಒಂದೇ ಒಂದು ಒಳ್ಳೆಯ ಅಂಶವಿದ್ದರೆ, ಗ್ರಾಹಕರು ಇಡೀ ಉತ್ಪನ್ನವೇ ಆರೋಗ್ಯಕರ ಎಂದು ಭಾವಿಸುವುದನ್ನು ಆಹಾರ ವಿಜ್ಞಾನದಲ್ಲಿಹೆಲ್ತ… ಹಾಲೋ ಎಫೆಕ್ಟ್ ಎನ್ನುತ್ತಾರೆ. ಉದಾಹರಣೆಗೆ: ಬಿಸ್ಕತ್ತು ಅಥವಾ ಬ್ರೇಕ್ ಫಾಸ್ಟ್ ಸೀರಿಯಲ್ ಪ್ಯಾಕೆಟ್ ಮೇಲೆ ‘್ಕಜ್ಚಿh ಜ್ಞಿ Whಟ್ಝಛಿ ಎ್ಟaಜ್ಞಿ‘ (ಸಂಪೂರ್ಣ ಧಾನ್ಯಗಳಿಂದ ಕೂಡಿದೆ) ಎಂದು ಬರೆದಿರುತ್ತಾರೆ. ಆದರೆ ಅದೇ ಪ್ಯಾಕೆಟ್ ನ ಹಿಂಭಾಗ ತಿರುಗಿಸಿ ನೋಡಿದರೆ, ಅದರಲ್ಲಿಅಪಾರ ಪ್ರಮಾಣದ ಸಂಸ್ಕರಿಸಿದ ಸಕ್ಕರೆ ಮತ್ತು ಪಾಮ್ ಆಯಿಲ್ ಇರುತ್ತದೆ.

ಮೆಕ್ಸಿಕೋ ಸಿಟಿಯಲ್ಲಿನಡೆದ ಅಂತಾರಾಷ್ಟ್ರೀಯ ಬೊಜ್ಜು ಸಮ್ಮೇಳನ-2026ರಲ್ಲಿಮಂಡಿಸಲಾದ ಹೊಸ ಸಂಶೋಧನಾ ವರದಿಯು ಅಲ್ಟಾ್ರ-ಪ್ರೊಸೆÓ್ಡ… ಫುಡ್ ತಯಾರಿಸುವ ಸಂಸ್ಥೆಗಳು/ಉದ್ಯಮಗಳು, ತಮ್ಮ ಉತ್ಪನ್ನಗಳಿಂದ ಆರೋಗ್ಯಕ್ಕಾಗುವ ಅಪಾಯಗಳನ್ನು ಹೇಗೆ ಮುಚ್ಚಿಡುತ್ತವೆ ಮತ್ತು ತಮ್ಮ ಉತ್ಪನ್ನಗಳು ಇತರ ಉತ್ಪನ್ನಗಳಿಗಿಂತ ಹೆಚ್ಚು ಆರೋಗ್ಯಕರ ಎಂದು ಹೇಗೆ ಬಿಂಬಿಸಿಕೊಳ್ಳುತ್ತವೆ ಎಂಬುದನ್ನು ಬಹಿರಂಗಪಡಿಸಿದೆ.

ಅಲ್ಟಾ್ರ-ಪ್ರೊಸೆÓ್ಡ… ಫುಡ್ : ಮನೆಗಳಲ್ಲಿಸಾಮಾನ್ಯವಾಗಿ ಬಳಸದ ರಾಸಾಯನಿಕಗಳು, ಕೃತಕ ಬಣ್ಣ, ಪರಿಮಳ ಮತ್ತು ಸಂರಕ್ಷಕಗಳನ್ನು ಬಳಸಿ ಕೈಗಾರಿಕೆಗಳಲ್ಲಿಅತ್ಯಂತ ಸಂಸ್ಕರಿಸಿ ತಯಾರಿಸುವ ಆಹಾರ ಉತ್ಪನ್ನಗಳನ್ನು ಅಲ್ಟಾ್ರ-ಪ್ರೊಸೆÓ್ಡ… ಫುಡ್ ಎನ್ನಲಾಗುತ್ತದೆ. ಉದಾಹರಣೆಗೆ ಚಿ±್ಸ…, ತಂಪು ಪಾನೀಯ, ಬಿಸ್ಕತ್ತು, ಇನ್ ಸ್ಟಂಟ್ ನೂಡಲ್ಸ್ ಇತ್ಯಾದಿ.

ಸಕ್ಕರೆಯ ವಿಭಿನ್ನ ಹೆಸರು: ಜನರು ಸಕ್ಕರೆ ಎಂಬ ಪದ ಕಂಡರೆ ದೂರ ಓಡುತ್ತಾರೆ ಎಂದು ಕಂಪನಿಗಳಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಸಕ್ಕರೆ ಎಂಬ ಪದ ಬಳಸುವ ಬದಲು 60ಕ್ಕೂ ಹೆಚ್ಚು ಬೇರೆ ಬೇರೆ ಹೆಸರುಗಳನ್ನು ಬಳಸಲಾಗುತ್ತದೆ. ನಿಮಗೆ ಪ್ಯಾಕೆಟ್ ಮೇಲೆ Nಟ ಅddಛಿd ್ಕಛ್ಛಿಜ್ಞಿಛಿd ಖ್ಠಜa್ಟ ಎಂದು ಕಂಡರೂ, ಸಕ್ಕರೆಯನ್ನು ವಿಭಿನ್ನ ಹೆಸರುಗಳಿಂದ ನಮೂದಿಸಲಾಗಿರುತ್ತದೆ.

ಕೊಬ್ಬಿನಾಂಶದ ಗುಟ್ಟು: ಯಾವುದಾದರೂ ಪ್ಯಾಕೆಟ್ ಮೇಲೆ ‘ಔಟಡಿ ಊaಠಿ‘ ಅಥವಾ ‘ಊaಠಿ-ಊ್ಟಛಿಛಿ‘ ಎಂದು ಕಂಡರೆ ಖಂಡಿತ ಮೋಸ ಹೋಗಬೇಡಿ. ಆಹಾರದಿಂದ ಕೊಬ್ಬಿನಂಶವನ್ನು ತೆಗೆದಾಗ ಅದರ ರುಚಿ ಹೊರಟುಹೋಗುತ್ತದೆ. ಆ ರುಚಿಯನ್ನು ಮತ್ತೆ ತರಲು ಕಂಪನಿಗಳು ವಿಪರೀತ ಸಕ್ಕರೆ, ಉಪ್ಪು ಮತ್ತು ಕೃತಕ ಸುವಾಸನೆಗಳನ್ನು ಸೇರಿಸುತ್ತವೆ. ಲೋ ಫ್ಯಾಟ್ ಫ್ಲೇವರ್ಡ್ ಮೊಸರು ಅಥವಾ ಸ್ಯಾಕ್ಸ್ ನಲ್ಲಿಸಾಮಾನ್ಯ ಉತ್ಪನ್ನಗಳಿಗಿಂತ ಹೆಚ್ಚಿನ ಸಕ್ಕರೆ ಮತ್ತು ಕ್ಯಾಲೊರಿಗಳು ಇರುತ್ತವೆ.

ಹಸಿರು ಬಣ್ಣ ಮತ್ತು ನ್ಯಾಚುರಲ್ ಪ್ಯಾಕೇಜಿಂಗ್ : ಮನಃಶಾಸ್ತ್ರದ ಪ್ರಕಾರ, ಮನುಷ್ಯರು ಹಸಿರು ಮತ್ತು ಕಂದು ಬಣ್ಣಗಳನ್ನು ನೈಸರ್ಗಿಕ ಮತ್ತು ಆರೋಗ್ಯಕರ ಎಂದು ಭಾವಿಸುತ್ತಾರೆ. ಜಂಕ್ ಫುಡ್ ಕಂಪನಿಗಳು ತಮ್ಮ ಹೊಳೆಯುವ ಪ್ಯಾಕೆಟ್ ಗಳ ಬದಲು ಮ್ಯಾಟ್ ಫಿನಿಶ್ ಹಾಗೂ ಹಸಿರು/ಕಂದು ಬಣ್ಣದ ಪರಿಸರ ಸ್ನೇಹಿ ಮಾದರಿಯ ಪ್ಯಾಕೆಟ್ ಗಳನ್ನು ಬಳಸಲು ಪ್ರಾರಂಭಿಸಿವೆ. ಪ್ಯಾಕೆಟ್ ಮೇಲೆ ಸಾಂಪ್ರದಾಯಿಕ ರೈತನ ಚಿತ್ರ ಅಥವಾ ಗೋಧಿಧಿ ತೆನೆ ಚಿತ್ರ ಬಿಡಿಸಿ ಅದು ನೇರ ಜಮೀನಿನಿಂದ ಬಂದಿದೆ ಎನ್ನುವಂತೆ ಬಿಂಬಿಸುತ್ತಾವೆ.

ಹೈ ಪ್ರೋಟೀನ್ ಕ್ರೇಜ್ : ಇತ್ತೀಚೆಗೆ ಪ್ರೊಟೀನ್ ಹೆಸರಿನಲ್ಲಿದೊಡ್ಡ ಮಾರ್ಕೆಟಿಂಗ್ ನಡೆಯುತ್ತಿದೆ. ಸಾಮಾನ್ಯ ಚಾಕೊಲೆಟ್ ಬಾರ್ ಗೆ ಕೇವಲ ಎರಡು ಗ್ರಾಂ ಪ್ರೊಟೀನ್ ಪೌಡರ್ ಸೇರಿಸಿ, ಅದನ್ನು ‘P್ಟಟಠಿಛಿಜ್ಞಿ ಆa್ಟ’ ಎಂದು ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಲಾಗುತ್ತದೆ. ನಿಜವಾಗಿ ಆ ಬಾರ್ ನಲ್ಲಿಪ್ರೊಟೀನ್ ಗಿಂತ ಸಕ್ಕರೆ ಮತ್ತು ಪಾಮ್ ಆಯಿಲ್ ಪ್ರಮಾಣವೇ ಹೆಚ್ಚಿರುತ್ತದೆ!

ಬಾಕ್ಸ್

ಮುನ್ನೆಚ್ಚರಿಕೆ

-ಪ್ಯಾಕೆಟ್ ನ ಮುಂಭಾಗ ನೋಡಬೇಡಿ, ಹಿಂಭಾಗ ನೋಡಿ. ಕಂಪನಿಗಳು ಪ್ಯಾಕೆಟ್ ನ ಮುಂಭಾಗವನ್ನು ಜಾಹೀರಾತಿಗಾಗಿ ಮತ್ತು ಹಿಂಭಾಗವನ್ನು ಕಾನೂನುಬದ್ಧ ಮಾಹಿತಿಗಾಗಿ ಬಳಸುತ್ತವೆ.

-ಇಂಗ್ರಿಡಿಯೆಂಟ್ ಲಿಸ್ವ್ ಓದಿ. ಇದರಲ್ಲಿಮೊದಲ ಮೂರು ಪದಗಳು ಆ ಆಹಾರದಲ್ಲಿಅತಿ ಹೆಚ್ಚು ಪ್ರಮಾಣದಲ್ಲಿರುವುದನ್ನು ಸೂಚಿಸುತ್ತವೆ. ಅಲ್ಲಿಸಕ್ಕರೆ, ಮೈದಾ ಅಥವಾ ಎಣ್ಣೆಯ ಹೆಸರುಗಳಿದ್ದರೆ ಅದನ್ನು ತಕ್ಷಣ ಪಕ್ಕಕ್ಕಿಡಿ.

- ಐದಕ್ಕಿಂತ ಹೆಚ್ಚು ಇಂಗ್ರಿಡಿಯೆಂಟ್ಸ… ಇದ್ದರೆ ಎಚ್ಚರ. ಉಚ್ಚರಿಸಲು ಕಷ್ಟವಾಗುವ ರಾಸಾಯನಿಕಗಳ ಹೆಸರುಗಳಿದ್ದರೆ ಅದು ಅಲ್ಟಾ್ರ-ಪ್ರೊಸೆÓ್ಡ… ಆಹಾರವಾಗಿರುತ್ತದೆ.

ಬಾಕ್ಸ್

ನೆನಪಿಡಿ: ನಿಜವಾದ ಆರೋಗ್ಯಕರ ಆಹಾರಗಳಾದ ಹಣ್ಣು, ತರಕಾರಿ, ಕಾಳುಗಳಿಗೆ ಯಾವುದೇ ಜಾಹೀರಾತು ಅಥವಾ ’ಏಛಿa್ಝಠಿh ಇ್ಝaಜಿಞs’ ನ ಅಗತ್ಯವಿರುವುದಿಲ್ಲ!