ಪಠ್ಯೇತರ ಚಟುವಟಿಕೆಯೂ ಮುಖ್ಯ

Contributed bymaheshmadahalli.vk@gmail.com|Vijaya Karnataka
extracurricular activities are essential for students future a retired teachers appeal
ಪಠ್ಯೇತರ ಚಟುವಟಿಕೆಯೂ ಮುಖ್ಯ

ವಿಕ ಸುದ್ದಿಲೋಕ ಗುಂಡ್ಲುಪೇಟೆ
ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯೂ ಬಹಳ ಮುಖ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಮೈಸೂರು ನಟರಾಜು ತಿಳಿಸಿದರು.

ಪಟ್ಟಣದ ಜೆಎಸ್ ಎಸ್ ಅನುಭವ ಮಂಟಪದಲ್ಲಿಜೆಎಸ್ಸೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಸಾಹಿತ್ಯ ಮತ್ತು ಕ್ರೀಡಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಕಾಲೇಜು ದಿನಗಳಲ್ಲಿಓದಿನ ಕಡೆಗೆ ಗಮನ ಕೊಡಬೇಕು. ಇದರೊಂದಿಗೆ ಎಲ್ಲಾರಂಗದಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಹೊಂದಬೇಕು. ಕ್ರೀಡೆ ದೈಹಿಕ ಆರೋಗ್ಯಕ್ಕೆ ಪೂರಕವಾದರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಭಾಗವಹಿಸುವುದರಿಂದ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ಒದಗಿಸುತ್ತವೆ ಎಂದು ಹೇಳಿದರು. ಈಚಿನ ದಿನಗಳಲ್ಲಿಮೊಬೈಲ್ ಬಳಸುವುದು ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ,’’ ಎಂದರು.

ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್ .ಪಿ.ಪಶುಪತಿ ಮಾತನಾಡಿ,‘‘ಸುತ್ತೂರು ರಾಜೇಂದ್ರ ಶ್ರೀಗಳು ಪ್ರತಿಯೊಬ್ಬರ ಭವಿಷ್ಯ ಬೆಳಗಲು ಶಿಕ್ಷಣ ದಾರಿದೀಪ ಎಂಬುದನ್ನು ಮನಗಂಡಿದ್ದರು. ಇದೇ ಕಾರಣಕ್ಕೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ತಾಲೂಕಿನ ವಿವಿಧ ಭಾಗಗಳಲ್ಲಿಪ್ರೌಢಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು,’’ ಎಂದು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ಜಗದೀಶ್ ಮಾತನಾಡಿದರು. ಕಲಾವಿದ ಅಶ್ವತ್ ಕದಂಬ, ಪ್ರಾಂಶುಪಾಲ ಮಲ್ಲಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಮಹದೇವಮ್ಮ, ಉಪನ್ಯಾಸಕರು, ನೌಕರರು ಹಾಜರಿದ್ದರು.

ಸಿಎಚ್ ಎನ್ 22ಜಿಪಿಟಿ2

ಗುಂಡ್ಲುಪೇಟೆಯಲ್ಲಿಜೆಎಸ್ಸೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಸಾಹಿತ್ಯ ಮತ್ತು ಕ್ರೀಡಾ ವೇದಿಕೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.