19ರಂದು ಪಟ್ಟಾಭಿಷೇಕ ಮಹೋತ್ಸವ

Contributed bynaveena.channappa@timesofindia.com|Vijaya Karnataka
ceremony on 19th 17th pattabhisheka of siddaramashwara swamiji
ವಿಕ ಸುದ್ದಿಲೋಕ ಮಂಡ್ಯ

ಚಿತ್ರದುರ್ಗದಲ್ಲಿಜು.19ರಂದು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಅವರ 17ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 28ನೇ ಲಾಂಛನ ದೀಕ್ಷಾ ಮಹೋತ್ಸವದ ಅಂಗವಾಗಿ ಭೋವಿ ಜನೋತ್ಸವ ಕಾರ ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಬೋವಿ(ಓಡ್ ) ಜನಾಂಗದ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ ತಿಳಿಸಿದರು.
‘‘ಭಾರತೀಯ ಬೋವಿ (ಓಡ್ ) ಜನಾಂಗದ ಪರಿಷತ್ ಸಂಘಟಿಸಿರುವ ಈ ಕಾರ ್ಯಕ್ರಮವು ಚಿತ್ರದುರ್ಗದ ಸಿದ್ದರಾಮೇಶ್ವರರ ಭೋವಿ ಗುರುಪೀಠದಲ್ಲಿನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಾರಂಭ ಉದ್ಘಾಟಿಸುವರು,’’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

‘‘ರಾಜ್ಯ ಸರಕಾರದ ಹಲವು ಸಚಿವರು, ಶಾಸಕರು, ನಿಗಮ, ಮಂಡಳಿ ಅಧ್ಯಕ್ಷರು, ಹಲವು ಮಠಾಧೀಶರು ಸಮಾರಂಭದಲ್ಲಿಭಾಗವಹಿಸುವರು. ಇದೇ ವೇಳೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ಸಮುದಾಯದ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು,’’ ಎಂದರು.

‘‘ಕಾರ ್ಯಕ್ರಮವನ್ನು ಹಬ್ಬದಂತೆ ಆಚರಣೆ ಮಾಡಲು ಜಿಲ್ಲೆಯಲ್ಲಿರುವ ಭೋವಿ ಜನಾಂಗದವರು ಸಮಾರಂಭಕ್ಕೆ ಆಗಮಿಸಬೇಕು,’’ ಎಂದು ಮನವಿ ಮಾಡಿದರು.

ಪರಿಷತ್ ನ ಸದಸ್ಯರಾದ ಮುಖಂಡರಾದ ರಮೇಶ, ಹಾದಯ್ಯ, ವೆಂಕಟರಾಮು, ಮುರುಗೇಶ್ ಇದ್ದರು.