ನಿಲ್ದಾಣಕ್ಕೆ ಬಾರದ ಬಸ್ ವಿರುದ್ಧ ಕ್ರಮಕ್ಕೆ ಸೂಚನೆ

Contributed bysunilsirigere78@gmail.com|Vijaya Karnataka
action against buses not entering bus station in karnataka
ಬೈಪಾಸ್ ಮೂಲಕ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಗಳು | ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ಒತ್ತಾಯ

ನಿಲ್ದಾಣಕ್ಕೆ ಬಾರದ ಬಸ್ ವಿರುದ್ಧ ಕ್ರಮಕ್ಕೆ ಸೂಚನೆ
ವಿಕ ಸುದ್ದಿಲೋಕ ಭರಮಸಾಗರ

ನಗರದ ಬಸ್ ನಿಲ್ದಾಣಕ್ಕೆ ನಿಗದಿತ ಕೆಎಸ್ ಆರ್ ಟಿಸಿ ಬಸ್ ಗಳು ಪ್ರವೇಶಿಸದೆ ಬೈಪಾಸ್ ಮೂಲಕ ಸಂಚರಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಿ.ಟಿ. ನಿರಂಜನ್ ಮೂರ್ತಿ ತಿಳಿಸಿದ್ದಾರೆ.

ಭರಮಸಾಗರ ಕೆ.ಎಸ್ .ಆರ್ .ಟಿ.ಸಿ ಬಸ್ ನಿಲ್ದಾಣದಲ್ಲಿಕರುನಾಡು ರಾಷ್ಟ್ರ ಹೋರಾಟ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಅವರು, ಮಾತನಾಡಿದರು.

ರಾಜ್ಯ ಸರಕಾರದ ಸ್ಪಷ್ಟ ಆದೇಶದಂತೆ ಭರಮಸಾಗರ ಮಾರ್ಗದ ಎಲ್ಲಕೆ.ಎಸ್ .ಆರ್ .ಟಿ.ಸಿ ಬಸ್ ಗಳು ಕಡ್ಡಾಯವಾಗಿ ಬಸ್ ನಿಲ್ದಾಣ ಪ್ರವೇಶಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಚಿತ್ರದುರ್ಗ ಹಾಗೂ ದಾವಣಗೆರೆ ಘಟಕದ ಕೆಲವು ಬಸ್ ಗಳು ನಿಲ್ದಾಣಕ್ಕೆ ಬಾರದೆ ಬೈಪಾಸ್ ಮೂಲಕ ಸಂಚರಿಸುತ್ತಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡಿದೆ. ಈ ಸಮಸ್ಯೆ ಮುಂದುವರಿದರೆ ಮುಂದಿನ ಸಭೆಯಲ್ಲಿಕೆಎಸ್ ಆರ್ ಟಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ನಿಯಮ ಉಲ್ಲಂಘಿಘಿಸಿರುವ ಚಾಲಕ-ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.

ಇದೇ ವೇಳೆ, ಭರಮಸಾಗರ ಬಸ್ ನಿಲ್ದಾಣಕ್ಕೆ ಎಲ್ಲಾನಿಗದಿತ ಕೆ.ಎಸ್ .ಆರ್ .ಟಿ.ಸಿ ಬಸ್ ಗಳ ಕಡ್ಡಾಯ ಪ್ರವೇಶಕ್ಕೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಹೋರಾಟ ಸಮಿತಿ ನೇತೃತ್ವದಲ್ಲಿಮೌನ ಪ್ರತಿಭಟನೆ ನಡೆಯಿತು. ಬಸ್ ಗಳು ನಿಲ್ದಾಣಕ್ಕೆ ಬಾರದ ಕಾರಣ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಸೇರಿದಂತೆ ನೂರಾರು ಪ್ರಯಾಣಿಕರು ಬೈಪಾಸ್ ನಿಂದ ಸುಮಾರು 1.5 ಕಿ.ಮೀ. ನಡೆದು ಪಟ್ಟಣ ತಲುಪಬೇಕಾಗಿರುವ ದುಸ್ಥಿತಿಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಸಭೆಯಲ್ಲಿಭರಮಸಾಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ದುರ್ಗೇಶ್ ಪೂಜಾರ್ , ಕರ್ನಾಟಕ ರಾಷ್ಟ್ರ ಹೋರಾಟ ಸಮಿತಿ ಅಧ್ಯಕ್ಷ ಸಿದ್ದೇಶ್ , ಗೌರವ ಅಧ್ಯಕ್ಷ ಕೃಷ್ಣಪ್ಪ, ಗುರುಮೂರ್ತಿ, ಅರುಣ್ ಕುಮಾರ್ , ಅಂಜಿನಪ್ಪ, ವಿಜಯ್ , ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರಿದ್ದರು.

---

16 ಎಸ್ ಆರ್ ಜಿ ಪಿ 4

ಭರಮಸಾಗರ ಕೆ.ಎಸ್ .ಆರ್ .ಟಿ.ಸಿ ಬಸ್ ನಿಲ್ದಾಣದಲ್ಲಿಕರುನಾಡು ರಾಷ್ಟ್ರ ಹೋರಾಟ ಸಮಿತಿ ವತಿಯಿಂದ ಗುರುವಾರ ಮೌನ ಪ್ರತಿಭಟನೆ ನಡೆಯಿತು.