ಬೈಲಹೊಂಗಲ (ಬೆಳಗಾವಿ): ಕೌಟುಂಬಿಕ ಕಲಹ ಹಿನ್ನೆಲೆ ನುಗ್ಗಾನಟ್ಟಿ ಗ್ರಾಮದಲ್ಲಿಇಬ್ಬರು ಸಹೋದರರನ್ನು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ. ನುಗ್ಗಾನಟ್ಟಿ ಗ್ರಾಮದ ಬಸಪ್ಪ ಫಕೀರಪ್ಪ ರಾಯಣ್ಣವರ (35) ಹಾಗೂ ಲಗಮಪ್ಪ ಫಕೀರಪ್ಪ ರಾಯಣ್ಣವರ (34) ಕೊಲೆಗೀಡಾದ ಸಹೋದರರು. ಕೌಟುಂಬಿಕ ವಿಚಾರದ ಹಿನ್ನೆಲೆ ಗುರುವಾರ ರಾತ್ರಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಆರು ಜನ ಸಂಬಂಧಿಕರು ಮಾರಕಾಸ್ತ್ರಗಳಿಂದ ಹೊಡೆದು ಸಹೋದರರಿಬ್ಬರನ್ನು ಕೊಲೆಗೈದಿದ್ದಾರೆ ಮುರಗೋಡ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.