ಮೊದಲ ಪುಟದಿಂದ ಹೋರಾಟಕ್ಕೆ ಸಜ್ಜಾದ ಆಪ್ : ಇ-20 ಪೆಟ್ರೋಲ್ ವಿರುದ್ಧ ಹೋರಾಟ ಕೈಗೆತ್ತಿಕೊಂಡಿ ರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ , ‘‘ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ಜನಾಭಿಪ್ರಾಯ ರೂಪಿಸಲು ದಿಲ್ಲಿಯಲ್ಲಿಆ.1 ರಂದು ರಾಷ್ಟ್ರೀಯ ಟೌನ್ ಹಾಲ್ ’ ಕಾರ್ಯಕ್ರಮ ನಡೆಸಲಾಗುವುದು,’’ ಎಂದು ಘೋಷಣೆ ಮಾಡಿದ್ದಾರೆ. ‘‘ಶಿಕ್ಷಣ ಸಚಿವರ ವಿರುದ್ಧ ಯುವ ಜನತೆ ಬೀದಿಗಿಳಿದಂತೆ ಇ-20 ಪೆಟ್ರೋಲ್ ವಿರುದ್ಧದ ಹೊರಾಟ ಭುಗಿ ಲೇಳುವ ಮೊದಲು ಸಮಸ್ಯೆ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಗಮನ ನೀಡಬೇಕು,’’ ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಕೋರ್ಟ್ ಕದ ತಟ್ಟಿದ ಗಡ್ಕರಿ: ಇ-20 ಪೆಟ್ರೋಲ್ ಕುರಿತಂತೆ ಡೀಪ್ ಫೇಕ್ ವಿಡಿಯೊಗಳ ಮೂಲಕ ಕುಟುಂಬದ ವಿರುದ್ಧ ಸುಳ್ಳು ಮಾಹಿತಿ ಹರಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೆಟಾ, ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ಮತ್ತು ಇತರರ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮುಂಬಯಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ‘‘ಜಾಲತಾಣದಲ್ಲಿಪೋಸ್ಟ್ ಗಳು, ಡೀಪ್ ಫೇಕ್ ಚಿತ್ರಗಳು ಮತ್ತು ವಿಡಿಯೊ ಬಳಸಿಕೊಂಡು ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇ-20 ಇಂಧನ ಪೆಟ್ರೋಲ್ ಉಪಕ್ರಮದಿಂದ ನನ್ನ ಕುಟುಂಬ ಲಾಭ ಪಡೆದುಕೊಳ್ಳುತ್ತಿದೆ ಎಂಬ ಸುಳ್ಳು ಸುದ್ದಿ ಹರಡಲಾಗುತ್ತಿದೆ,’’ ಎಂದು ಗಡ್ಕರಿ ದೂರಿದ್ದಾರೆ.