ಚನ್ನರಾಯಪಟ್ಟಣ : ಜಿಲ್ಲಾಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಎಂಎಸ್ ಡಿ ವಯೋಮಿತ್ರ ಕಾರ ್ಯಕ್ರಮ ಜು.18 ರಂದು ತಾಲೂಕಿನ ಚಾಮಡಿಹಳ್ಳಿ ಗೇಟ್ ನಲ್ಲಿರುವ ಆಯುರ್ವೇದ ಆಸ್ಪತ್ರೆ ಆವರಣದಲ್ಲಿನಡೆಯಲಿದೆ.ಸಂದಿವಾತ, ಕೀಲು ನೋವು ಹಾಗೂ ವಯೋಸಹಜ ವ್ಯಾದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಇದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ವೈದ್ಯಾಧಿಕಾರಿ ಡಾ.ಪವನ್ ಮನವಿ ಮಾಡಿದ್ದಾರೆ. ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-30ರವರೆಗೆ ಈ ಶಿಬಿರ ನಡೆಯಲಿದ್ದು, ಮಧುಮೇಹ, ಸೊಂಟನೋವು, ರಕ್ತದೊತ್ತಡ, ಮಲಬದ್ಧತೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಗೆ ಶಿಬಿರದಲ್ಲಿಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.