ವಿಕ ಸುದ್ದಿಲೋಕ ವಿಜಯಪುರ‘‘ಶಿಕ್ಷಣದಿಂದ ಅಭಿವೃದ್ಧಿ, ಶಾಂತಿ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯ’’ ಎಂದು ಆರ್ಟ್ ಗಿವಿಂಗ್ ಫೌಂಡೇಶನ್ ಸಂಚಾಲಕಿ ಶಿಫಾ ಜಮಾದಾರ ಹೇಳಿದರು.
ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ದಿಂದ ನಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಬ್ಯಾಗ್ ವಿತರಣೆ ಹಾಗೂ ಶಿಕ್ಷಣ , ಆರೋಗ್ಯ ಮತ್ತು ನೈರ್ಮಲ್ಯ ಅರಿವು ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಲಿಂ ಪೀರಜಾದೆ ಮಾತನಾಡಿ, ‘‘ನೈರ್ಮಲ್ಯ, ಆರೋಗ್ಯ ಹಾಗೂ ಆತ್ಮವಿಶ್ವಾಸ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತವೆ. ಸರಕಾರಿ ಶಾಲೆಗಳಲ್ಲಿಇನ್ನು ಹೆಚ್ಚಿನ ಮೂಲ ಸೌಕರ್ಯ ಒದಗಿಸಲು ಸರಕಾರ ಹೆಚ್ಚಿನ ಒತ್ತು ನೀಡಬೇಕು’’ ಎಂದರು.
ಮಹಾನಗರ ಪಾಲಿಕೆ ಸದಸ್ಯ ದಿನೇಶ ಹಳ್ಳಿ ಮಾತನಾಡಿ, ‘‘ಐತಿಹಾಸಿಕ ವಿಜಯಪುರ ನಗರದಲ್ಲಿಎಲ್ಲನಾಗರಿಕರು ಸ್ವಚ್ಛತೆ ಕಾಪಾಡಲು ಸಹಕಾರ ನೀಡಬೇಕು’’ ಎಂದು ಹೇಳಿದರು.