ಲಿಂಗರಾಜ ಚಿನಿವಾಲರ ಆಯ್ಕೆ ಬಾಗಲಕೋಟೆ : ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲೆಯ ನಾಲ್ವರು ಪತ್ರಕರ್ತರು ಹಾಗೂ ಓರ್ವ ಪತ್ರಿಕಾ ವಿತರಕರಿಗೆ 2026ನೇ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಿ.ಶರಣಬಸವರಾಜ ಎಸ್ .ಜಿಗಜಿನ್ನಿ ಸ್ಮರಣಾರ್ಥ ನೀಡುವ ಸತ್ಯಾಶ್ರಯ ಪ್ರಶಸ್ತಿಗೆ ವಿಜಯಕರ್ನಾಟಕ ವರದಿಗಾರ ಬಾದಾಮಿಯ ಲಿಂಗರಾಜ ಚಿನಿವಾಲರ, ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ಸಂಜೆ ದರ್ಶನ ಪ್ರಶಸ್ತಿಗೆ ಪತ್ರಕರ್ತ ಅಭಯ ಮನಗೂಳಿ, ದಿ.ರಾಮ ಮನಗೂಳಿ ಸ್ಮರಣಾರ್ಥ ಉಮೇಶ ಪೂಜಾರಿಯವರು ಕೊಡಮಾಡುವ ಸವಿನುಡಿ ಪ್ರಶಸ್ತಿಗೆ ಪತ್ರಕರ್ತ ಶ್ರೀಶೈಲ ಬಿರಾದಾರ, ದಿ.ಎನ್ .ಎಚ್ .ಶಾಲಗಾರ ಸ್ಮರಣಾರ್ಥ ಸಮಾಜವೀರ ಪ್ರಶಸ್ತಿಗೆ ಪತ್ರಕರ್ತ ಸುಭಾಸ ಹೊದ್ಲೂರ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಸಕ್ತ ಸಾಲಿನಿಂದ ದಿ.ತಾಯಮ್ಮ ಕಲ್ಲಪ್ಪಗೌಡ ಬಿರಾದಾರ ಸ್ಮರಣಾರ್ಥ ಕಾಯಕ ಪ್ರಶಸ್ತಿಗೆ ಶಿರೂರಿನ ಪತ್ರಿಕಾ ವಿತರಕರಾದ ಸಂಗನಬಸವ್ವ ಬಸಪ್ಪ ಡಾವಣಗೆರೆ ಅವರನ್ನು ಆಯ್ಕೆ ಮಾಡಲಾಗಿದೆ. ಜು.31ರಂದು ಪ್ರಶಸ್ತಿ ಪುರಷ್ಕೃತರಿಗೆ ಸನ್ಮಾನ, ಪ್ರಶಸ್ತಿ ಪತ್ರ, ನಗದು ನೀಡಿ ಗೌರವಿಸಲಾಗುವುದು ಎಂದು ಸಂಘದ ಪ್ರಧಾನಕಾರ್ಯದರ್ಶಿ ಜಗದೀಶ ಗಾಣಿಗೇರ ಪ್ರಕಟಣೆಯಲ್ಲಿತಿಳಿಸಿದ್ದಾರೆ.