ಜಿಮ್ನಾಸ್ಟ್ ಪ್ರೊತಿಷ್ಠಾಗೆ 7ನೇ ಸ್ಥಾನ

Contributed bymanjunath.gowda@timesgroup.com|Vijaya Karnataka
indian gymnast prothista achieves 7th place
ಗ್ಲಾಸ್ಗೊ: ಭಾರತದ ಜಿಮ್ನಾಸ್ಟ್ ಪ್ರೊತಿಷ್ಠಾ ಸಮಂತ

ಕಾಮನ್ ವೆಲ್ತ್ ಕ್ರೀಡಾಕೂಟದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ನ ಮಹಿಳೆಯರ ವಾಲ್ಟ್ ವಿಭಾಗದಲ್ಲಿ7ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು. ಸೋಮವಾರ
ನಡೆದ ಫೈನಲ್ ಸ್ಪರ್ಧೆಯಲ್ಲಿ22 ವರ್ಷದ ಪಶ್ಚಿಮ ಬಂಗಾಳದ ಸಮಂತ ಸರಾಸರಿ 12.883 ಅಂಕಗಳನ್ನು

ಗಳಿಸಿ 7ನೇ ಸ್ಥಾನಕ್ಕೆ ಕುಸಿದರು. ಎಡವಿದ ಗುರ್ವಿಂದರ್ ವೀರ್ : ಭಾರತದ ಅತಿ ವೇಗದ ಓಟಗಾರ ಗುರ್ ವಿಂದರ್ ವೀರ್ ಸಿಂಗ್ ಪುರುಷರ 100 ಮೀಟರ್ ಸ್ಪರ್ಧೆಯಲ್ಲಿಸೆಮಿಫೈನಲ್ ಪ್ರವೇಶಿಸಲು ವಿಫಲರಾದರು. ಸೋಮವಾರ ನಡೆದ ಹೀಟ್ಸ್ ನಲ್ಲಿ

10.39 ಸೆಕೆಂಡ್ ಗಳೊಂದಿಗೆ ಗುರಿ ಮುಟ್ಟಿದ ಅವರು ಒಟ್ಟಾರೆ 28ನೇ ಸ್ಥಾನಕ್ಕೆ ಕುಸಿದರು.