ನೇಪಾಳ ಸುದ್ದಿಗೆ ಬಾಕ್ಸ್

Contributed byvijaya.poojary@timesgroup.com|Vijaya Karnataka
school code of conduct for theft incident in mangalore accused arrested
ಮತ್ತೊಂದು ಸ್ಕೆಚ್ ಹಾಕಲು ಬಂದಾಗ ಸೆರೆ

ಕಳವು ಕೃತ್ಯದಲ್ಲಿಬಂಧಿತರಾಗಿರುವ ಮೂವರು ಆರೋಪಿಗಳು ನಟೋರಿಯಸ್ ಆಗಿದ್ದು, ಬೇರೆ ಬೇರೆ ರಾಜ್ಯಗಳಲ್ಲಿಇವರ ಮೇಲೆ ಹಲವು ಪ್ರಕರಣಗಳಿವೆ. ಮಂಗಳೂರಿನಲ್ಲಿಮತ್ತೆ ಕಳವಿಗೆ ಹೊಂಚು ಹಾಕಲು ಬಂದಾಗ ಬರ್ಕೆ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಮಠದಕಣಿಯಲ್ಲಿಜು.11ರಂದು ಕಳವು ಕೃತ್ಯ ನಡೆದಿದ್ದು, ಪೊಲೀಸರು ಈ ವ್ಯಾಪ್ತಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸಿದಾಗ ಆರೋಪಿಗಳ ಓಡಾಟದ ಬಗ್ಗೆ ದಾಖಲೆಗಳು ಸಿಕ್ಕಿದವು. ಈ ಆರೋಪಿಗಳು ಹಗಲಿನ ಹೊತ್ತಲ್ಲಿಓಡಾಟ ನಡೆಸಿ, ಯಾರೂ ವಾಸ್ತವ್ಯವಿಲ್ಲದ ಮನೆಯನ್ನು ಹುಡುಕಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿಸೆರೆಯಾಗಿತ್ತು. ಈ ಆಧಾರದಲ್ಲಿಶೋಧ ಕಾರ್ಯಾಚರಣೆ ಮುಂದುವರಿಸಿ, ಸಿಸಿ ಕ್ಯಾಮೆರಾದಲ್ಲಿರುವ ವ್ಯಕ್ತಿಗಳು ನಗರದ ವಸತಿ ಗೃಹದಲ್ಲಿವಾಸ್ತವ್ಯವಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕುತ್ತಾರೆ. ಈ ಸಂದರ್ಭ ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಲಾಡ್ಜ್ ನಲ್ಲಿಈ ಆರೋಪಿಗಳು ತಂಗಿರುವ ದಾಖಲೆ ಸಿಗುತ್ತದೆ. ಅದರಂತೆ ಅವರ ಪತ್ತೆಗೆ ಬಲೆ ಬೀಸುತ್ತಾರೆ.

ಕಾಸರಗೋಡಿಗೆ ತೆರಳಿ ವಾಪಾಸ್ : ಕಳವು ಕೃತ್ಯದ ಬಳಿಕ ಆರೋಪಿಗಳು ಕಾಸರಗೋಡಿಗೆ ತೆರಳಿ ಅಲ್ಲಿನಾನಾ ಕಡೆ ಸುತ್ತಾಡಿದ್ದಾರೆ. ಇದಾದ ಬಳಿಕ ಗುರುವಾರ ಮತ್ತೆ ಕಳವು ಕೃತ್ಯಕ್ಕೆ ಸ್ಕೆಚ್ ಹಾಕಿ ಮಂಗಳೂರಿಗೆ ಆಗಮಿಸಿ, ಕೆಎಸ್ಸಾರ್ಟಿಸಿ ತಂಗುದಾಣದ ಬಳಿಯ ಲಾಡ್ಜ್ ನಲ್ಲೇ ರೂಮು ಮಾಡಲು ಬಂದಿದ್ದಾರೆ. ಈ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಾರಂಟ್ ಆರೋಪಿಗಳು: ಆರೋಪಿಗಳು ದಕ್ಷಿಣ ಮತ್ತು ಉಡುಪಿ ಜಿಲ್ಲೆಯಲ್ಲಿಈ ಹಿಂದೆಯೂ ಕಳವು ಕೃತ್ಯದಲ್ಲಿಭಾಗಿಯಾಗಿ ಬಂಧನ ವಾಗಿದ್ದು, ಜಾಮೀನು ಬಳಿಕ ಪರಾರಿಯಾಗಿದ್ದರು. ನ್ಯಾಯಾಲಯ ಇವರಿಗೆ ಜಾಮೀನು ವಾರಂಟ್ ಹೊರಡಿಸಿತ್ತು. ಇದೀಗ ಬಂಧನ ಮೂಲಕ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. ಬರ್ಕೆ ಇನ್ ಸ್ಪೆಕ್ಟರ್ (ಪ್ರಭಾರ) ಅನಂತ ಪದ್ಮನಾಭ ನೇತೃತ್ವದ ತಂಡ ಆರೋಪಿಗಳ ಬಂಧನ ಕಾರ್ಯಕ್ಕೆ ಶ್ರಮಿಸಿತ್ತು.