ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ನಗರದಲ್ಲಿಚರಂಡಿ ದುರ್ನಾತ ಬೀರುತ್ತಿದ್ದರೂ ಪುರಸಭೆ ಮತ್ತು ತಾಲೂಕಾಡಳಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ಪಟ್ಟಣದ ವಾರ್ಡ್ ನಂ.6 ಡಾ.ಅಂಬೇಡ್ಕರ್ ನಗರದ ರಸ್ತೆ ಹಾಗೂ ಚರಂಡಿ ಸಂಪೂರ್ಣ ಹಾಳಾಗಿದೆ. ಚರಂಡಿ ವ್ಯವಸ್ಥೆ ಸರಿಯಲ್ಲಿದ ಕಾರಣ ತ್ಯಾಜ್ಯ ನೀರು ಒಂದೇ ಕಡೆ ನಿಂತು ದುರ್ನಾತ ಬೀರುತ್ತಿದೆ. ಇದ್ದರಿಂದ ಸೊಳ್ಳೆ, ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಎದುರಾಗುವ ಭೀತಿ ಉಂಟಾಗಿದೆ ಎಂದು ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಬಸವರಾಜ ಮೈಲ್ಲಮ್ಮನವರ ಮಾತನಾಡಿ, ಅಂಬೇಡ್ಕರ ನಗರದಲ್ಲಿರಸ್ತೆ ಮತ್ತು ಚರಂಡಿಗಳನ್ನು ದುರಸ್ಥಿ ತುಂಭಾ ಅವಶ್ಯವಿದೆ. ಚರಂಡಿಗಳು ತುಂಬಿ ಹರಿದು ಗಬ್ಬೆದ್ದು ನಾರುತ್ತಿದೆ. ಸರಿಯಾದ ರಸ್ತೆ ಇಲ್ಲಾ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ತಾಲೂಕಾ ಆಡಳಿತ ಮತ್ತು ಅಧಿಕಾಗಳು ವಾರ್ಡಿಗೆ ಭೇಟಿ ನೀಡಿ, ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
17ಎಸ್ ವಿಆರ್ 1
ಸವಣೂರು ಪಟ್ಟಣದ ಡಾ.ಬಿ.ಆರ್ .ಅಂಬೇಡ್ಕರ್ ನಗರದಲ್ಲಿರಸ್ತೆಯ ಮೇಲೆ ನಿಂತ ಚರಂಡಿ ನೀರು.