ಕಂಚಿಗೆ ಫ್ರಾನ್ಸ್ -ಇಂಗ್ಲೆಂಡ್ ಸೆಣಸು

Contributed bymanjunath.gowda@timesgroup.com|Vijaya Karnataka
bronze match between france and england
ಫೈನಲ್ ನಲ್ಲಿನಾಳೆ ಸ್ಪೇನ್ -ಅರ್ಜೆಂಟೀನಾ ಮುಖಾಮುಖಿ

ಮಯಾಮಿ: ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಪ್ರಸಕ್ತ ಫಿಫಾ ವಿಶ್ವಕಪ್ ನಲ್ಲಿಕಂಚಿನ ಪದಕಕ್ಕಾಗಿ ಶನಿವಾರ ರಾತ್ರಿ ಹೋರಾಟ ನಡೆಸಲಿವೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ2-0 ಅಂತರದಲ್ಲಿಮೊರಾಕ್ಕೊ ತಂಡವನ್ನು ಮಣಿಸಿದ 2018ರ ಚಾಂಪಿಯನ್ ಮತ್ತು 2022ರ ರನ್ನರ್ ಅಪ್ ಫ್ರಾನ್ಸ್ , ಸೆಮಿಫೈನಲ್ ಪಂದ್ಯದಲ್ಲಿಯುರೋಪಿಯನ್ ಚಾಂಪಿಯನ್ ಸ್ಪೇನ್ ವಿರುದ್ಧ 0-2ರಲ್ಲಿಸೋತು ಫೈನಲ್ ಸ್ಪರ್ಧೆಯಿಂದ ನಿರ್ಗಮಿಸಿತು.

ಅತ್ತ ಇತ್ತೀಚಿನ ವರ್ಷಗಳಲ್ಲಿಇಂಗ್ಲೆಂಡ್ ಅಮೋಘ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದಾಗ್ಯೂ, ಸೆಮಿಫೈನಲ್ ನಲ್ಲಿಎಡುವುದನ್ನು ತ್ರಿ ಲಯನ್ಸ್ (ಇಂಗ್ಲೆಂಡ್ )ಮುಂದುವರಿಸಿದೆ. 2024ರ ಯುರೋ ಫೈನಲ್ ನಲ್ಲಿಸ್ಪೇನ್ ತಂಡದ ವಿರುದ್ಧ ಮಂಡಿಯೂರಿದ್ದ ಇಂಗ್ಲೆಂಡ್ , ಬುಧವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿಕಳೆದ ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡದ ಎದುರು 1-2ರಲ್ಲಿಸೋತಿದೆ. ಪಂದ್ಯದಲ್ಲಿಲಭಿಸಿದ ಆರಂಭಿಕ ಮುನ್ನಡೆಯನ್ನು ಕಾಪಾಡಿಕೊಳ್ಳದ ಇಂಗ್ಲೆಂಡ್ , ಕೊನೆಯಲ್ಲಿರಕ್ಷಣಾ ವೈಫಲ್ಯಕ್ಕೆ ಸೂಕ್ತ ದಂಡ ತೆತ್ತಿದೆ.

ಎರಡು ಪ್ರತ್ಯೇಕ ವಿಶ್ವಕಪ್ ಗಳಲ್ಲಿಏಳು ಅಥವಾ ಅದಕ್ಕಿಂತ ಹೆಚ್ಚು ಗೋಲ್ ಗಳಿಸಿದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ ಸಾಕ್ಷಿಯಾಗಿದ್ದು, ಶನಿವಾರ ಪಂದ್ಯದ ಆಕರ್ಷಣೆಯಾಗಿದ್ದಾರೆ.

ಪಂದ್ಯ ಆರಂಭ: ನಸುಕು 2:30(ಸೋಮವಾರ)

ಸ್ಥಳ: ಮಯಾಮಿ ಕ್ರೀಡಾಂಗಣ, ಮಯಾಮಿ