ಭಾಗ್ಯನಗರ ಅಭಿವೃದ್ಧಿಪಡಿಸಿ

Contributed bygvittalslb@gmail.com|Vijaya Karnataka
struggle for comprehensive development of bhagyanagar
‘ಭಾಗ್ಯನಗರ ಸಮಗ್ರ ಅಭಿವೃದ್ಧಿಪಡಿಸಿ’

ಜನಪರ ಸಂಘಟನೆ ಒಕ್ಕೂಟ ಆಗ್ರಹ
ವಿಕ ಸುದ್ದಿಲೋಕ ಕೊಪ್ಪಳ

ತಾಲೂಕಿನ ಭಾಗ್ಯನಗರ ಪಟ್ಟಣವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿನಾನಾ ಸಂಘಟನೆಗಳಿಂದ ಪಟ್ಟಣ ಪಂಚಾಯಿತಿ

ಅಧ್ಯಕ್ಷ ರಮೇಶ್ ಹ್ಯಾಟಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಂಘಟನೆ ಮುಖಂಡರು ಮಾತನಾಡಿ, ‘‘ವೇಗವಾಗಿ ಬೆಳೆಯುತ್ತಿರುವ ಭಾಗ್ಯನಗರ ಮತ್ತು ನವನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು.

ಮುಖ್ಯ ರಸ್ತೆ ಹಾಗೂ ಒಳರಸ್ತೆಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ರಸ್ತೆ ವಿಸ್ತರಣೆ ಮತ್ತು ಗುಣಮಟ್ಟದ ಡಾಂಬರೀಕರಣ ಮಾಡಬೇಕು. ಪ್ರತಿ ವಾರ್ಡ್ ಹಾಗೂ ಬಡಾವಣೆಗಳಲ್ಲಿ

ಮಾಹಿತಿ ಫಲಕ ಅಳವಡಿಸಬೇಕು,’’ ಎಂದು ಆಗ್ರಹಿಸಿದರು.

ಮುಖ್ಯ ರಸ್ತೆ ಸೇರಿ ಎಲ್ಲ ವಾರ್ಡ್ ಗಳ ಚರಂಡಿಗಳಲ್ಲಿತುಂಬಿರುವ ಹೂಳು ಸ್ವಚ್ಛಗೊಳಿಸಬೇಕು. ಚರಂಡಿ ವ್ಯವಸ್ಥೆ ಇಲ್ಲದ ಕಡೆ ಹೊಸ ಒಳಚರಂಡಿ ನಿರ್ಮಿಸಬೇಕು.

ರಾತ್ರಿ ವೇಳೆ ಮಾತ್ರ ಬೀದಿದೀಪಗಳು ಬೆಳಗುವಂತೆ ನಿಯಂತ್ರಿಸಬೇಕು.

ಭಾಗ್ಯನಗರ ಮತ್ತು ನವ ನಗರದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕೊಳವೆ ಬಾವಿಗಳಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು.

ತೆರಿಗೆ ಪಾವತಿಸಿದ ತಕ್ಷಣ ಸ್ವೀಕೃತಿ ದಾಖಲಿಸುವುದನ್ನು ಕಡ್ಡಾಯಗೊಳಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚಿಸಬೇಕು.

ಹೊಸ ಕಟ್ಟಡ ನಿರ್ಮಾಣ ಪರವಾನಗಿ ನೀಡುವಾಗ ವಾಹನ ನಿಲುಗಡೆ ಜಾಗ ಕಡ್ಡಾಯಗೊಳಿಸಬೇಕು. ಮುಖ್ಯ ರಸ್ತೆಗಳ ಬದಿಗಳಲ್ಲಿಸಾರ್ವಜನಿಕ ಶೌಚಾಲಯ

ಮತ್ತು ಮೂತ್ರಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು. ನಿಯೋಗದಲ್ಲಿಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ .ಎ.ಗಫಾರ್ , ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ , ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ , ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಸಂಚಾಲಕ ತುಕಾರಾಮ್ ಪಾತ್ರೋಟಿ, ಭಾಗ್ಯನಗರ ಪಟ್ಟಣದ ಆಂಜನೇಯ ಬೆದವಟ್ಟಿ, ನಾಗರಾಜ ದಾಣಿ, ಸಿದ್ದಪ್ಪ ಬಡಿಗೇರ್ , ರವಿ ಹಣವಾಳ, ಪಾಂಡುರಂಗ ಬೋಂದಾಡೆ ಉಪಸ್ಥಿತರಿದ್ದರು.

==

16-ಕೆಪಿಎಲ್ ವಿಠ್ಠಲ ಫೊಟೊ-25

ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿನಾನಾ ಸಂಘಟನೆಗಳಿಂದ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಹ್ಯಾಟಿ ಅವರಿಗೆ ಮನವಿ ಸಲ್ಲಿಸಲಾಯಿತು.