ಕುಂದಾಪುರ : ತಲ್ಲೂರು ಸೈಂಟ್ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ನಲ್ಲಿಕುಂದಾಪುರ ವಲಯದ ಚರ್ಚ್ಗಳ ಪಾಲನಾ ಮಂಡಳಿಯ ಸಭೆ ಹಾಗೂ ತರಬೇತಿ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿ ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ಟೀಫನ್ ಡಿಸೋಜ ‘ಮಹೋನ್ನತ ಮಾನವೀಯತೆ’ ವಿಷಯದ ಕುರಿತು ಮಾರ್ಗದರ್ಶನ ನೀಡಿದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಅಗತ್ಯತೆ ಕುರಿತು ತಿಳಿಸಿದರು.ಕುಂದಾಪುರ ವಲಯದ ಎಲ್ಲಧರ್ಮಗುರುಗಳು, ಧರ್ಮಭಗಿನಿಯರು, ಪ್ರತಿ ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗಗಳ ಸಂಯೋಜಕರು, ತಲ್ಲೂರು ಚರ್ಚಿನ ಕ್ರೈಸ್ತ ಶಿಕ್ಷಣ ಶಿಕ್ಷಕರು ಹಾಗೂ ಸಾಮಾಜಿಕ ಸಂವಹನ ಆಯೋಗದ ಸದಸ್ಯರು ಉಪಸ್ಥಿತರಿದ್ದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಪೌಲ್ ರೇಗೋ ಸ್ವಾಗತಿಸಿದರು. ವಲಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆನಿಫ್ ರೀಮಾ ವಂದಿಸಿದರು.