ವಿದ್ಯಾ ನವೀನ್ ಸಾಂಪ್ರದಾಯಿಕ ಸೀರೆ ಯಾವತ್ತಿಗೂ ತನ್ನ ಕಳೆ ಕಳೆದುಕೊಳ್ಳುವುದಿಲ್ಲ. ಎಲ್ಲರಿಗೂ ಒಪ್ಪುವ ಏಕೈಕ ಉಡುಗೆ ಇದು. ಆದರೆ ವ್ಯಕ್ತಿತ್ವಕ್ಕೆ ಅನುಗುಣವಾಗಿ ಇದನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಸುಂದರವಾಗಿ ಕಾಣಿಸಬಹುದು. ದೇಹದ ಆಕಾರಕ್ಕೆ ಹೊಂದುವ ಫ್ಯಾಬ್ರಿಕ್ , ಪ್ರಿಂಟ್ ಮತ್ತು ಬಾರ್ಡರ್ ಆಯ್ಕೆ ಮಾಡುವುದು ಮುಖ್ಯ.
ಎತ್ತರ ಕಡಿಮೆ ಇದ್ದರೆ: ಸಣ್ಣ ಬಾರ್ಡರ್ , ಸಣ್ಣ ಪ್ರಿಂಟ್ ಹಾಗೂ ಲೈಟ್ ವೇಟ್ ಫ್ಯಾಬ್ರಿಕ್ ಗಳನ್ನು ಆಯ್ಕೆ ಮಾಡಿ.
ಎತ್ತರ ಹೆಚ್ಚಿದ್ದರೆ: ಅಗಲವಾದ ಬಾರ್ಡರ್ , ದೊಡ್ಡ ಪ್ರಿಂಟ್ ಮತ್ತು ಕಾಂಟ್ರಾಸ್ವ್ ಬಣ್ಣಗಳು ಚೆನ್ನಾಗಿ ಹೊಂದುತ್ತವೆ.
ಸ್ಲಿಮ್ ಮೈಕಟ್ಟಿಗೆ: ಆರ್ಗನ್ಜಾ, ಟಿಶ್ಯೂ, ಕಾಟನ್ ಅಥವಾ ಲಿನೆನ್ ಸೀರೆಗಳು ಉತ್ತಮ ಲುಕ್ ನೀಡುತ್ತವೆ.
ಗುಂಡಗಿನ ಮೈಕಟ್ಟಿಗೆ: ಜಾರ್ಜೆಟ್ , ಕ್ರೇಪ್ , ಸಾ´್ಟ… ಸಿಲ್ಕ… ಅಥವಾ ಫ್ಲೋಯಿ ಫ್ಯಾಬ್ರಿಕ್ ಗಳು ದೇಹವನ್ನು ಸಮತೋಲನವಾಗಿ ತೋರಿಸುತ್ತವೆ.
ಅಗಲವಾದ ಬಾರ್ಡರ್ ದೇಹವನ್ನು ಅಗಲವಾಗಿ, ಸಣ್ಣ ಬಾರ್ಡರ್ ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಲಂಬ ಪ್ರಿಂಟ್ ಗಳು ಎತ್ತರದ ಭಾವನೆ ನೀಡಿದರೆ, ದೊಡ್ಡ ಪ್ರಿಂಟ್ ಗಳು ದೇಹವನ್ನು ತುಂಬಿದಂತೆ ತೋರಿಸುತ್ತವೆ. ಸರಳ ಡ್ರೇಪಿಂಗ್ ಮತ್ತು ಅಚ್ಚುಕಟ್ಟಾದ ಪ್ಲೀಟ್ಸ್ ನಿಮ್ಮ ಲುಕ್ ಗೆ ಹೆಚ್ಚಿನ ಮೆರುಗು ನೀಡುತ್ತವೆ.