ಪೇಜ್ 8 ಲೀಡ್

Contributed byDHEERAJ K|Vijaya Karnataka
the gravity given by a project living in the big ocean
ತಿಮಿಂಗಿಲ

-ವಿಶ್ವದ ಅತ್ಯಂತ ದೊಡ್ಡ ಜೀವಿ
ತಿಮಿಂಗಿಲ ಸಾಗರದಲ್ಲಿವಾಸಿಸುವ ವಿಶ್ವದ ಅತ್ಯಂತ ದೊಡ್ಡ ಜೀವಿಯಾಗಿದೆ. ಅನೇಕರು ಇದನ್ನು ಮೀನು ಎಂದು ಭಾವಿಸುತ್ತಾರೆ. ಆದರೆ ತಿಮಿಂಗಿಲವು ಮೀನಲ್ಲ, ಅದೊಂದು ಸಸ್ತನಿ. ಸಾಮಾನ್ಯವಾಗಿ ಮೂರು ಮೀಟರ್ ಗಿಂತ ಹೆಚ್ಚು ಉದ್ದವಿರುವ ಜಲಚರಗಳನ್ನು ತಿಮಿಂಗಿಲಗಳೆಂದು ಕರೆಯಲಾಗುತ್ತದೆ. ಆದರೆ ಇದಕ್ಕೆ ಅಪವಾದವಾಗಿ ಕುಬ್ಜ ಸ್ಪಮ್ ರ್ ತಿಮಿಂಗಿಲ 2.7 ಮೀಟರ್ ಉದ್ದವಿದ್ದರೂ, ತನ್ನ ದೊಡ್ಡ ತಳಿಯ ಹೋಲಿಕೆಯಿಂದಾಗಿ ತಿಮಿಂಗಿಲ ಎಂದೇ ಕರೆಯಲ್ಪಡುತ್ತದೆ. ತಿಮಿಂಗಿಲಗಳು ಸೆಟಾಸಿಯಾ ವರ್ಗಕ್ಕೆ ಸೇರಿದೆ.

ಆವಾಸಸ್ಥಾನ: ಕ್ಯಾಸ್ಪಿಯನ್ ಮತ್ತು ಅರಲ್ ಸಮುದ್ರಗಳನ್ನು ಹೊರತುಪಡಿಸಿ, ತಿಮಿಂಗಿಲಗಳು ಸಮಭಾಜಕ ವೃತ್ತದಿಂದ ಧ್ರುವೀಯ ಮಂಜುಗಡ್ಡೆಗಳವರೆಗೆ ಭೂಮಿಯ ಎಲ್ಲಾಮಹಾಸಾಗರಗಳು ಮತ್ತು ಸಮುದ್ರಗಳಲ್ಲಿಕಂಡುಬರುತ್ತವೆ. ನೀರಿನಲ್ಲಿಜೀವಿಸಲು ಇವುಗಳ ರೆಕ್ಕೆಗಳು ಮತ್ತು ಬಾಲದ ಫ್ಲೂಕ್ ಗಳು ನೆರವಾಗುತ್ತವೆ. ಇವುಗಳಿಗೆ ಮೀನುಗಳಂತೆ ಕಿವಿರುಗಳು ಇರುವುದಿಲ್ಲ. ಶ್ವಾಸಕೋಶಗಳು ಇರುತ್ತವೆ. ಇವು ಉಸಿರಾಡಲು ನಿರಂತರವಾಗಿ ನೀರಿನ ಮೇಲ್ಮೈಗೆ ಬರಬೇಕಾಗುತ್ತದೆ. ಶ್ವಾಸಕೋಶದಿಂದ ಬಿಸಿಯಾದ ಗಾಳಿಯನ್ನು ಜೋರಾಗಿ ಹೊರಬಿಟ್ಟಾಗ, ಅದು ದೊಡ್ಡ ಚಿಮ್ಮುವಿಕೆಯಂತೆ ಕಣ್ಣಿಗೆ ಕಾಣಿಸುತ್ತದೆ.

ದೇಹದ ತಾಪಮಾನ ನಿಯಂತ್ರಣ: ನೀರು ಗಾಳಿಗಿಂತ ವೇಗವಾಗಿ ತಾಪಮಾನವನ್ನು ಹೀರಿಕೊಳ್ಳುವುದರಿಂದ ತಿಮಿಂಗಿಲಗಳು ತಮ್ಮ ದೇಹದ ತಾಪಮಾನವನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಣ್ಣ ತಿಮಿಂಗಿಲಗಳಲ್ಲಿಬ್ಲಬ್ಬರ್ ಎನ್ನುವ ಕೊಬ್ಬಿನ ಪದರವು ಚಳಿಯಿಂದ ರಕ್ಷಣೆ ನೀಡುತ್ತದೆ.

ತಿಮಿಂಗಿಲಗಳ ಎರಡು ಪ್ರಮುಖ ವರ್ಗ

1 ಬಲೀನ್ ತಿಮಿಂಗಿಲಗಳು: ಇವುಗಳಿಗೆ ಹಲ್ಲುಗಳಿರುವುದಿಲ್ಲ. ನೀರನ್ನು ಶೋಧಿಸಿ ಪ್ಲಾಂಕ್ಟನ್ ಮತ್ತು ಸಣ್ಣ ಮೀನುಗಳನ್ನು ತಿನ್ನಲು ಬಲೀನ್ ಎಂಬ ಫಲಕಗಳಿರುತ್ತವೆ.

2 ಹಲ್ಲುಳ್ಳ ತಿಮಿಂಗಿಲಗಳು: ಇವು ಚೂಪಾದ ಹಲ್ಲುಗಳನ್ನು ಹೊಂದಿದ್ದು, ಶಿಕಾರಿ ಮಾಡಿ ತಿನ್ನುತ್ತವೆ.

ವಿಭಿನ್ನ ಹೆಸರುಗಳುಳ್ಳ ತಿಮಿಂಗಿಲಗಳು

- ನೀಲಿ ತಿಮಿಂಗಿಲ ಜಗತ್ತಿನ ಅತ್ಯಂತ ದೊಡ್ಡ ಜೀವಿ.

- ಸ್ಪಮ್ ರ್ ತಿಮಿಂಗಿಲ ಅತ್ಯಂತ ಆಳವಾದ ಸಮುದ್ರಕ್ಕೆ ಧುಮುಕುವ ಸಾಮರ್ಥ್ಯ ಹೊಂದಿದೆ.

- ಓರ್ಕಾ ಅಥವಾ ಕಿಲ್ಲರ್ ವೇಲ್ ಸಮುದ್ರದ ದೊಡ್ಡ ಬೇಟೆಗಾರ.

- ಹಂಪ್ ಬ್ಯಾಕ್ ತಿಮಿಂಗಿಲ ನೀರಮೇಲೆ ಎಗರುವುದಕ್ಕೆ ಮತ್ತು ಸುಂದರ ಶಬ್ದಕ್ಕೆ ಪ್ರಸಿದ್ಧ.

- ಬೂದು ತಿಮಿಂಗಿಲ ದೀರ್ಘ ದೂರದ ವಲಸೆಗೆ ಹೆಸರುವಾಸಿ.

- ರೈಟ್ ತಿಮಿಂಗಿಲ ನಿಧಾನವಾಗಿ ಈಜುವ ಮತ್ತು ದಪ್ಪ ಬ್ಲಬ್ಬರ್ ಹೊಂದಿರುವ ತಳಿ.

- ಡ್ವಾಫ್ ರ್ ಸ್ಪಮ್ ರ್ ತಿಮಿಂಗಿಲ ಗಾತ್ರದಲ್ಲಿಸಣ್ಣದಾಗಿರುವ ಸ್ಪಮ್ ರ್ ತಿಮಿಂಗಿಲದ ತಳಿ.

ಧಿ-ಶಾರ್ಕ್ ಅಥವಾ ತಿಮಿಂಗಿಲ ಶಾರ್ಕ್ ನಿಜವಾದ ತಿಮಿಂಗಿಲವಲ್ಲ, ಅತ್ಯಂತ ದೊಡ್ಡ ಮೀನಿನ ತಳಿ.

ಅತಿದೊಡ್ಡ ಜೀವಿ: ನೀಲಿ ತಿಮಿಂಗಿಲ ಭೂಮಿಯ ಮೇಲೆ ಇದುವರೆಗೆ ಬಾಳಿದ ಅತ್ಯಂತ ದೊಡ್ಡ ಜೀವಿಯಾಗಿದೆ. ಬೃಹತ್ ಡೈನೋಸಾರ್ ಗಳಿಗಿಂತಲೂ ಇದು ದೊಡ್ಡದಾಗಿದೆ. ಇದರ ಉದ್ದ ಸುಮಾರು 30 ಮೀಟರ್ . ಸುಮಾರು 1.80 ಲಕ್ಷ ಕೆಜಿ ಅಂದರೆ ಸುಮಾರು 33 ಆನೆಗಳಿಗೆ ಸಮಾನವಾಗಿದೆ.

ಆನೆಯ ತೂಕದ ನಾಲಿಗೆ, ಕಾರಿನ ಗಾತ್ರದ ಹೃದಯ: ನೀಲಿ ತಿಮಿಂಗಿಲದ ನಾಲಿಗೆಯೊಂದೇ ಒಂದು ದೊಡ್ಡ ಆನೆಯಷ್ಟು ತೂಗುತ್ತದೆ. ಇದರ ಹೃದಯವು ಒಂದು ಸಣ್ಣ ಕಾರಿನ ಗಾತ್ರದಲ್ಲಿದ್ದು, ರಕ್ತನಾಳಗಳು ಎಷ್ಟೊಂದು ದಪ್ಪಗಿರುತ್ತವೆ ಎಂದರೆ ಸಣ್ಣ ಮಗು ಅದರೊಳಗೆ ಈಜಬಹುದು.

ಅರ್ಧ ಮಿದುಳು ಮಾತ್ರ ನಿದ್ರಿಸುತ್ತದೆ: ತಿಮಿಂಗಿಲಗಳು ಸಂಪೂರ್ಣವಾಗಿ ನಿದ್ರಿಸಿದರೆ ನೀರಿನಲ್ಲಿಮುಳುಗಿ ಉಸಿರುಗಟ್ಟಿ ಸತ್ತುಹೋಗುತ್ತವೆ. ಆದ್ದರಿಂದ ನಿದ್ರಿಸುವಾಗ ಇವುಗಳ ಮಿದುಳಿನ ಅರ್ಧ ಭಾಗ ಮಾತ್ರ ವಿಶ್ರಾಂತಿ ಪಡೆಯುತ್ತದೆ, ಇನ್ನರ್ಧ ಭಾಗ ಸಾಗರದ ಮೇಲ್ಮೈಗೆ ಬಂದು ಉಸಿರಾಡಲು ಎಚ್ಚರವಾಗಿರುತ್ತದೆ.

ಮೈಲಿಗಳ ದೂರ ಕೇಳಿಸುವ ಗಾಯನ: ತಿಮಿಂಗಿಲಗಳು ವಿಶೇಷವಾಗಿ ಹಂಪ್ ಬ್ಯಾಕ್ ವೇಲ್ ಪರಸ್ಪರ ಸಂವಹನ ನಡೆಸಲು ಹಾಡುಗಳನ್ನು ಹಾಡುತ್ತವೆ. ಈ ಶಬ್ದವು ನೀರೊಳಗಿನ ನೂರಾರು ಮೈಲಿಗಳ ದೂರದವರೆಗೆ ಕೇಳಿಸುತ್ತದೆ.

200 ವರ್ಷಗಳ ಆಯುಷ್ಯ: ಬೋಹೆಡ್ ತಿಮಿಂಗಿಲ ಸುಮಾರು 200 ವರ್ಷಗಳಿಗಿಂತ ಹೆಚ್ಚು ಕಾಲ ಜೀವಿಸಬಲ್ಲದು.

ವಿಶ್ವದ ಅತಿದೊಡ್ಡ ಮೆದುಳು: ಸ್ಪಮ್ ರ್ ವೇಲ್ (ಖpಛ್ಟಿಞ Wha್ಝಛಿ) ಪ್ರಾಣಿ ಸಾಮ್ರಾಜ್ಯದಲ್ಲೇ ಅತಿ ದೊಡ್ಡ ಮಿದುಳನ್ನು ಹೊಂದಿರುವ ಜೀವಿ. ಇದರ ಮಿದುಳು ಸುಮಾರು 9 ಕೆಜಿ ತೂಗುತ್ತದೆ.

ಪರಿಸರ ಸಮತೋಲನದಲ್ಲಿಇವುಗಳ ಪಾತ್ರ: ತಿಮಿಂಗಿಲಗಳು ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಅಪಾರ ಕೊಡುಗೆ ನೀಡುತ್ತವೆ. ಜೀವಿತಾವಧಿಧಿಯಲ್ಲಿಅಪಾರ ಪ್ರಮಾಣದ ಕಾರ್ಬನ್ ಅನ್ನು ಇವು ತಮ್ಮ ದೇಹದಲ್ಲಿಶೇಖರಿಸುತ್ತವೆ. ಇವು ಸತ್ತಾಗ ಸಾಗರದ ತಳಕ್ಕೆ ಮುಳುಗಿ ಸಾವಿರಾರು ವರ್ಷಗಳ ಕಾಲ ಆ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರದಂತೆ ತಡೆಯುತ್ತವೆ.