* ಅಮ್ಮನ ಪ್ರೇರಣೆಯಿಂದ ವೈದ್ಯಕೀಯ ಕ್ಷೇತ್ರದತ್ತ ವೈಷ್ಣವಿ ಒಲವು
* ದಿಲ್ಲಿಯ ಏಮ್ಸ್ ನಲ್ಲಿವೈದ್ಯಕೀಯ ಕೋರ್ಸ್ ಓದಲು ವೈಷ್ಣವಿ ಬಯಕೆ* ನೀಟ್ ಮರುಪರೀಕ್ಷೆಯಲ್ಲಿ720 ಅಂಕಗಳಿಗೆ 700 ಅಂಕ ಪಡೆದ ವೈಷ್ಣವಿ
* 20ನೇ ರಾರ ಯಂಕ್ ಪಡೆದು ವೈದ್ಯಲೋಕಕ್ಕೆ ಕಾಲಿಡಲು ಸಜ್ಜಾದ ಟಾಪರ್
* ದಾವಣಗೆರೆಯ ಸುಚಿತಾ ರಾಜ್ಯದ ಎರಡನೇ ಟಾಪರ್
ವಿಕ ಸುದ್ದಿಲೋಕ ಬೆಂಗಳೂರು
ಧಿ2026ನೇ ಸಾಲಿನ ನೀಟ್ ಮರುಪರೀಕ್ಷೆಯಲ್ಲಿಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ವೈಷ್ಣವಿ ದಾಸ್ ರಾಜ್ಯದ ಟಾಪರ್ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಜೆ.ಪಿ.ನಗರದ ಚೈತನ್ಯ ಟೆಕ್ನೋ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈಷ್ಣವಿ ದಾಸ್ , ಅಖಿಲ ಭಾರತ ಮಟ್ಟದಲ್ಲಿ20ನೇ ರಾರ ಯಂಕ್ (700 ಅಂಕ) ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಔಷಧ ಕಂಪನಿಯೊಂದರಲ್ಲಿಕೆಲಸ ಮಾಡುತ್ತಿರುವ ತಾಯಿ ಆಸೆಯಂತೆ ವೈದ್ಯೆಯಾಗಲು ಪ್ರೇರಿತರಾದ ವೈಷ್ಣವಿ, ದಿಲ್ಲಿಯ ಏಮ್ಸ್ ನಲ್ಲಿವೈದ್ಯಕೀಯ ಕೋರ್ಸ್ ಮುಗಿಸಿ ಸೇವೆ ಸಲ್ಲಿಸುವ ಕನಸು ಹೊತ್ತಿದ್ದಾರೆ.
‘‘12ನೇ ತರಗತಿಯ ಆರಂಭದಿಂದಲೇ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸಿದ್ದೆ. ತರಗತಿಯಲ್ಲಿಪಠ್ಯಕ್ರಮದ ಜತೆಗೆ, ನೀಟ್ ಎದುರಿಸಲು ಕೂಡ ಉಪನ್ಯಾಸಕರು ಧೈರ್ಯ ತುಂಬಿದ್ದರು. ಎಲ್ಲರ ಸಹಕಾರ ಹಾಗೂ ನಿರಂತರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ’’ ಎಂದು ವೈಷ್ಣವಿ ಪ್ರತಿಕ್ರಿಯಿಸಿದ್ದಾರೆ.
‘‘ಮೊದಲ ಪರೀಕ್ಷೆ ರದ್ದಾದ ಬಳಿಕ ಮತ್ತೆ ತಯಾರಿ ನಡೆಸುವ ಸವಾಲು ಎದುರಾಗಿತ್ತು. ನೀಟ್ ಮರುಪರೀಕ್ಷೆಯಲ್ಲಿನಿರೀಕ್ಷಿತ ಅಂಕಗಳು ಬಂದಿಲ್ಲ. ಆದರೆ, ಈಗಿನ ಟ್ರೆಂಡ್ ಗೆ ತಕ್ಕಂತೆ ಅಂಕಗಳನ್ನು ಗಳಿಸಿರುವುದು ಸಂತಸ ತಂದಿದೆ’’ ಎಂದಿದ್ದಾರೆ.
ವೈಷ್ಣವಿ ದಾಸ್ ತಂದೆ ವೃತ್ತಿಯಲ್ಲಿವಕೀಲರಾಗಿದ್ದು, ತಾಯಿ ಔಷಧಿ ಕಂಪನಿಯೊಂದರಲ್ಲಿಉದ್ಯೋಗದಲ್ಲಿದ್ದಾರೆ. ಇದೀಗ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿರುವ ವೈಷ್ಣವಿ, ಎಂಬಿಬಿಎಸ್ ಮುಗಿಸಿ ಸಂಶೋಧನೆ ಕ್ಷೇತ್ರದಲ್ಲೂಕೂಡ ಮುಂದುವರಿಯುವ ಆಸಕ್ತಿ ಹೊಂದಿದ್ದಾರೆ.
ಸುಚಿತಾ ಎರಡನೇ ಟಾಪರ್ :
ದಾವಣಗೆರೆಯ ಸುಚಿತಾ ಎಂ. ನೀಟ್ ಪರೀಕ್ಷೆಯಲ್ಲಿಅಖಿಲ ಭಾರತ ಮಟ್ಟದಲ್ಲಿ48ನೇ ರಾರ ಯಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
‘‘ಮೊದಲ ಪರೀಕ್ಷೆಯಲ್ಲಿ720 ಅಂಕ ಪಡೆಯುವ ನಿರೀಕ್ಷೆಯಿತ್ತು. ಆದರೆ, ಮರುಪರೀಕ್ಷೆಯಲ್ಲಿ48ನೇ ರಾರ ಯಂಕ್ ಸಿಕ್ಕಿದೆ. ರಾಜ್ಯಕ್ಕೆ ಎರಡನೇ ಟಾಪರ್ ಆಗಿರುವುದು ಸಂತಸ ತಂದಿದೆ,’’ ಎಂದು ಸುಚಿತಾ ಸಂತಸ ವ್ಯಕ್ತಪಡಿಸಿದ್ದಾರೆ.
ಇತರೆ ಕನ್ನಡಿಗರು
ಉಳಿದಂತೆ, ರಾಜ್ಯದ ಹಲ ವಿದ್ಯಾರ್ಥಿಗಳು ನೀಟ್ ನಲ್ಲಿಉತ್ತಮ ರಾರ ಯಂಕ್ ಪಡೆದುಕೊಂಡಿದ್ದಾರೆ. ರವಿಕುಮಾರ್ ಕಿಣಿ (62ನೇ ರಾರ ಯಂಕ್ ), ದಿಗಂತ್ ಬಿ.ಎಸ್ . (64ನೇ ರಾರ ಯಂಕ್ ), ಜಾನ್ ಜಾಬ್ (69ನೇ ರಾರ ಯಂಕ್ ), ಶ್ರೇಯಾಂಕ್ (94ನೇ ರಾರ ಯಂಕ್ ), ಸಂಪ್ರೀತ್ (109ನೇ ರಾರ ಯಂಕ್ ), ಅಭಿರಾಮ್ (118 ನೇ ರಾರ ಯಂಕ್ ) ಪಡೆಯುವ ಮೂಲಕ ನೀಟ್ ಪರೀಕ್ಷೆಯಲ್ಲಿಅರ್ಹತೆ ಪಡೆದುಕೊಂಡಿದ್ದಾರೆ.
ದೇಶದ 551 ನಗರಗಳು, ವಿದೇಶಗಳ 14 ನಗರಗಳೂ ಸೇರಿದಂತೆ ಒಟ್ಟು 5,440 ಕೇಂದ್ರಗಳಲ್ಲಿನಡೆದ ನೀಟ್ ಮರುಪರೀಕ್ಷೆಯಲ್ಲಿಒಟ್ಟು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು 11.22 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಈ ಹಿಂದೆ ಮೇ 3ರಂದು ನಡೆದಿದ್ದ ಮೊದಲ ನೀಟ್ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿರದ್ದು ಮಾಡಲಾಗಿತ್ತು.
ಬಾಕ್ಸ್ :
ರಾಜ್ಯದಲ್ಲಿವೈದ್ಯಕೀಯ ಸೀಟು ಹೆಚ್ಚಳ
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) 2026-27ನೇ ಸಾಲಿನ ರಾಜ್ಯವಾರು ವೈದ್ಯಕೀಯ ಸೀಟುಗಳ ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಮಾಡಿದೆ. 1,27,028 ಎಂಬಿಬಿಎಸ್ ಸೀಟುಗಳಿಗೆ ಹೆಚ್ಚುವರಿಯಾಗಿ 9,911 ಸೀಟುಗಳನ್ನು ಸೇರಿಸಲಾಗಿದೆ. ಇದರಿಂದಾಗಿ ರಾಷ್ಟ್ರೀಯ ಮಹತ್ವದ ಸಂಸ್ಥೆಗಳನ್ನು ಹೊರತುಪಡಿಸಿ 823 ವೈದ್ಯಕೀಯ ಕಾಲೇಜುಗಳಲ್ಲಿಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 1,36,939ಕ್ಕೆ ಏರಿಕೆ ಕಂಡಿದೆ.
ಎಂಬಿಬಿಎಸ್ ಸೀಟುಗಳು ಏರಿಕೆ ಕಂಡ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಒಟ್ಟು 1,300 ಹೊಸ ಸೀಟುಗಳನ್ನು ಪಡೆದುಕೊಂಡಿದೆ. ಈ ಮೂಲಕ ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ 15,395ಕ್ಕೆ ತಲುಪಿದೆ. ಹೆಚ್ಚುವರಿ ವೈದ್ಯಕೀಯ ಸೀಟುಗಳ ಸೇರ್ಪಡೆಯಲ್ಲಿಈ ವರ್ಷ ಸೇರ್ಪಡೆಯಾಗಿರುವ 23 ಹೊಸ ಕಾಲೇಜುಗಳ ಪೈಕಿ 21 ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ಸರಕಾರಿ ಸಂಸ್ಥೆಗಳಿವೆ. ಉಳಿದಂತೆ ತಮಿಳುನಾಡು 950 ಹೆಚ್ಚುವರಿ ಸೀಟುಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ.