‘ಕಾನೂನು ಜ್ಞಾನ ಪಡೆದುಕೊಳ್ಳಿ’
Contributed by: raja.bandihal@gmail.com|Vijaya Karnataka•

‘ಕಾನೂನು ಜ್ಞಾನ ಪಡೆದುಕೊಳ್ಳಿ’
ವಿಕ ಸುದ್ದಿಲೋಕ ಹನುಮಸಾಗರ‘‘ಪ್ರತಿಯೊಬ್ಬ ವಿದ್ಯಾರ್ಥಿ ಕಾನೂನು ಜ್ಞಾನ ಪಡೆದುಕೊಲ್ಳಬೇಕು,’’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ.ಆರ್ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಬಾಲಕಿಯರ ಪ್ರೌಢ ಶಾಲೆಯಲ್ಲಿಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ಪ.ಪಂ.ಹಾಗೂ ಪೊಲೀಸ್ ಇಲಾಖೆಯಿಂದ ನಡೆದ
ಮಾದಕ ದ್ರವ್ಯ ಸೇವೆನೆಯಿಂದಾಗುವ ದುಷ್ಪರಿಣಾಮ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನವು ಬದುಕಿನ ಪ್ರಮುಖ ಘಟ್ಟವಾಗಿದೆ. ಕಾನೂನು ಉಲ್ಲಂಘಟನೆ ಮಾಡಿದರೆ, ಭವಿಷ್ಯದಲ್ಲಿಕತ್ತಲದ ಜೀವನ ಆರಂಭವಾಗುತ್ತದೆ ಎಂದರು.
ಬಿಇಒ ಉಮಾದೇವಿ ಬಸಾಪುರ ಮಾತನಾಡಿ. ಮಹಿಳೆ ಸಂಸ್ಕೃತಿ, ಸಂಪ್ರದಾಯ ಮರೆಯಬಾರದು. ನೈತಿಕ ಮೌಲ್ಯ ಮುಖ್ಯವಾಗಿರುತ್ತವೆ ಎಂದರು.
ಪಿಎಸ್ ಧನುಂಜಯ ಎಂ., ಆರೋಗ್ಯ ಇಲಾಖೆಯ ಖಾದರಬಾಷಾ ಮಾಗಿ ಮಾತನಾಡಿದರು. ಪ.ಪಂ.ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ನ್ಯಾಯವಾದಿಗಳಾದ ಎಚ್ .ಆರ್ .ನಾಯಕ, ಪರಸಪ್ಪ ಗುಜಮಾಗಡಿ,
ವಿಜಯಮಹಾಂತೇಶ ಕುಷ್ಟಗಿ, ಲಿಂಗರಾಜ ಅಗಸಿಮುಂದಿನ, ಶಿವಕುಮಾರ ಚಿನಿವಾಲರ, ಎಚ್ .ಬಿ.ಕುರಿ, ಎಸ್ .ಎನ್ .ನಾಯಕ, ಉಪಪ್ರಾಂಶುಪಾಲ ಮಹಾಂತಯ್ಯ ಸೊಪ್ಪಿಮಠ ಇದ್ದರು.
ಪರಸಪ್ಪ ಪರಸಾಪುರ, ಚಂದ್ರಶೇಖರ ಗುಳೇದ ನಿರ್ವಹಿಸಿದರು.
ಕೆಪಿಎಲ್ 17ಎಚ್ ಎಸ್ ಆರ್ ಫೋಟೊ2:ಹನುಮಸಾಗರದ ಕೆಪಿಎಸ್ ಬಾಲಕಿಯರ ಪ್ರೌಢ ಶಾಲೆಯಲ್ಲಿನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.