ದೇಶದ ಮೊದಲ ಜಲಜನಕ ಆಧಾರಿತ ರೈಲು ಸಂಚಾರ ಆರಂಭ

Contributed byBeeralinge gowda|Vijaya Karnataka
launch of indias first hydrogen powered train
ಎಲೈಟ್ ಕ್ಲಬ್ ಗೆ ಭಾರತ ಸೇರ್ಪಡೆ | ಟೀ ಬೆಲೆಗಿಂತಲೂ ಕಡಿಮೆ ಪ್ರಯಾಣ ದರ

ಚಂಡೀಗಢ: ದೇಶದ ಮೊದಲ ಜಲಜನಕ (ಹೈಡ್ರೋಜನ್ ) ಚಾಲಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಹರಿಯಾಣದ ಜಿಂದ್ -ಸೋನಿಪತ್ ನಡುವೆ ರೈಲು ಸಂಚರಿಸುತ್ತಿದ್ದು, ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.
‘ನಮೋ ಗ್ರೀನ್ ರೈಲ್ ’ ಎಂದು ಹೆಸರಿಡಲಾದ ಅತ್ಯಾಧುನಿಕ ರೈಲು ಜಿಂದ್ ಮತ್ತು ಸೋನಿಪತ್ ನಡುವಿನ 89 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿಸಂಚರಿಸಲಿದೆ. ಪರಿಸರ ಸ್ನೇಹಿ ತಂತ್ರಜ್ಞಾನ ಜತೆಗೆ ಅತ್ಯಂತ ಕಡಿಮೆ ಪ್ರಯಾಣ ದರದಿಂದಾಗಿ ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಹರಿಯಾಣದ ಜಿಂದ್ ನಲ್ಲಿನಡೆದ ಕಾರ್ಯಕ್ರಮದಲ್ಲಿಜಲಜನಕ ಆಧಾರಿತ ರೈಲು ಸೇವೆಗೆ ಚಾಲನೆ ನೀಡಿದ ಮೋದಿ, ‘‘ದೇಶದ ಮೊದಲ ಹೈಡ್ರೋಜನ್ ರೈಲು 3,200 ಅಶ್ವಶಕ್ತಿ (ಹಾರ್ಸ್ ಪವರ್ ) ಸಾಮರ್ಥ್ಯ ಹೊಂದಿದೆ. ವಿಶ್ವದ ಶಕ್ತಿಶಾಲಿ ಎಂಜಿನ್ ಗಳಲ್ಲಿಒಂದಾಗಿದೆ. ವಿಶ್ವದಲ್ಲಿಯೇ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಇದಾಗಿದೆ. ರೈಲ್ವೆ ವಲಯದಲ್ಲಿಪರಿಸರ ಸ್ನೇಹಿ ಹಾಗೂ ಅತ್ಯಾಧುನಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಹೈಡ್ರೋಜನ್ ರೈಲು ಮಹತ್ವದ ಹೆಜ್ಜೆಯಾಗಿದೆ,’’ ಎಂದರು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿ ಹಲವರು ಉಪಸ್ಥಿತರಿದ್ದರು.

ಭಾರತೀಯ ರೈಲ್ವೆಯಲ್ಲಿಇದೇ ಮೊದಲ ಬಾರಿಗೆ ಹೈಡ್ರೋಜನ್ ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ಹೈಡ್ರೋಜನ್ ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದಿಸಿ ರೈಲನ್ನು ಚಲಾಯಿಸುವ ವ್ಯವಸ್ಥೆ ರೂಪಿಸಲಾಗಿದೆ. ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಜಲಜನಕ ಆಧಾರಿತ ರೈಲು ಪರಿಚಯಿಸಲಾಗಿದೆ.

=======

ವಿಶೇಷತೆ ಏನು?

ಜಲಜನಕ ಆಧಾರಿತ ರೈಲನ್ನು ಪ್ರಾಯೋಗಿಕ (ಪೈಲಟ್ ) ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಹೈಡ್ರೋಜನ್ ತಂತ್ರಜ್ಞಾನ ದಾರಿ ಮಾಡಿಕೊಡಲಿದೆ. ಹೊಸ ರೈಲು ಸೇರ್ಪಡೆಯೊಂದಿಗೆ ಜರ್ಮನಿ, ಚೀನಾ, ಜಪಾನ್ , ಅಮೆರಿಕ, ಫ್ರಾನ್ಸ್ ಬಳಿಕ ಜಲಜನಕ ತಂತ್ರಜ್ಞಾನ ಹೊಂದಿದ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ‘ಆತ್ಮ ನಿರ್ಭರ ಭಾರತ’ ಅಭಿಯಾನ ಹಾಗೂ ‘ವಿಕಸಿತ ಭಾರತ’ ಸಂಕಲ್ಪ ಈಡೇರಿಕೆಯಲ್ಲಿಇದೊಂದು ಪ್ರಮುಖ ಹೆಜ್ಜೆಯಾಗಿದೆ.

ರೈಲಿನ ವೈಶಿಷ್ಟ್ಯಗಳು

ಸಂಚರಿಸುವ ಮಾರ್ಗ

ಜಿಂದ್ -ಸೋನಿಪತ್ (89 ಕಿ.ಮೀ)

1,200 ಕಿಲೋವ್ಯಾಚ್

ಜಲಜನಕ ಇಂಧನ ಸೆಲ್ ಚಾಲನಾ ವ್ಯವಸ್ಥೆ

ಗಂಟೆಗೆ 75 ಕಿ.ಮೀ

ಚಲಿಸುವ ಗರಿಷ್ಠ ವೇಗ

ಗಂಟೆಗೆ 110 ಕಿ.ಮೀ

ವೇಗದಲ್ಲಿಸಂಚರಿಸುವಂತೆಯೂ ವಿನ್ಯಾಸ

10

ಬೋಗಿಗಳು

2,600

ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ

ಕನಿಷ್ಠ 5 ರೂ.-ಗರಿಷ್ಠ 25 ರೂ.

ರೈಲು ಪ್ರಯಾಣ ದರ