-ಪಂಚಮಿ ಬಾಕಿಲಪದವುಇಂಟ್ರೊ: ಮುತ್ತಿನ ಆಭರಣಗಳು ಆಧುನಿಕ ವಿನ್ಯಾಸಗಳೊಂದಿಗೆ ಮೋಡಿ ಮಾಡಿವೆ.
ಸ್ಲಗ್ : ಬೆಡಗು ಬಿನ್ನಾಣ
ಯಾವತ್ತಿಗೂ ಕಳೆ ಕಳೆದುಕೊಳ್ಳದ ಮುತ್ತಿನ ಒಡವೆಗಳೆಂದರೆ ಎಲ್ಲಾವಯೋಮಾನದ ಹೆಣ್ಣುಮಕ್ಕಳಿಗೂ ಇಷ್ಟ. ಸಾಂಪ್ರದಾಯಿಕ ಮುತ್ತಿನ ಆಭರಣಗಳು ಈಗ ಒಂದಷ್ಟು ಹೊಸತನದೊಂದಿಗೆ ಕಂಗೊಳಿಸುತ್ತಿದ್ದು, ಆಧುನಿಕ ಫ್ಯಾಷನ್ ಗೆ ಪೂರಕವಾಗಿ ಹೊಸ ವಿನ್ಯಾಸದೊಂದಿಗೆ ಟ್ರೆಂಡಿಂಗ್ ನಲ್ಲಿವೆ. ಇತ್ತೀಚಿನ ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ನಟಿ ಉಮಾ ಥರ್ಮನ್ ಧರಿಸಿದ್ದ ಮುತ್ತಿನ ನೆಕ್ಲೇಸ್ ಗಮನ ಸೆಳೆದಿದ್ದು, ಮುತ್ತಿನ ಆಭರಣಗಳ ಟ್ರೆಂಡ್ ಗೆ ಇದು ಮತ್ತಷ್ಟು ಪುಷ್ಟಿ ನೀಡಿದೆ.
ವಿಶೇಷ ಆಕರ್ಷಣೆ
ಮುತ್ತಿನ ಆಭರಣಗಳಾದ ಓಲೆಗಳು, ನೆಕ್ಲೇಸ್ ಗಳು ವಿಭಿನ್ನ ಮೆರುಗು ನೀಡುತ್ತವೆ. ಓಲೆಯಲ್ಲಿರುವ ಮುತ್ತುಗಳು ಹೊಳಪು ನೀಡುವುದರ ಜತೆಗೆ, ಹೂವಿನ ದಳದಂತಿರುವ ರಚನೆ ಮುಖದ ಅಂದ ಹೆಚ್ಚಿಸುತ್ತವæ. ತೂಗುವ ವಿನ್ಯಾಸ ಆಕರ್ಷಕವಾಗಿ ಕಾಣುತ್ತವೆ. ಲೇಯರ್ಡ್ ಪಲ್ ರ್ ನೆಕ್ಲೇಸ್ , ಸಿಂಗಲ್ ಚೋಕರ್ ಗಳು ಎಲ್ಲಾಉಡುಪಿಗೂ ಎಲಿಗೆಂಟ್ ಹಾಗೂ ಮಾಡರ್ನ್ ಲುಕ್ ನೀಡುತ್ತವೆ.
ಸಂಪ್ರದಾಯದ ಸಮ್ಮಿಲನ
ಈ ಆಭರಣಗಳು ಹಳೆಯ ಸಂಪ್ರದಾಯ ಮತ್ತು ಹೊಸ ಸಂಪ್ರದಾಯ ಎರಡಕ್ಕೂ ಅನ್ವಯಿಸುವಂತಿವæ. ಆಭರಣದಲ್ಲಿರುವ ಮುತ್ತುಗಳು ಸಾಂಪ್ರದಾಯಿಕ ಸಂಕೇತ. ಡ್ರಾಪ್ , ಚೋಕರ್ ಶೈಲಿಯ ವಿನ್ಯಾಸ ಆಧುನಿಕ ಫ್ಯಾಷನ್ ಗೆ ಹೊಂದಿಕೆಯಾಗುತ್ತದೆ. ಜುವೆಲ್ಲರಿ ವಿನ್ಯಾಸಗಳಲ್ಲಿಮುತ್ತುಗಳನ್ನು ಕೇವಲ ಚಿನ್ನದೊಂದಿಗೆ ಮಾತ್ರವಲ್ಲ, ಬಣ್ಣಬಣ್ಣದ ರತ್ನಗಳು, ಡೈಮಂಡ್ , ಬೆಳ್ಳಿ ಹಾಗೂ ಮಿಕ್ಸ್ ಡ್ ಮೆಟಲ್ ಗಳೊಂದಿಗೆ ಜೋಡಿಸಲಾಗುತ್ತಿದೆ. ಇದು ಯುವ ಮನಗಳನ್ನು ಹೆಚವ್ಚು ಸೆಳೆಯುತ್ತವೆ.
ಪರ್ಪೆಕ್ಟ್ ಮ್ಯಾಚ್
ಸೀರೆ, ಲೆಹೆಂಗಾ, ಸಲ್ವಾರ್ ನಂತಹ ಸಾಂಪ್ರಾದಾಯಿಕ ಉಡುಗೆಗಳಿಗೂ, ಓವರ್ ಸೈಜ್ ಬ್ಲೇಜರ್ , ವೈಟ್ ಶರ್ಟ್ , ಡೆನಿಮ್ , ಸ್ವಿಮ್ ವೇರ್ ನಂತಹ ಪಾಶ್ಚಾತ್ಯ ಉಡುಪುಗಳಿಗೂ ಮುತ್ತಿನ ಆಭರಣಗಳು ಮ್ಯಾಚ್ ಆಗುತ್ತವೆ. ಹಬ್ಬ, ಮದುವೆ, ನಿಶ್ಚಿತಾರ್ಥ, ಕಚೇರಿ ಕಾರ್ಯಕ್ರಮ ಅಥವಾ ಗೆಟ್ ಟುಗೆದರ್ ಹೀಗೆ ಎಲ್ಲಸಂದರ್ಭಗಳಲ್ಲಿಯೂ ಎಲ್ಲಾಉಡುಗೆಗಳಿಗೂ ಇದನ್ನು ಧರಿಸಬಹುದು.
ಆರಾಮ ಅನುಭವ
ಈ ಆಭರಣಗಳನ್ನು ಕಡಿಮೆ ತೂಕವಿರುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ದಿನವಿಡೀ ಧರಿಸಿದರೂ ಹೆಚ್ಚು ಒತ್ತಡ ಬೀಳುವುದಿಲ್ಲ. ಮುತ್ತುಗಳ ಮೇಲ್ಮೈ ನಯವಾಗಿರುವುದರಿಂದ ಕಿರಿಕಿರಿ ಉಂಟಾಗುವುದಿಲ್ಲ. ಇದೊಂದೇ ಆಭರಣ ಧರಿಸಿಯೂ ರಿಚ್ ಲುಕ್ ನಲ್ಲಿರಬಹುದು. ಆರಾಮ ಅನುಭವಕ್ಕೆ ಇದು ಉತ್ತಮ ಆಯ್ಕೆ. ವರ್ಷಗಳು ಉರುಳಿದರೂ, ಮುತ್ತಿನ ಆಭರಣಗಳಿಗೆ ಬೇಡಿಕೆಯಿರುವ ಕಾರಣ ದೀರ್ಘಕಾಲ ಇವುಗಳನ್ನು ಉಪಯೋಗಿಸಬಹುದು. ಹಾಗಾಗಿ ಹುಟ್ಟುಹಬ್ಬ, ವಾರ್ಷಿಕೋತ್ಸವ ಅಥವಾ ವಿಶೇಷ ಸಂದರ್ಭಗಳಲ್ಲಿಉಡುಗೊರೆಯಾಗಿ ನೀಡಲು ಮುತ್ತಿನ ಆಭರಣಗಳು ಹೆಚ್ಚು ಸೂಕ್ತ.