ಟೋಲ್ ಬಳಿಯ ಗೂಡಂಗಡಿ ತೆರವು

Contributed byVinayaka Naik P|Vijaya Karnataka
Vijay Karnataka
ಟೋಲ್ ಬಳಿಯ ಗೂಡಂಗಡಿ ತೆರವು

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ, ತಾಲೂಕಿನ ಹೆಬ್ಬಾಳು ಗ್ರಾಮದ ಟೋಲ್ ಪ್ಲಾಜಾದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಪ್ಲಾಜಾ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಐದು ವರ್ಷಗಳಿಂದ ಹಾಕಿದ್ದ ಹೋಟೆಲ್ , ಪೆಟ್ಟಿಗೆ ಅಂಗಡಿಗಳಿಗೆ ಮೂರ್ನಾಲ್ಕು ಬಾರಿ ನೋಟಿಸ್ ನೀಡಿದ್ದರು. ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ರಾಜಶೇಖರ್ ನೇತೃತ್ವದಲ್ಲಿಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.
---

ಫೋಟೋ: 16ಡಿವಿಜಿ ಗೂಡಂಗಡಿ