ಮಾನವೀಯತೆ ಮೆರೆದ ಜೇವರ್ಗಿ ಶಾಸಕ ಅಜಯ್ ಸಿಂಗ್

Contributed byvenkatesh.narasappa@timesgroup.com|Vijaya Karnataka
jeshwara kalings humanity a remarkable rescue to the hospital
ಚಿತ್ರ: ಅಜಯ್

ರಸ್ತೆ ಬದಿಯಲ್ಲಿಅಸ್ವಸ್ಥಗೊಂಡು ನರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಶಾಸಕ ಡಾ.ಅಜಯ್ ಸಿಂಗ್ ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದರು.
**

(ಕಿಕ್ಕರ್ ) ರಸ್ತೆ ಬದಿಯಲ್ಲಿನರಳುತ್ತಿದ್ದ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿಆಸ್ಪತ್ರೆಗೆ ಸಾಗಣೆ

ಮಾನವೀಯತೆ ಮೆರೆದ ಶಾಸಕ ಅಜಯ್ ಸಿಂಗ್

ವಿಕ ಸುದ್ದಿಲೋಕ ಕಲಬುರಗಿ

ರಾಜಕೀಯ ಅಧಿಕಾರ ಹಾಗೂ ಕಾರ್ಯಕ್ರಮಗಳ ಆತುರಕ್ಕಿಂತ ಮನುಷ್ಯತ್ವವೇ ದೊಡ್ಡದು ಎಂಬುದನ್ನು ಶಾಸಕ ಡಾ.ಅಜಯ್ ಸಿಂಗ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಸ್ತೆ ಬದಿಯಲ್ಲಿಅಸ್ವಸ್ಥಗೊಂಡು ನರಳುತ್ತಿದ್ದ ವ್ಯಕ್ತಿಯೊಬ್ಬರನ್ನು ತಮ್ಮ ಕಾರಿನಲ್ಲಿಆಸ್ಪತ್ರೆಗೆ ದಾಖಲಿಸುವ ಮೂಲಕ ಶಾಸಕರು ಸಮಯಪ್ರಜ್ಞೆ ಹಾಗೂ ಮಾನವೀಯತೆ ಮೆರೆದಿದ್ದಾರೆ.

ರಾಜ್ಯದ ಮಾಜಿ ಸಿಎಂ ದಿ.ಧರಂಸಿಂಗ್ ಅವರ 9ನೇ ಪುಣ್ಯಸ್ಮರಣೆ ನಿಮಿತ್ತ ಅವರ ಕುಟುಂಬದವರು ಮತ್ತು ಆಪ್ತರು ಧರಂಸಿಂಗ್ ಹುಟ್ಟೂರು ನೆಲೋಗಿ ಹಾಗೂ ಜೇವರ್ಗಿಯಲ್ಲಿಹಮ್ಮಿಕೊಂಡಿದ್ದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ಕಲಬುರಗಿ-ಜೇವರ್ಗಿ ಮಾರ್ಗಮಧ್ಯೆ ರಸ್ತೆ ಬದಿಯಲ್ಲಿವ್ಯಕ್ತಿಯೊಬ್ಬರು ಗಾಯಗೊಂಡು ಅಸ್ವಸ್ಥರಾಗಿ ನರಳುತ್ತಿರುವುದು ಶಾಸಕರ ಗಮನಕ್ಕೆ ಬಂದಿದೆ. ಕೂಡಲೇ ತಮ್ಮ ವಾಹನ ತಡೆದು ಕೆಳಗಿಳಿದ ಶಾಸಕ ಡಾ.ಅಜಯ್ ಸಿಂಗ್ , ಸ್ವತಃ ವೈದ್ಯರಾಗಿದ್ದರಿಂದ ಯಾವುದೇ ಗಡಿಬಿಡಿಗೆ ಒಳಗಾಗದೆ ಗಾಯಾಳುವಿಗೆ ಧೈರ್ಯತುಂಬಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದರು. ಬಳಿಕ ತಡಮಾಡದೆ ತಮ್ಮದೇ ಕಾರಿನಲ್ಲಿತಮ್ಮ ಆಪ್ತ ಸಹಾಯಕರೊಂದಿಗೆ ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿದರು.

*ಬಸವಪಟ್ಟಣದ ನಿವೃತ್ತ ಕೆಕೆಆರ್ ಟಿಸಿ ನೌಕರ: ಅಪಘಾತದಲ್ಲಿಗಾಯಗೊಂಡು ರಸ್ತೆ ಬದಿಯಲ್ಲಿಬಿದ್ದಿದ್ದ ವ್ಯಕ್ತಿ ಕಲಬುರಗಿ ತಾಲೂಕಿನ ಬಸವಪಟ್ಟಣ ಗ್ರಾಮದವರು. ನಿವೃತ್ತ ಕೆಕೆಆರ್ ಟಿಸಿ ನೌಕರ ಶರಣಪ್ಪ ಎಂದು ಗುರುತಿಸಲಾಗಿದೆ. ಇವರು ತಮ್ಮ ಗ್ರಾಮದಿಂದ ವಿಜಯಪುರಕ್ಕೆ ತೆರಳುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು.