ಬ್ಲೇಜರ್ ಮತ್ತು ಪ್ಯಾಂಟ್ ಅಂದ ತಕ್ಷಣ ನಮಗೆ ನೆನಪಾಗುವುದು ಗಂಭೀರ ಲುಕ್ . ಆದರೆ ನಟಿ ಕೃತಿ ಸನೋನ್ ಈ ಸಾಂಪ್ರದಾಯಿಕ ಪವರ್ ಸೂಟ್ ಶೈಲಿಗೆ ಗ್ಲಾಮರಸ್ ಟ್ವಿಸ್ವ್ ನೀಡಿದ್ದಾರೆ.ಸಾಮಾನ್ಯವಾಗಿ ಬ್ಲೇಜರ್ ಒಳಗೆ ಶರ್ಟ್ ಅಥವಾ ಟಾಪ್ ಧರಿಸುತ್ತಾರೆ. ಆದರೆ ಕೃತಿ ಕೊರ್ಸೆಟ್ ಧರಿಸಿದ್ದಾರೆ. ಇದಕ್ಕೆ ಮುಂಭಾಗದಲ್ಲಿಕಪ್ಪು ಲೇಸ್ ಡಿಸೈನ್ ಇದ್ದು, ಡ್ರೆಸ್ ಗೆ ಕ್ಯೂಟ್ ಹಾಗೂ ಬೋಲ್ಡ… ಲುಕ್ ಕೊಟ್ಟಿದೆ. ಬ್ಲೇಜರ್ ಗೆ ಹೊಂದುವಂತೆ ಪ್ಯಾಂಟ್ ಮ್ಯಾಚ್ ಮಾಡಿದ್ದಾರೆ.
ಕೊರಳಿಗೆ ಸಿಂಪಲ್ ಡೈಮಂಡ್ ನೆಕ್ಲೇಸ್ , ಕೈಯಲ್ಲಿಉಂಗುರ ಮತ್ತು ಕಿವಿಗೆ ಬೋಲ್ಡ… ಕಿವಿಯೋಲೆಗಳನ್ನು ಧರಿಸಿ ಮಿಂಚಿದ್ದಾರೆ. ಕಣ್ಣಿಗೆ ಸ್ಮೋಕಿ ಐ ಮೇಕಪ್ , ಲಿಪ್ ಸ್ಟಿಕ್ ಹಾಗೂ ಗುಂಗುರು ಕೂದಲಿನ ಹೇರ್ ಸ್ಟೈಲ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಆಫೀಸ್ ವೇರ್ ನಲ್ಲೂಕ್ಯೂಟ್ ಹಾಗೂ ಪವರ್ ಫುಲ್ ಆಗಿ ಕಾಣಿಸಬಹುದು ಎಂಬುದಕ್ಕೆ ಕೃತಿ ಅವರ ಈ ಲುಕ್ ಉದಾಹರಣೆ.