ಚಿಕ್ಕಮಗಳೂರು : ರಾಜ್ಯ ಕೌಶಲಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿನಗರದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್ ) ದಿಂದ ಸ್ವಂತ ಉದ್ಯಮ ಸ್ಥಾಪಿಸಲು ಬಯಸುವವರಿಗೆ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರವನ್ನು ಜು.24ರಂದು ಜಿಲ್ಲೆಯಲ್ಲಿಅಯೋಜಿಸಲು ತೀರ್ಮಾನಿಸಲಾಗಿದೆ.ಶಿಬಿರದಲ್ಲಿಜಿಲ್ಲೆಯ ಆಸಕ್ತ ಭಾವಿ ಉದ್ಯಮಶೀಲರಿಗೆ ಅನುಕೂಲವಾಗಲು, ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸುವ ಕ್ರಮಗಳು, ಸರಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ ಇವುಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಜಿಲ್ಲೆಯ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ 18ರಿಂದ 40 ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲವರ್ಗದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಈ ಕೆಳಕಂಡ ವಿಳಾಸದಲ್ಲಿಕಚೇರಿ ವೇಳೆಯಲ್ಲಿತಮ್ಮ ಹೆಸರನ್ನು ನೋಂದಾಯಿಸಬಹುದು. ಜು.23ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಗರದ ಜಿ.ಪಂ. ಹತ್ತಿರವಿರುವ ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ (ಸಿಡಾಕ್ ) (ದೂರವಾಣಿ ಸಂಖ್ಯೆ: 6364826966) ಸಂಪರ್ಕಿಸಬಹುದು.