ಮಳೆಗಾಗಿ ಮಕ್ಕಳ ಅಣುಕು ಮದುವೆ

Contributed bynalatwadmaibu@gmail.com|Vijaya Karnataka
special event of mini wedding for rain
ಮಳೆಗಾಗಿ ಮಕ್ಕಳ ಅಣುಕು ಮದುವೆ

ನಾಲತವಾಡ (ವಿಜಯಪುರ) : ಮಳೆಗಾಗಿ ಪ್ರಾರ್ಥಿಸಿ ಈಗಾಗಲೇ ಹಲವೆಡೆ ಜನರು ಗುರ್ಜಿ, ಹರನಾಳಗಿ ಪೂಜೆ ನೆರವೇರಿಸಿದ್ದಾರೆ. ಈಗ ಸಮೀಪದ ರಕ್ಕಸಗಿ ಗ್ರಾಮದ ಮರಿಗೆಮ್ಮ ದೇವಸ್ಥಾನ ಆವರಣದಲ್ಲಿಮಕ್ಕಳ ಅಣುಕು ಮದುವೆಯನ್ನೂ ಮಾಡಿದರು.
ಗ್ರಾಮದಲ್ಲಿಮಹಿಳೆಯರು ಮತ್ತು ಪುರುಷರ ಸೇರಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳ ಅಣುಕು ಮದುವೆ ಮಾಡಿದ್ದು ಗಮನಸೆಳೆಯಿತು. ಇದು ನಿಜ ಮದುವೆಗೆ ಏನೂ ಕಡಿಮೆ ಇರದಂತೆ ಅದ್ಧೂರಿಯಾಗಿತ್ತು. ಅಣುಕು ಮದುವೆ ವೇಳೆ ತುಂತುರು ಮಳೆ ಸುರಿಯಿತು. ಇದರಿಂದ ಜನರು ಸ್ವಲ್ಪ ಹರ್ಷಗೊಂಡರು. ಗ್ರಾಮದ ಬಸಪ್ಪ ತೊಗರಿ, ನುಗ್ಗಪ್ಪ ತೊಗರಿ, ಅವ್ವಮ್ಮ ಕುರಿ, ಸಿದ್ದಮ್ಮ ಕಮರಿ, ಶರಣಮ್ಮ ಟಕ್ಕಳಕಿ, ಕಸ್ತೂರಿಬಾಯಿ ಹುಡೇದ, ಶಾಂತಮ್ಮ ಚಿತವಾಡಗಿ, ಯಮನವ್ವ ತೊಗರಿ, ಶಿವಬಾಯಿ ಕಾಳಗುಂಡಿ, ನಾಗಮ್ಮ ಹುಡೇದ, ಬಸವರಾಜ ಮೇಟಿ ,ಅಮರೇಶ ತೊಗರಿ, ಗಂಗಪ್ಪ ತೊಗರಿ, ಲಲಿತಾ ಹುಡೇದ, ಗೀತಾ ಮದರಿ ಹಾಗೂ ಕಾಶಿಬಾಯಿ ಮಡಿವಾಳರ ಮತ್ತಿತರರಿದ್ದರು.

ಪೊಟೋ17ಎನ್ ಎಲ್ಟಿಡಿ1

ನಾಲತವಾಡ ಸಮೀಪದ ರಕ್ಕಸಗಿಯಲ್ಲಿಮಳೆಗಾಗಿ ಪ್ರಾರ್ಥಿಸಿ ಮಕ್ಕಳ ಅಣುಕು ಮದುವೆ ಮಾಡಿದ ಗ್ರಾಮಸ್ಥರು.