ನಾನ್ ಸಿನಿಮಾ 2

Contributed bybabitha.salian@timesgroup.com|Vijaya Karnataka
a story of rural kids fun mud run festival as a sport
ಹಾರಣ್ಣ ಓಡಣ್ಣ (ಸ್ಲಗ್ )

ಸಿಗ್ನಲ್ ಸಿಗದ ಊರಿನ ಮಣ್ಣಿನ ಮಕ್ಕಳು
-ಕೆಸರಿನಲ್ಲಿಅರಳಿದ ಹಳ್ಳಿಗರ ಸಾಮರಸ್ಯ

ಇಂಟ್ರೊ

ನಗರದೊಡಲಿನ ಜೆನ್ ಜಿ, ಆಲ್ಫಾ, ಮಿಲೇನಿಯಲ್ಸ್ ಮಂದಿಯ ನಿತ್ಯದ ಬದುಕಿನ ಚಿತ್ರಗಳು ನಮ್ಮ ಕಣ್ಮುಂದಿವೆ. ಆದರೆ, ನೆಟ್ವರ್ಕೇ ಕಾಣಸಿಗದ ಊರೊಳಗೆ ಈ ಪೀಳಿಗೆಗಳು ಹೇಗೆ ಅರಳುತ್ತಿರಬಹುದು?

ಕೀರ್ತಿ ಕೊಲ್ಗಾರ್

ತೀರ್ಥಹಳ್ಳಿಯ ಕುಪ್ಪಳಿ ಸನಿಹದ ನಗರವಳ್ಳಿ ಎಂಬ ನೆಟ್ವರ್ಕಿನ ಕಡ್ಡಿಗಳೇ ಸಿಗದ ಊರಿನಲ್ಲಿಇತ್ತೀಚೆಗೆ ಜೆನ್ ಜಿ, ಆಲ್ಫಾ, ಮಿಲೇನಿಯಲ್ಸ್ ಮಂದಿ ಕೆಸರಿನ ಗದ್ದೆಯೊಳಗೆ ವಿವಿಧ ಕ್ರೀಡೆಗಳಲ್ಲಿಮೈಮರೆತಿದ್ದರು. ಗ್ರಾಮೀಣ ಬದುಕಿನಲ್ಲಿಬಾಂಧವ್ಯ, ಸಾಮರಸ್ಯವನ್ನು ಹಸಿರಾಗಿಸಲು ಅಲ್ಲಿನಡೆದ ಕೆಸರು ಗದ್ದೆ ಕ್ರೀಡೋತ್ಸವ ಎಲ್ಲರನ್ನೂ ಹರ್ಷದ ಕಡಲಿನಲ್ಲಿತೇಲಿಸಿತು.

ಸ್ವಲ್ಪ ಸ್ವಲ್ಪ ಪುರುಸೊತ್ತು ಕೊಟ್ಟು ಸುರಿಯುತ್ತಿದ್ದ ಪುಷ್ಯ ಮಳೆ. ಇದನ್ನೆಲ್ಲಲೆಕ್ಕಿಸದೆ ಕೆಸರಿನ ಓಟದ ಸ್ಪರ್ಧೆಗಳಲ್ಲಿಊರಿನ ಮಂದಿ ಓಡಿದರು, ಎಡವಿದರು, ಮೇಲೆದ್ದರು. ಹಾಳೆ ಸೋಗೆ ಎಳೆದು ಹಗುರಾದರು. ಹಗ್ಗ ಜಗ್ಗಾಡಿ ಭುಜಬಲ ಪ್ರದರ್ಶಿಸಿದರು. ಹಾರಣ್ಣ-ಓಡಣ್ಣ ಆಟದ ಖುಷಿಯಲ್ಲಿಮೈಮರೆತರು. ಕಾಲ್ಚೆಂಡಿನ ಹಿಂದೋಡಿ ಕೆಸರು ಮಣ್ಣಿನ ಮೆಸ್ಸಿಯಾದರು. ಇದನ್ನೆಲ್ಲಆಡುವಾಗ ಯಾರಿಗೂ ಈತ ಆ ಊರು, ನಾನು ಈ ಊರು, ಬಡವ, ಶ್ರೀಮಂತ, ಜಾತಿ ಗೀತಿ ಯಾವುದೂ ನೆನಪಾಗಲಿಲ್ಲ. ಎಲ್ಲರೊಳಗೆ ಒಂದಾಗಿ ಬಾಳಬೇಕೆನ್ನುವ ಸಾಮರಸ್ಯದ ಜೀವನತತ್ವವನ್ನು ಈ ಕ್ರೀಡೋತ್ಸವ ಸಾರಿತ್ತು.

ಆಟದಲ್ಲಿಗೆದ್ದು ಪೋಡಿಯಂ ಏರಿದ ಇವರಿಗೆಲ್ಲಸಿಕ್ಕ ಮೆಡಲ್ಲುಗಳೂ ಅಷ್ಟೇ ಅವಿಸ್ಮರಣೀಯ; ಗೊಬ್ಬರದ ಬುಟ್ಟಿ, ಕತ್ತಿ, ಹಾರೆ, ಟಾರ್ಪಲ್ಲು, ಅಕ್ಕಿ, ಧಾನ್ಯಗಳ ಬಹುಮಾನ. ದಂಡೆ ಮೇಲಿಂದ ತಾಯಂದಿರು ಕರೆದು ಕರೆದು ದಣಿದರೂ, ಆ ಮಕ್ಕಳು ಕೆಸರಿನಿಂದ ಮೇಲೆದ್ದು ಬರುತ್ತಿರಲಿಲ್ಲ. ಬಹುಶಃ ಮರುದಿನ ಕೆಲವರಿಗೆ ಕೆಮ್ಮು, ಶೀತ, ಗಂಟಲು ನೋವು, ಕೈಕಾಲು ನೋವು ಕಾಡಿ ಶಾಲೆಗೆ ಚಕ್ಕರ್ ಆಗಿರಬಹುದು. ಒಂದು ದಿನದ ಮಟ್ಟಿಗೆ ನಾಲ್ಕು ಗೋಡೆ ನಡುವಿನ ತರಗತಿಯ ಪಾಠ ಮಿಸ್ಸಾದರೇನಂತೆ, ಬದುಕಿನಲ್ಲಿಎಂದಿಗೂ ಮರೆಯದ ಶ್ರೇಷ್ಠ ಪಾಠವನ್ನು ಈ ಕ್ರೀಡೋತ್ಸವ ಕಲಿಸಿತು.

ಕೆಸರಲ್ಲಿಆಡುವುದು, ಬೆಟ್ಟ ಹತ್ತುವುದು, ಗಂಟೆಗಟ್ಟಲೆ ನಡೆಯುವುದು, ಅರ್ಧರ್ಧ ಗಂಟೆ ಬಸ್ಸಿಗಾಗಿ ಕಾಯುವುದು ಇವ್ಯಾವುದೂ ಈ ಮಕ್ಕಳಿಗೆ ವ್ಯರ್ಥಾಲಾಪಗಳಲ್ಲ. ಅಸಾಧ್ಯ ತಾಳ್ಮೆ, ಸಂಯಮ, ವಿವೇಚನೆಗಳನ್ನು ಹರಳುಗಟ್ಟಿಸಿ, ವಿಲ್ ಪವರ್ ಸೃಷ್ಟಿಸಲು ಇವೇ ನೈಜ ಮೆಟ್ಟಿಲುಗಳು. ಮುಂದೊಂದು ದಿನ ಬದುಕಿನಲ್ಲಿಏನೇ ಏರಿಳಿತಗಳಾದರೂ ‘ಆ ಕಷ್ಟಗಳ ಮುಂದೆ ಇದೇನ್ ಮಹಾ ದೊಡ್ಡದು’ ಎಂದನಿಸಿ ಕುಗ್ಗದೆ, ಜಗ್ಗದೆ ಮುನ್ನಡೆಯಲು ಇಂಥ ಚಟುವಟಿಕೆಗಳು ಸದಾಪ್ರೇರಣೆ.