ಜುಲೈ 29 ಹಿಸ್ಟರಿ ಮೆಲುಕು

Contributed byDHEERAJ K|Vijaya Karnataka
nasa establishment on july 29 a day that changed the course of space exploration
ನಾಸಾ ಸ್ಥಾಪನೆ

ಜುಲೈ 29, 1958
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಸ್ಥಾಪನೆ ಬಾಹ್ಯಾಕಾಶ ತಂತ್ರಜ್ಞಾನದ ಇಇತಿಹಾಸದಲ್ಲೇ ಪ್ರಮುಖ ಮೈಲಿಗಲ್ಲು. 1958 ಜುಲೈ 29ರಂದು ಅಮೆರಿಕದ ಅಧ್ಯಕ್ಷ ಡ್ವೈಟ್ ಡಿ. ಐಸನ್ ಹೋವರ್ ‘ನ್ಯಾಷನಲ್ ಏರೋನಾಟಿP್ಸ… ಅಂಡ್ ಸ್ಪೇಸ್ ಆಕ್ಟ್’ ಶಾಸನಕ್ಕೆ ಸಹಿ ಹಾಕುವ ಮೂಲಕ ‘ನ್ಯಾಷನಲ್ ಏರೋನಾಟಿP್ಸ… ಅಂಡ್ ಸ್ಪೇಸ್ ಅಡ್ಮಿನಿಸ್ಪ್ರೇಷನ್ ’ ಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸಿದರು.

ಈ ಐತಿಹಾಸಿಕ ನಿರ್ಧಾರದ ಹಿನ್ನೆಲೆಯಲ್ಲಿಶೀತಲ ಸಮರದ ತೀವ್ರ ಪೈಪೋಟಿ ಅಡಗಿತ್ತು. 1957ರ ಅಕ್ಟೋಬರ್ ತಿಂಗಳಿನಲ್ಲಿಸೋವಿಯತ್ ಒಕ್ಕೂಟವು ಜಗತ್ತಿನ ಮೊದಲ ಕೃತಕ ಉಪಗ್ರಹವಾದ ‘ಸ್ಪುಟ್ನಿಕ್ 1’ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಈ ಘಟನೆಯು ಅಮೆರಿಕದಲ್ಲಿದೊಡ್ಡ ತಲ್ಲಣವನ್ನು ಸೃಷ್ಟಿಸಿತು. ತಂತ್ರಜ್ಞಾನ ಮತ್ತು ತನಿಖಾ ಕ್ಷೇತ್ರದಲ್ಲಿತಾನು ಹಿಂದೆ ಬೀಳುತ್ತಿದ್ದೇನೆ ಎಂಬ ಭಯ ಹಾಗೂ ರಾಷ್ಟ್ರೀಯ ಭದ್ರತೆಯ ಕಾಳಜಿಯು ಅಮೆರಿಕದ ರಾಜಕೀಯ ನಾಯಕರನ್ನು ತೀವ್ರವಾಗಿ ಆಲೋಚಿಸುವಂತೆ ಮಾಡಿತು. ಈ ಪರಿಸ್ಥಿತಿಯನ್ನು ಎದುರಿಸಲು ಬಲವಾದ ಮತ್ತು ಸುಸಂಘಟಿತ ಸಂಸ್ಥೆಯ ಅಗತ್ಯವಿತ್ತು.

ಆ ಸಮಯದವರೆಗೆ ಅಮೆರಿಕದ ಬಾಹ್ಯಾಕಾಶ ಮತ್ತು ವಿಮಾನಯಾನ ಸಂಶೋಧನೆಗಳನ್ನು ಸಾಂಪ್ರದಾಯಿಕ ‘ನ್ಯಾಷನಲ್ ಅಡ್ವೈಸರಿ ಕಮಿಟಿ ಫಾರ್ ಏರೋನಾಟಿP್ಸ…’ ಸಂಸ್ಥೆಯು ನಿರ್ವಹಿಸುತ್ತಿತ್ತು. ಆದರೆ ಸೈನಿಕ ಯತ್ನಗಳಿಂದ ಹೊರತಾದ, ಕೇವಲ ಶಾಂತಿಯುತ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ಹೊಸ ನಾಗರಿಕ ಸಂಸ್ಥೆಯನ್ನು ರೂಪಿಸಲು ಅಧ್ಯಕ್ಷ ಐಸನ್ ಹೋವರ್ ನಿರ್ಧರಿಸಿದರು. ಇದರ ಫಲವಾಗಿ 1958ರ ಜುಲೈ 29ರಂದು ಶಾಸನ ಅಂಗೀಕಾರಗೊಂಡು, ಅದೇ ವರ್ಷದ ಅಕ್ಟೋಬರ್ 1ರಿಂದ ನಾಸಾ ತನ್ನ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹಳೆಯ ಏರೋನಾಟಿP್ಸ… ಸಮಿತಿಯ ಸಕಲ ಸಂಪನ್ಮೂಲಗಳು ಹಾಗೂ ಸಾವಿರಾರು ನೌಕರರು ನಾಸಾದ ತೆಕ್ಕೆಗೆ ಸೇರ್ಪಡೆಯಾದರು.

ನಾಸಾದ ಸ್ಥಾಪನೆಯು ಬಾಹ್ಯಾಕಾಶ ಸ್ಪರ್ಧೆಗೆ ಹೊಸ ಚೇತನ ನೀಡಿತು. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರೊಜೆಕ್ಟ್ ಮರ್ಕ್ಯುರಿಯಿಂದ ಹಿಡಿದು, ಚಂದ್ರನ ಮೇಲೆ ಮಾನವನನ್ನು ಇಳಿಸಿದ ಪ್ರಸಿದ್ಧ ಅಪೊಲೊ ಯೋಜನೆಗಳು, ಬಾಹ್ಯಾಕಾಶ ನೌಕೆಗಳು ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತಹ ಮಹಾನ್ ಸಾಧನೆಗಳಿಗೆ ಈ ಸಂಸ್ಥೆಯು ಅಡಿಪಾಯ ಹಾಕಿತು.