ಯತಿರಾಜ್ ನಿರ್ದೇಶನದ ‘ರಾ.. ರಾ.. ಆರ್ ಎಕ್ಸ್ ’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.
ಚಿತ್ರದಲ್ಲಿಇಬ್ಬರು ನಾಯಕರು. ಅದರಲ್ಲಿರಾಜೀವ್ ಪಾತ್ರದಲ್ಲಿಅನೂಪ್ ಬೆಳ್ಳಾವಿ ಹಾಗೂ ರಾಕೇಶ್ ಪಾತ್ರದಲ್ಲಿಭರತ್ ನಟಿಸುತ್ತಿದ್ದಾರೆ. ಇಬ್ಬರು ನಾಯಕಿಯರ ಪಾತ್ರದಲ್ಲಿಕೀರ್ತನಾ, ಐಶ್ವರ್ಯಾ ನಟಿಸುತ್ತಿದ್ದಾರೆ. ಚಿತ್ರದಲ್ಲಿಮೂರು ಹಾಡುಗಳಿವೆ. ವಿಜಯ್ ಹರಿತ್ಸ ಅವರ ಸಂಗೀತ ನಿರ್ದೇಶನ ಹಾಗೂ ದೀಪಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.ಚಿತ್ರದ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಯತಿರಾಜ್ , ‘ಇದು ನಾನೇ ಬರೆದಿರುವ ಕಥೆ. ‘ರಾ.. ರಾ.. ಆರ್ ಎಕ್ಸ್ ’ ಚಿತ್ರ ರಾಜೀವ ಹಾಗೂ ರಾಕೇಶ ಎಂಬ ಸ್ನೇಹಿತರು ಬೈಕ್ ನಲ್ಲಿಪಯಣಿಸುವಾಗ ನಡೆಯುವ ಕಥೆ ಇದು. ತಾಯಿಮಗನ ಬಾಂಧವ್ಯದ ಕಥೆಯೂ ಹೌದು. ಈ ಚಿತ್ರದಲ್ಲಿಬೈಕ್ ಸಹ ಪ್ರಮುಖ ಪಾತ್ರಧಾರಿ. ಕಥೆಯೇ ಈ ಚಿತ್ರದ ನಾಯಕ. ನಾನು ನಿರ್ದೇಶನದ ಜೊತೆಗೆ ಸಣ್ಣ ಪಾತ್ರದಲ್ಲಿಅಭಿನಯ ಕೂಡ ಮಾಡುತ್ತಿದ್ದೇನೆ’ ಎಂದಿದ್ದಾರೆ.