ಆ.9ರಂದು ಜಿಲ್ಲಾಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ

Contributed byknamana4@gmail.com|Vijaya Karnataka
district level open mud race sports meet organized by kodava muslim sports academy
ವಿರಾಜಪೇಟೆ:

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆಎಂಎಸ್ ಎ) ವತಿಯಿಂದ ಆ.9ರಂದು ಸಮೀಪದ ಕೊಮ್ಮೆತೋಡಿನಲ್ಲಿಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮವನ್ನು ಆಯೋಜಿಸಲಾಗಿದೆ. ಜಾತಿ ಧರ್ಮದ ಭೇದವಿಲ್ಲದೆ ನಡೆಯುವ ಈ ಕ್ರೀಡಾಸಂಗಮದಲ್ಲಿಕೊಡಗಿನ ತಂಡಗಳು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಕೆಎಂಎಸ್ ಎ ಅಧ್ಯಕ್ಷ ಆಲೀರ ಎಂ. ರಶೀದ್ ತಿಳಿಸಿದ್ದಾರೆ.
ಇಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ಮಳೆಗಾಲದಲ್ಲಿಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ಏರ್ಪಡಿಸಿರುವ ಕೆಸರುಗದ್ದೆ ಕ್ರೀಡಾ ಸಂಗಮವು ವಿರಾಜಪೇಟೆ- ಅಮ್ಮತ್ತಿ ಮುಖ್ಯ ರಸ್ತೆಯಲ್ಲಿರುವ ಕೊಮ್ಮೆತೋಡಿನ ಸೇತುವೆ ಬಳಿಯ ಗದ್ದೆಯಲ್ಲಿಆಯೋಜಿಸಲಾಗಿದೆ. ಈ ಕ್ರೀಡಾ ಸಂಗಮದಲ್ಲಿಓಟದ ಸ್ಪರ್ಧೆ, ಫುಟ್ಬಾಲ್ ಮತ್ತು ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ,’’ ಎಂದು ಹೇಳಿದರು.

‘‘7+3 ಹೆಚ್ಚುವರಿ ಆಟಗಾರರ ಫುಟ್ಬಾಲ್ ಮತ್ತು 9+2 ಹೆಚ್ಚುವರಿ ಸ್ಪರ್ಧಿಗಳ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ಸೇರಿದಂತೆ, ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕರ ವಿಭಾಗದ ಕೆಸರುಗದ್ದೆ ಓಟದ ಸ್ಪರ್ಧೆ ಪ್ರತ್ಯೇಕವಾಗಿ ಆಯೋಜಿಸಲು ಉದ್ದೇಶಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಗೆ 2 ಸಾವಿರ ರೂ. ಮತ್ತು ಪುರುಷರ ಹಗ್ಗಜಗಾಟ ಸ್ಪರ್ಧೆಗೆ 1500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಫುಟ್ಬಾಲ್ ಮತ್ತು ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯ ಟೈಸ್ ಅನ್ನು ಮೊದಲೇ ಸಿದ್ಧಪಡಿಸಬೇಕಿರುವುದರಿಂದ ನಿಗದಿತ ಪ್ರವೇಶ ಶುಲ್ಕವನ್ನು ಗೂಗಲ್ ಪೇ ಸಂಖ್ಯೆಯಾದ 9448167321 ಕ್ಕೆ ಮುಂಗಡವಾಗಿ ಪಾವತಿಸಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಕೆ.ಎಂ.ಎಸ್ .ಎ. ನಿರ್ದೇಶಕ ಕೋಳುಮಂಡ ರಫೀಕ್ ಮಾತನಾಡಿ, ಕಳೆದ ಹಲವು ದಶಕಗಳಿಂದ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇಬ್ಬರೂ ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲು ನಿರ್ಧರಿಸಲಾಗಿದೆ. ಕೆಸರುಗದ್ದೆ ಕ್ರೀಡಾ ಸಂಗಮದ ಕುರಿತು ಹೆಚ್ಚಿನ ಮಾಹಿತಿಗಾಗಿ 9448156668, 9740301963 ಅನ್ನು ಸಂಪರ್ಕಿಸಬಹುದಾಗಿದೆ ಎಂದರು.

ಈ ಸಂದರ್ಭ ಕೆ.ಎಂ.ಎಸ್ .ಎ. ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಅಬ್ದುಲ್ಲಾ, ಪುಂಜೆರ ಹಂಸ, ಮಂದಮಾಡ ಮುನ್ನಾ ಉಪಸ್ಥಿತರಿದ್ದರು.

ಪೊಟೊ:ಎಂಡಿಕೆ25ವಿಪಿಟಿ01ಎ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಸದಸ್ಯರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.