(ಪರಿಷ್ಕೃತ...) 25ಕ್ಕೂ ಹೆಚ್ಚು ವಾಹನಗಳು ಭಸ್ಮ

Contributed byshiva.rama@timesgroup.com|Vijaya Karnataka
fire accident in garage over 25 vehicles burnt to ashes
* ಗ್ಯಾರೇಜ್ ನಲ್ಲಿಅವಘಡ

ವಿಕ ಸುದ್ದಿಲೋಕ ಬೆಂಗಳೂರು
ಥಣಿಸಂದ್ರದ ಹೆಗಡೆ ನಗರದ ಗ್ಯಾರೇಜ್ ನಲ್ಲಿಮುಂಜಾನೆ 5.30ರ ಸುಮಾರಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ25ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿಬಿಎಂಡಬ್ಲ್ಯು, ರೇಂಜ್ ರೋವರ್ ಸೇರಿ 10ಕ್ಕೂ ಹೆಚ್ಚು ಕಾರುಗಳು, 7 ಆಟೊಗಳು, ಎರಡು ಬಸ್ ಗಳು ಬೆಂಕಿಗೆ ಆಹುತಿಯಾಗಿವೆ.

ಮನೀಶ್ ಷರೀಫ್ ಎಂಬುವರಿಗೆ ಸೇರಿದ ಜಾಗದಲ್ಲಿಆರೇಳು ಮಳಿಗೆಗಳಿದ್ದು, ಸಲ್ಮಾನ್ , ಶಕೀಲ್ , ಮುದಾಸಿರ್ , ಇಮ್ರಾನ್ , ಅಲಿಮ್ ಅವರು ಆಟೊ, ಬಸ್ ಮತ್ತು ಕಾರು ಗ್ಯಾರೇಜ್ ನಡೆಸುತ್ತಿದ್ದಾರೆ. ಹೀಗಾಗಿ ಐಷಾರಾಮಿ ಕಾರುಗಳು, ಆಟೊಗಳು ಹಾಗೂ ಬಸ್ ಗಳನ್ನು ಆವರಣದಲ್ಲಿನಿಲ್ಲಿಸಲಾಗಿತ್ತು. ಈ ಜಾಗವನ್ನು ನವಾಜ್ ನಿರ್ವಹಣೆ ಮಾಡುತ್ತಿದ್ದರು.

ಮಂಜಾನೆ 5.30ರ ಸುಮಾರಿಗೆ ಐದು ಗ್ಯಾರೇಜ್ ಗಳ ಪೈಕಿ ಒಂದರಲ್ಲಿವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿರುವ ಸಾಧ್ಯತೆಯಿದ್ದು, ಕ್ಷಣಾರ್ಧದಲ್ಲಿಬೆಂಕಿ ಇಡೀ ಆವರಣವನ್ನೇ ವ್ಯಾಪಿಸಿತು. ಕಾರುಗಳು, ಆಟೊಗಳು ಸುಟ್ಟು ಕರಕಲಾಗಿವೆ. ಬೆಂಕಿಯ ಕೆನ್ನಾಲಿಗೆ ಪಕ್ಕದ ಶೆಡ್ ಗೂ ವ್ಯಾಪಿಸಿದ್ದರಿಂದ ಅಲ್ಲಿದ್ದ ಎರಡು ಆಟೊಗಳು ಸುಟ್ಟುಹೋಗಿವೆ.

ಸ್ಥಳೀಯರ ಮಾಹಿತಿ ಮೇರೆಗೆ ಥಣಿಸಂದ್ರದ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಸಿದ್ದೇಗೌಡ ನೇತೃತ್ವದಲ್ಲಿ20ಕ್ಕೂ ಹೆಚ್ಚು ಸಿಬ್ಬಂದಿ ಐದು ವಾಹನಗಳಲ್ಲಿಸ್ಥಳಕ್ಕೆ ಧಾವಿಸಿ, ಸುಮಾರು 4 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಾರೊಂದರ ಬ್ಯಾಟರಿ ಸ್ಫೋಟ ಅಥವಾ ಗ್ಯಾರೇಜ್ ವೊಂದರಲ್ಲಿಉಂಟಾದ ಶಾರ್ಟ್ ಸರ್ಕಿಟ್ ನಿಂದ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.