ಶ್ರೀಶಾ ಸೌಹಾರ್ದ ಕೋ-ಆಪ್ ಸೊಸೈಟಿ ವತಿಯಿಂದ 27ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಮಂಗಳಾದೇವಿ ರಾಮಕೃಷ್ಣ ಮಠದ ಸಭಾಂಗಣದಲ್ಲಿಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಗಿಲ್ ಯುದ್ಧದಲ್ಲಿಹುತಾತ್ಮರಾದ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅಮರ ಸೇನಾನಿಗಳಿಗೆ ಗೌರವ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಾತನಾಡಿ, ‘‘ಇಂದಿನ ದಿನ ಭಾರತೀಯರ ಪಾಲಿಗೆ ಅತೀ ಪವಿತ್ರವಾದದ್ದು. ಮೋಸದಿಂದ ಕಾರ್ಗಿಲ್ ಗಡಿಯೊಳಗೆ ನುಗ್ಗಿದ ಪಾಕಿಸ್ತಾನದ ಸೈನಿಕರನ್ನು ಗಡಿಯಾಚೆಗೆ ಹೊರಗಟ್ಟಿ ದೇಶದ ಗಡಿಯನ್ನು ಮರಳಿ ಪಡೆದ ದಿನ. ನಮ್ಮ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ದಿನ. ಹೊರಗಿನ ಶತ್ರುಗಳು ದೇಶದೊಳಗೆ ಪ್ರವೇಶಿಸದಂತೆ ಸೈನಿಕರು ಕಾಯ್ದರೆ ದೇಶದೊಳಗಿನ ಶತ್ರುಗಳ ಬಗ್ಗೆ ಎಚ್ಚರ ವಹಿಸಬೇಕಾದ್ದು ನಮ್ಮ ಕರ್ತವ್ಯ,’’ ಎಂದರು.
ಮಾಜಿ ಎಂಎಲ್ ಸಿ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ‘‘ದೇಶದ ಭದ್ರತೆಯ ದೃಷ್ಟಿಯಿಂದ ಎಲ್ಲರೂ ಸೈನಿಕರಾಗಿ ಒಳ ಶತ್ರುಗಳಿಂದ ರಕ್ಷಿಸಬೇಕು. ದೇಶ ಮೊದಲು ಎಂಬುದು ಮೊದಲು ಮನದಟ್ಟಾಗಬೇಕು. ಸೈನಿಕರ ತ್ಯಾಗ, ಬಲಿದಾನಗಳ ಬಗ್ಗೆ ಮಕ್ಕಳಲ್ಲಿಅರಿವು ಮೂಡಿಸಬೇಕು,’’ ಎಂದರು.
ನಿವೃತ್ತ ಕರ್ನಲ್ ಎನ್ .ಎಸ್ .ಭಂಡಾರಿ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕಿ ಭಾರತಿ ಜಿ.ಭಟ್ ಸಾಂದರ್ಭಿಕವಾಗಿ ಮಾತನಾಡಿದರು. ಇದೇ ಸಂದರ್ಭ ಕಾರ್ಗಿಲ್ ಯುದ್ಧದಲ್ಲಿಭಾಗವಹಿಸಿದ್ದ ಯೋಧರಾದ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ.ಅಮೀನ್ , ಕರ್ನಲ್ ಪದ್ಮನಾಭ ಪ್ರಭು ಹಾಗೂ ಕಮೊಡೋರ್ ಅತುಲ್ ಕುಮಾರ್ ರಸ್ತೋಗಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಡಾ.ಸಿಂಧು ಭಟ್ ನಿರೂಪಿಸಿ, ತಯಾರಿಸಿದ ಕಾರ್ಗಿಲ್ ಯುದ್ಧ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಶ್ರೀಶಾ ಸೌಹಾರ್ದ ಸೊಸೈಟಿ ಅಧ್ಯಕ್ಷ ಎಂ.ಎಸ್ .ಗುರುರಾಜ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸೊಸೈಟಿ ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು. ಸೊಸೈಟಿಯ ರಂಜನಾ ಹೆಗಡೆ ಮತ್ತು ಕುಸುಮಾ ಐತಾಳ್ ಪ್ರಾರ್ಥಿಸಿದರು. ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಫೊಟೋ: 27ಎಂ-ಕಾರ್ಗಿಲ್ 1
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅವರು ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿದರು.
ಫೊಟೋ: 27ಎಂ-ಕಾರ್ಗಿಲ್ 2
ಕಾರ್ಗಿಲ್ ಯುದ್ಧದಲ್ಲಿಭಾಗವಹಿಸಿದ್ದ ಯೋಧರಾದ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ.ಅಮೀನ್ , ಕರ್ನಲ್ ಪದ್ಮನಾಭ ಪ್ರಭು ಹಾಗೂ ಕಮೊಡೋರ್ ಅತುಲ್ ಕುಮಾರ್ ರಸ್ತೋಗಿ ಅವರನ್ನು ಸನ್ಮಾನಿಸಲಾಯಿತು.