(ಸೂಚನೆ: ಎಲ್ಲರೂ ಬಳಸಿಕೊಳ್ಳಿ) ಪ್ರಗತಿಪರ ಚಿಂತನೆಗಳು ಬದುಕಿಗೆ ಶ್ರೇಯಸ್ಸಿಗೆ ದಾರಿದೀಪ (ಫೋಟೊ ಅಟ್ಯಾಚ್ ಮಾಡಲಾಗಿದೆ)

Contributed bypunyavathi.hp@timesgroup.com|Vijaya Karnataka
progressive thoughts as a guiding light for success in life
ವಿಕ ಸುದ್ದಿಲೋಕ ಬೆಂಗಳೂರು

‘‘ಪ್ರಗತಿಪರ ಚಿಂತನೆಗಳು ಮಾನವನ ಜೀವನದ ಶ್ರೇಯಸ್ಸಿಗೆ ದಾರಿದೀಪ’’ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿಜರುಗಿದ ಜನಜಾಗೃತಿ ಸಮಾರಂಭದ 3ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

‘‘ಜೀವನದಲ್ಲಿಬದಲಾವಣೆ ಮತ್ತು ಬೆಳವಣಿಗೆ ಎರಡೂ ಬೇಕು. ಕೆಡುಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದು ಮಾನವನ ಗುರಿಯಾಗಬೇಕು. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯ. ರವಿ ಕಿರಣದಿಂದ ಪುಷ್ಪ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಸಂಪತ್ತು ಬೆಳೆದಂತೆ ಸಭ್ಯತೆ, ಸಂಸ್ಕೃತಿ ಬೆಳೆಯಬೇಕಾಗಿದೆ. ಬೆಳಗುವ ದೀಪಕ್ಕೆ ಎಣ್ಣೆ ಇದ್ದಂತೆ ಸರ್ವ ಚಟುವಟಿಕೆಗಳಿಗೂ ಆತ್ಮ ವಿಶ್ವಾಸವೇ ಆಧಾರವೆಂದು ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ,’’ ಎಂದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘‘ಮೂಲ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಯಾರೂ ನಿರ್ಲಕ್ಷತ್ರ್ಯ ಮಾಡಬಾರದು. ಸಕಲರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮದ ಆದರ್ಶ, ವಿಚಾರಧಾರೆಗಳು ಎಲ್ಲರ ಹಿತ ಚಿಂತನೆ ಮಾಡುತ್ತಾ ಬಂದಿವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಬಹು ದೊಡ್ಡ ಶಕ್ತಿ ಎಂದರೆ ಮಠ ಪೀಠಗಳು,’’ ಎಂದರು.

ಇದೇ ವೇಳೆ ಶಿವಗಂಗಾ ಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ‘ವೀರಶೈವ ಗುರು ಪೀಠಗಳ ಕೊಡುಗೆ’ ಕುರಿತು ಉಪದೇಶ ನೀಡಿದರು. ಕಾರ್ಯಕ್ರಮದಲ್ಲಿನರಗುಂದದ ಶಾಸಕ ಸಿ.ಸಿ. ಪಾಟೀಲ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಿ.ಎಸ್ . ಸಚ್ಚಿದಾನಂದಮೂರ್ತಿ, ಬೀದರ್ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ, ಕಲ್ಲುಬಾಳು ಮಠದ ಶಿವಾನಂದ ಶಿವಾಚಾರ್ಯ, ಬೆಳ್ಳಾವಿ ಮಹಾಂತ ಶಿವಾಚಾರ್ಯ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.