ಇಂದು ಪ್ರತಿಭಾ ಪುರಸ್ಕಾರ

Contributed byravimgl.kumar13@gmail.com|Vijaya Karnataka
awards ceremony and gurumalleshwar jayanti events
ಇಂದು ಪ್ರತಿಭಾ ಪುರಸ್ಕಾರ

ಚಿತ್ರದುರ್ಗ : ನಗರದ ಗಾರೆಹಟ್ಟಿ ರಸ್ತೆಯ ಶ್ರೀಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿಜು.18ರ ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿ ವೇದಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಕ್ರೀಡಾ ಹಾಗೂ ಇತರೆ ಚಟುವಟಿಕೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ನಿಸಾರ್ ಅಹಮದ್ , ಪ್ರಾಚಾರ್ಯ ಎನ್ .ಬಿ.ತಿಪ್ಪೇಸ್ವಾಮಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿತಿಳಿಸಿದೆ.

----

20ಕ್ಕೆ ಗುರುಮಲ್ಲೇಶ್ವರರ ಜಯಂತಿ

ಚಿತ್ರದುರ್ಗ: ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿಜು.20ರ ಬೆಳಗ್ಗೆ 8.30 ಗಂಟೆಗೆ ದೇವನೂರು ಶ್ರೀಗುರುಮಲ್ಲೇಶ್ವರರ ಜಯಂತಿ ಆಯೋಜಿಸಲಾಗಿದೆ.

ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿ ಅಧ್ಯP್ಷÜ ಶಿವಯೋಗಿ.ಸಿ. ಕಳಸದ್ ಅಧ್ಯP್ಷÜತೆ ವಹಿಸಲಿದ್ದು, ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ ಸಮ್ಮುಖ ವಹಿಸುವರು. ಡಾ.ಕೆ.ಬಿ.ಗುಡಸಿ, ನಾನಾ ಸಮಾಜ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು. ದೇವನೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ಎಸ್ .ಸದಾಶಿವಮೂರ್ತಿ ವಿಷಯಾವಲೋಕನ ಮಾಡುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.