Chandru Winner Of Gold Medal In State Level Powerlifting
ಪವರ್ ಲಿಫ್ಟಿಂಗ್ : ಚಂದ್ರಪ್ಪಗೆ ಚಿನ್ನ
Contributed by: Vinayaka Naik P|Vijaya Karnataka•
ದಾವಣಗೆರೆ: ಬೆಂಗಳೂರಿನ ರಾಕ್ ಫಿಟ್ ಅಲ್ಟಾ್ರ ಜಿಮ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಕ್ ಫಿಟ್ ಕ್ಲಾಸಿಕ್ ಮುಕ್ತ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಓಪನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ.ಚಂದ್ರಪ್ಪ ಭಾಗವಹಿಸಿ, ಡೆಡ್ ಲಿಫ್ಟ್ ಬೆಂಚ್ ಪ್ರೆಸ್ ನ 74 ಕೆಜಿ ವಿಭಾಗದಲ್ಲಿ162.5 ಕೆಜಿ ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಶಾಸಕ ಎಸ್ .ಎಸ್ . ಮಲ್ಲಿಕಾರ್ಜುನ್ , ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ , ಶಾಸಕ ಸಮಥ್ ರ್ ಶಾಮನೂರು, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತಿತರರು ಅಭಿನಂದಿಸಿದ್ದಾರೆ.---