ಕುಮ್ಮಾಯಮ್

Contributed bybabitha.salian@timesgroup.com|Vijaya Karnataka
healthy kummayam recipe festive sweet
ಕುಮ್ಮಾಯಮ್

ತಮಿಳುನಾಡಿನಲ್ಲಿಸೌರ ಆಷಾಢ ಅಥವಾ ಆಡಿ ಮಾಸದ ಮೊದಲ ದಿನದಿಂದಲೇ ಹಬ್ಬಗಳ ಸಡಗರ. ಈ ವೇಳೆ ಅಲ್ಲಿನೈವೇದ್ಯಗಳ ವೈವಿಧ್ಯವನ್ನೇ ಕಾಣಬಹುದು. ಅವುಗಳಲ್ಲಿಕುಮ್ಮಾಯಮ… ಕೂಡ ಒಂದು. ಆರೋಗ್ಯಕರವಾಗಿರುವ ಇದು ಕಡಿಮೆ ಸಮಯದಲ್ಲಿತಯಾರಾಗುವ ಸ್ವಾದಿಷ್ಟ ಸಿಹಿ ತಿನಿಸು.
ಸಾಮಗ್ರಿ: ಉದ್ದಿನ ಬೇಳೆ-1 ಕಪ್ , ಹೆಸರುಬೇಳೆ-ಕಾಲು ಕಪ್ , ಅಕ್ಕಿ-ಕಾಲು ಕಪ್ , ಬೆಲ್ಲ-1 ಕಪ್ , ತುಪ್ಪ-ಅರ್ಧ ಕಪ್ , ದ್ರಾಕ್ಷಿ ಗೋಡಂಬಿ-12.

ವಿಧಾನ: ಅಕ್ಕಿ, ಬೇಳೆಗಳನ್ನು ಬಿಡಿಬಿಡಿಯಾಗಿ ಡ್ರೈರೋಸ್ಟ್ ಮಾಡಿ ನುಣ್ಣಗೆ ಪುಡಿ ಮಾಡಿ. ಬೆಲ್ಲಕ್ಕೆ ಎರಡೂವರೆ ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿಟ್ಟು ಕರಗಿಸಿ. ಬಾಣಲೆಗೆ ಕಾಲು ಕಪ್ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿಅಣಿಮಾಡಿದ ಪುಡಿಯನ್ನು ಹಾಕಿ ನಾಲ್ಕೈದು ನಿಮಿಷ ಹುರಿದು ಬೆಲ್ಲದ ನೀರು ಸೇರಿಸಿ ಗಂಟಾಗದಂತೆ ತಿರುವುತ್ತಿರಿ. ಈ ಮಿಶ್ರಣ ಬೆಂದು ತಳ ಬಿಡುವಾಗ ಉಳಿದ ತುಪ್ಪ, ದ್ರಾಕ್ಷಿ, ಗೋಡಂಬಿ ಸೇರಿಸಿ ಚೆನ್ನಾಗಿ ಬೆರೆಸಿದರೆ ಪರಿಮಳಯುಕ್ತ ಕುಮ್ಮಾಯಮ್ ರೆಡಿ.