ವಿದ್ಯುತ್ ಕಾಮಗಾರಿ ಮುಂದೂಡಿಕೆ; 19ರಂದು ವಿದ್ಯುತ್ ವ್ಯತ್ಯಯ ಇಲ್ಲ

Contributed byMruthyunjayar77@gmail.com|Vijaya Karnataka
postponement of work to avoid power failure on dark routes
ಚಿಕ್ಕಬಳ್ಳಾಪುರ : ಚಿಂತಾಮಣಿ 220/66 ಕೆ.ವಿ. ವಿದ್ಯುತ್ ಸ್ವೀಕರಣೆ ಕೇಂದ್ರದಲ್ಲಿಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವತಿಯಿಂದ ಜು.19ರಂದು ಕೈಗೊಳ್ಳಲು ನಿಗದಿಯಾಗಿದ್ದ ನಿರ್ವಹಣಾ ಕಾಮಗಾರಿಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಇದರಿಂದ ಈ ಹಿಂದೆ ಪ್ರಕಟಿಸಿದ್ದಂತೆ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ. ಚಿಂತಾಮಣಿ, ಶೆಟ್ಟಿಮಾದಮಂಗಲ, ಮಸ್ತೇನಹಳ್ಳಿ ಕೈಗಾರಿಕಾ ವಲಯ, ತಳಗವಾರ, ಚೀಮಂಗಲ, ವೈ-ಹುಣಸೇನಹಳ್ಳಿ, ಕೆ. ರಾಗುಟ್ಟಹಳ್ಳಿ, ಬೊಮ್ಮೆಪಲ್ಲಿಕ್ರಾಸ್ , ಏನಿಗದಲೆ, ಶಿಡ್ಲಘಟ್ಟ, ಮೇಲೂರು, ನಂದಿಗಾನಹಳ್ಳಿ, ಜಿ. ಕೋಡಿಹಳ್ಳಿ, ಇರಗಂಪಲ್ಲಿ, ಎಂ. ಗೊಲ್ಲಹಳ್ಳಿ, ಗಂಜಿಗುಂಟೆ, ಬುರುಡುಗುಂಟೆ, ಪಲ್ಲಿಚೆರ್ಲು, ದಿಬ್ಬೂರಹಳ್ಳಿ ಹಾಗೂ ಜಂಗಮಕೋಟೆ 66/11 ಕೆ.ವಿ. ಉಪ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿಜು.19ರಂದು ಎಂದಿನಂತೆ ವಿದ್ಯುತ್ ಸರಬರಾಜು ಇರಲಿದೆ. ಗ್ರಾಹಕರು ಆತಂಕಪಡಬೇಕಿಲ್ಲ. ಯಾವುದೇ ಪ್ರದೇಶದಲ್ಲಿನಿಗದಿತ ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ ಆಗುವುದಿಲ್ಲಎಂದು ಚಿಂತಾಮಣಿ ಬೆಸ್ಕಾಂ ಇಇ ಶ್ರೀನಾಥ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.