ಎಚ್ .ಡಿ.ಕೋಟೆಯಲ್ಲಿಎಐಡಿಎಸ್ ಒ ಪ್ರತಿಭಟನೆ

Contributed bykakanakotekhedda@gmail.com|Vijaya Karnataka
support for sonam wangchuk from students aids protest in hd kote
ಎಚ್ .ಡಿ.ಕೋಟೆಯಲ್ಲಿಎಐಡಿಎಸ್ ಒ ಪ್ರತಿಭಟನೆ

ಸೋನಂ ವಾಂಗ್ಚುಕ್ , ಇತರ ಉಪವಾಸ ನಿರತರಿಗೆ ಬೆಂಬಲ
ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಪಟ್ಟಣದ ಆಡಳಿತಸೌಧÜದ ಮುಂಭಾಗದಲ್ಲಿತಾಲೂಕಿನ ಎಐಡಿಎಸ್ ಒ ನೇತೃತ್ವದಲ್ಲಿವಿದ್ಯಾರ್ಥಿಗಳು, ಸೋನಂ ವಾಂಗ್ಚುಕ್ ಹಾಗೂ ಇತರ ಉಪವಾಸ ನಿರತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾಕಾರ್ಯದರ್ಶಿ ನಿತಿನ್ ಮಾತನಾಡಿ, ‘‘ನೀಟ್ -ಯುಜಿ ಪರೀಕ್ಷೆಯಲ್ಲಿಅಕ್ರಮ ನಡೆದಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ದೇಶದ ಎಲ್ಲಾಶಿಕ್ಷಣ ಪ್ರೇಮಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ನೀಟ್ -ಯುಜಿ ಪರೀಕ್ಷೆ ರದ್ದಾದ ನಂತರ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿದ್ದಾರೆ. ಇದು ವಿದ್ಯಾರ್ಥಿ ಸಮುದಾಯ ಮತ್ತು ಪೋಷಕರಲ್ಲಿತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ,’’ಎಂದರು.

ದೇಶದಲ್ಲಿನಡೆಯುತ್ತಿರುವ ಆಂದೋಲನದ ಭಾಗವಾಗಿ ಪ್ರಖ್ಯಾತ ಪರಿಸರವಾದಿ ಸೋನಂ ವಾಂಗ್ಚುಕ್ ಅವರೂ ದಿಲ್ಲಿಯ ಜಂತರ್ ಮಂತರ್ ನಲ್ಲಿಇತರ ಪ್ರತಿಭಟನಾಕಾರರೊಂದಿಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಪ್ರೊ. ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿ 19 ದಿನಗಳು ಕಳೆದಿವೆ ಮತ್ತು ಅವರ ಕ್ಷೀಣಿಸುತ್ತಿರುವ ಆರೋಗ್ಯ ಸ್ಥಿತಿಯನ್ನು ಹಲವಾರು ವೈದ್ಯಕೀಯ ವರದಿಗಳು ಬೆಟ್ಟುಮಾಡಿವೆ. ಅವರು 8 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ಗಣ್ಯ ವ್ಯಕ್ತಿಗಳು ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ಕೇಂದ್ರ ಸರಕಾರ ತಕ್ಷಣವೇ ಅವರೊಂದಿಗೆ ಮಾತುಕತೆ ಆರಂಭಿಸಬೇಕು. ಆದರೆ ಸರಕಾರದ ಕಿವುಡ ಧೋರಣೆಯು, ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಹಾಗೂ ವಿದ್ಯಾರ್ಥಿಗಳ ಬಗ್ಗೆ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ,’’ ಎಂದರು.

ಸಮಿತಿಯ ಹೇಮ, ಅಂಜಲಿ, ದಿಶಾ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೇಡಿಕೆಗಳು;

1. ಕೇಂದ್ರ ಸರಕಾರವು ಸೋನಂ ವಾಂಗ್ಚುಕ್ ಮತ್ತು ಇತರ ಎಲ್ಲಾಉಪವಾಸ ಸತ್ಯಾಗ್ರಹಿಗಳೊಂದಿಗೆ ಪ್ರಜಾಸತ್ತಾತ್ಮಕ ಚರ್ಚೆಗಳಿಗಾಗಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು.

2. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.

3. ಸಂಪೂರ್ಣವಾಗಿ ವಿಫಲವಾಗಿರುವ ಎನ್ ಟಿಒ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಅನ್ನು ರದ್ದುಗೊಳಿಸಬೇಕು.

ಪೋಟೋ ಇದೆ;ಋ್ಗಖ17ಏಈಓ4ಇ

ಎಚ್ .ಡಿ.ಕೋಟೆ ಪಟ್ಟಣದ ಅಡಳಿತಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾಥಿಗಳು.