ಜು.18, 21ರಂದು ಚೆಕ್ ಪ್ರಕರಣಗಳ ವಿಶೇಷ ಲೋಕ್ ಅದಾಲತ್

Contributed byMruthyunjayar77@gmail.com|Vijaya Karnataka
special lok adalat for cheque cases on july 18 and 21
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜು. 18 ಮತ್ತು 21ರಂದು ಎನ್ ಐ ಕಾಯ್ದೆಯಡಿ ದಾಖಲಾದ ಚೆಕ್ ಬೌನ್ಸ್ ಪ್ರಕರಣಗಳ ವಿಶೇಷ ಲೋಕ್ ಅದಾಲತ್ ನಡೆಯಲಿದೆ. ಸಂಬಂಧಿತ ಪ್ರಕರಣಗಳ ಕಕ್ಷಿದಾರರು ನ್ಯಾಯಾಧೀಶರ ಸಮ್ಮುಖ ರಾಜಿ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಇದು ಉತ್ತಮ ಅವಕಾಶ ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ. ಶಿಲ್ಪ ತಿಳಿಸಿದ್ದಾರೆ.