* ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಮಾಜಿ ಸಚಿವ ಅರುಣ್ ಯಾದವ್ ಹೇಳಿಕೆ
ಕೇಡರ್ ಬೇಸ್ ಪಕ್ಷ ಸಂಘಟನೆಗೆ ಒತ್ತುವಿಕ ಸುದ್ದಿಲೋಕ ಸಂಡೂರು
‘‘ದೇಶಾದ್ಯಂತ ಕಾಂಗ್ರೆಸ್ ಕೇಡರ್ ಬೇಸ್ ಆಧಾರದಲ್ಲಿಕಟ್ಟಬೇಕು ಎಂಬುದು ರಾಹುಲ್ ಗಾಂಧಿ ಅವರ ಆಶಯವಾಗಿದ್ದು, ಅದಕ್ಕಾಗಿ ಗುಜರಾತ್ ನಿಂದ ಈ ಪ್ರಕ್ರಿಯೆ ಶುರು ಮಾಡಲಾಗಿದೆ. ಪಕ್ಷದ ಜಿಲ್ಲಾ, ಬ್ಲಾಕ್ ಅಧ್ಯಕ್ಷರ ನೇಮಕಕ್ಕಾಗಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ,’’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಮಾಜಿ ಸಚಿವ ಅರುಣ್ ಯಾದವ್ ಹೇಳಿದರು.
ಸಮೀಪದ ಕೃಷ್ಣಾನಗರದಲ್ಲಿಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಸಂಘಟನ್ ಸೃಜನ್ ಅಭಿಯಾನದಲ್ಲಿಮಾತನಾಡಿದರು.
‘‘ಕಾಂಗ್ರೆಸ್ ಕಾರ್ಯಕರ್ತರು, ಸೇವಾದಳ, ಯುವ, ಮಹಿಳಾ ಕಾಂಗ್ರೆಸ್ , ಎನ್ ಜಿಒಗಳಿಂದ ಸೂಕ್ತ ವ್ಯಕ್ತಿಗಳನ್ನು ಜಿಲ್ಲಾಹಾಗೂ ಬ್ಲಾಕ್ ಕಾಂಗ್ರೆಸ್ ಗೆ ನೇಮಕ ಮಾಡಲು ಅಭಿಪ್ರಾಯಗಳನ್ನು ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳಿಸಲಾಗುತ್ತದೆ. ಅದಕ್ಕಾಗಿ ಮುಂದಿನ 5 ದಿನಗಳ ಕಾಲ ಜಿಲ್ಲೆಯಲ್ಲಿಇರುತ್ತೇನೆ,’’ ಎಂದರು.
ಶಾಸಕಿ ಅನ್ನಪೂರ್ಣ ಮಾತನಾಡಿ, ‘‘ಸಂಡೂರಿನಲ್ಲಿಮಾಜಿ ಮಂತ್ರಿ ದಿ.ಎಂ.ವೈ.ಘೋರ್ಪಡೆ, ಮಾಜಿ ಸಚಿವ ಸಂತೋಷ್ ಲಾಡ್ , ಸಂಸದ ಈ.ತುಕಾರಾಮ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಯುವ ಸಮೂಹ ಶಕ್ತಿ ಪ್ರದರ್ಶಿಸಿದೆ. ಪಕ್ಷದಲ್ಲಿಯುವಕರು, ಮಹಿಳೆಯರಿಗೂ ಆದ್ಯತೆ ನೀಡಬೇಕು,’’ ಎಂದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಖಂದರ್ ಮಾತನಾಡಿ, ‘‘ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಜಿಲ್ಲಾಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪಕ್ಷ ಬಯಸಿದೆ,’’ ಎಂದರು.
ಕೆಪಿಸಿಸಿ ಮಹಿಳಾ ವೀಕ್ಷಕಿ ಕಿಶೋರಿ ಬೂದನೂರು, ಜಿಲ್ಲಾಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಮಹಿಳಾ ಅಧ್ಯಕ್ಷೆ ಆಶಾಲತಾ ಮಾತನಾಡಿದರು. ಕೆಎಸ್ ಎಂಸಿ ರಾಜ್ಯ ಉಪಾಧ್ಯಕ್ಷ ಎಚ್ .ಲಕ್ಷತ್ರ್ಮಣ, ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಎನ್ ಕೆಎಸ್ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಕುರೇಕುಪ್ಪ ಪುರಸಭೆ ಅಧ್ಯಕ್ಷ ಸೂರ್ಯನಾರಾಯಣ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನೂರುದ್ದೀನ್ ಸೇರಿದಂತೆ ಪುರಸಭೆ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು ಇದ್ದರು.
ಬಿಎಲ್ ವೈ 25 ಎಸ್ಡಿಆರ್ 1:
ಸಂಡೂರಿನ ಕೃಷ್ಣಾನಗರದಲ್ಲಿಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಸಂಘಟನ್ ಸೃಜನ್ ಅಭಿಯಾನದಲ್ಲಿಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಯಾದವ್ ಮಾತನಾಡಿದರು. ಶಾಸಕಿ ಅನ್ನಪೂರ್ಣ ಇತರರು ಇದ್ದರು.