ಆಗುಂಬೆಯಲ್ಲಿಸುರಂಗ ನಿರ್ಮಾಣ, ಈಗಿರುವ ರಸ್ತೆ ವಿಸ್ತರಣೆ ಸಹಿತ ರೈಲ್ವೆ ಹಳಿ ನಿರ್ಮಾಣದ ಬೇಡಿಕೆ ಇದ್ದರೂ ಪರಿಸರಕ್ಕೆ ಧಕ್ಕೆಯಾಗದಂತೆ ಜನರಿಗೆ ಹೆಚ್ಚು ಅನುಕೂಲ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಅವರು ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಆಗುಂಬೆಯಲ್ಲಿಯಾವುದೇ ಕಾಮಗಾರಿಯಾದರೂ ಪರಿಸರದ ಪ್ರಶ್ನೆ ಎದುರಾಗುತ್ತಿದೆ. ತಜ್ಞರ ವರದಿಗೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 6.5 ಮೀ. ರಸ್ತೆಯನ್ನು 9ಮೀ. ಗೆ ವಿಸ್ತರಣೆ ಸಾಧ್ಯತೆಯ ತಾಂತ್ರಿಕ ವರದಿ ಪಡೆಯಲಾಗುವುದು ಎಂದರು.
ಆಗುಂಬೆಯಲ್ಲಿಸುರಂಗ ಮಾರ್ಗ ನಿರ್ಮಾಣ ನಿಟ್ಟಿನಲ್ಲಿಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಗೆ ಎರಡು ಬಾರಿ ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಕೇಂದ್ರ ಮೂರನೇ ಬಾರಿ ಟೆಂಡರ್ ಕರೆಯಲಿದೆ.
ದೂಷಿಸುವುದೇ ಉದ್ಯೋಗ: ಬುದ್ಧಿ ಜೀವಿಗಳು, ಪ್ರಗತಿಪರರು ಪ್ರಧಾನಿ ಮೋದಿಯನ್ನು ಕಾಯಂ ದೂಷಿಸುವ, ಟೀಕಿಸುವ ಉದ್ಯೋಗದಲ್ಲಿನಿರತರಾಗಿದ್ದಾರೆ. ಜಿರಳೆ ಪಾರ್ಟಿ, ಹೆಗ್ಗಣ ಪಾರ್ಟಿಗಳ ಬಗ್ಗೆಲ್ಲಾತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.
ಬಿಡದಿ ಯೋಜನೆ ಕೈ ಬಿಡದಿದ್ದರೆ ರಾಜ್ಯ ಕಾಂಗ್ರೆಸ್ ಸರಕಾರ ಬೆಲೆ ತೆರಬೇಕಾದೀತು. ಮೈಸೂರು ದಸರಾದಲ್ಲಿಕಂಬಳ ಆಯೋಜನೆ ತಪ್ಪಿಲ್ಲ. ರಾಜ್ಯದಲ್ಲಿಡಿ. ವಿ. ಸದಾನಂದ ಗೌಡ ನೇತೃತ್ವದ ಸರಕಾರವಿದ್ದಾಗ ಕಂಬಳ ಆಯೋಜನೆಗೆ ಐದು ಕೋಟಿ ರೂ. ನೀಡಲಾಗಿತ್ತು. ಬಿಜೆಪಿ ಕಂಬಳಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಸಂತೆಕಟ್ಟೆ ಅಂಡರ್ ಪಾಸ್ , ಅಂಬಲಪಾಡಿ ಫ್ಲೈ ಓವರ್ ವಾಹನ ಸಂಚಾರ ಮುಕ್ತವಾಗಿದೆ. ಕಟಪಾಡಿ ಅಂಡರ್ ಪಾಸ್ ಮತ್ತೊಂದು ಬದಿಯ ಕಾಮಗಾರಿ ಪ್ರಗತಿಯಲ್ಲಿದೆ. ಪರ್ಕಳದಲ್ಲಿರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ ಭೂಸ್ವಾಧೀನ ಪ್ರಕರಣ ನ್ಯಾಯಾಲಯದಲ್ಲಿದೆ, ತಡೆಯಾಜ್ಞೆ ತೆರವು ಯತ್ನ ಮುಂದುವರಿದಿದೆ ಎಂದರು.
ಗೃಹ ಸಚಿವರಿಗೆ ಆರ್ ಎಸ್ ಎಸ್ ನೋಂದಣಿಯದ್ದಷ್ಟೇ ತಲೆಬಿಸಿ!
ರಾಜ್ಯದಲ್ಲಿಹೆಣ್ಮಕ್ಕಳ ಹತ್ಯೆ, ಜೈಲಿನಿಂದ ಕೈದಿಗಳ ಪರಾರಿ ಸಹಿತ ಅಪರಾಧ ಪ್ರಕರಣ ಹೆಚ್ಚುತ್ತಿದ್ದರೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ನೋಂದಣಿ ಬಗೆಗಷ್ಟೇ ತಲೆಕೆಡಿಸಿಕೊಂಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.