್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞಭಾಷೆ, ಸಂಸ್ಕೃತಿ, ಆಚಾರಗಳಲ್ಲಿವೈವಿಧ್ಯತೆಗಳನ್ನು ಒಳಗೊಂಡ ವರ್ಕಾಡಿ ಗ್ರಾಪಂ ಅಭಿವೃದ್ಧಿಯತ್ತ ಸಾಗುತ್ತಿದೆ. ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಈ ಪಂಚಾಯಿತಿಯ 4 ಗ್ರಾಮಗಳು ನೆರೆ ರಾಜ್ಯ ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿವೆ.
ಕೃಷಿಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ಇಲ್ಲಿಬಹುಸಂಖ್ಯೆಯಲ್ಲಿದ್ದಾರೆ. ಕೃಷಿಕರು ಹಾಗೂ ಕೃಷಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿವಾಸಿಸುತ್ತಿದ್ದು, ವಾಣಿಜ್ಯ ಸಂಸ್ಥೆಗಳ ಕೊರತೆಯಿಂದ ಪಂಚಾಯಿತಿಯ ಆದಾಯ ಸೀಮಿತವಾಗಿವೆ. ಮಂಜೇಶ್ವರ ತಾಲೂಕಿನ ಇತರ ಕರಾವಳಿ ಪಂಚಾಯಿತಿಗಳಿಗೆ ಹೋಲಿಸಿದರೆ ಇಲ್ಲಿನ ಆದಾಯ ಪ್ರಮಾಣ ಕಡಿಮೆಯಿದ್ದರೂ, ನಾನಾ ಕ್ಷೇತ್ರಗಳಲ್ಲಿಅಭಿವೃದ್ಧಿ ಹೊಂದುವತ್ತ ಹೆಜ್ಜೆ ಇರಿಸುತ್ತಿದೆ.
ಈ ಪಂಚಾಯಿತಿ ವ್ಯಾಪ್ತಿಯ ಎಲ್ಲಸರಕಾರಿ ಶಾಲೆಗಳಲ್ಲಿಕನ್ನಡ ಮಾಧ್ಯಮಗಳಲ್ಲಿಶಿಕ್ಷಣ ನೀಡುತ್ತಿರುವುದು ವಿಶೇಷ. ಪಾತೂರು ಗ್ರಾಮದ ಮಿತ್ತಾವು ಪ್ರದೇಶದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯು ಪಂಚಾಯಿತಿನ ಏಕೈಕ ಸರಕಾರಿ ಪ್ರಾಥಮಿಕ ಶಾಲೆಯಾಗಿದೆ.
ಆರೋಗ್ಯ ಸೇವೆಯಲ್ಲಿಪ್ರಗತಿ: ವರ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಟುಂಬ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿದ್ದು, ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ವರ್ಕಾಡಿ, ಪಾವೂರು ಮತ್ತು ಪಾತೂರು ಗ್ರಾಮಗಳಲ್ಲಿಆರೋಗ್ಯ ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಕೊಡ್ಲಮೊಗರು ಗ್ರಾಮದ ಉಪಕೇಂದ್ರಕ್ಕಾಗಿ ಗುವೆದಪಡ್ಪುವಿನಲ್ಲಿ55 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಸಾಂತ್ವನ ಪರಿಚರಣಾ ಸೇವೆಗಾಗಿ ನುರಿತ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಸಿಬ್ಬಂದಿ ಜತೆಗೆ ಪಂಚಾಯಿತಿಯಿಂದ ವೈದ್ಯರು ಹಾಗೂ ಸ್ಟಾಫ್ ನರ್ಸ್ ನ್ನು ನೇಮಿಸುವ ಪ್ರಕ್ರಿಯೆಯೂ ಆರಂಭಗೊಂಡಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿಒಟ್ಟು 25 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿಒಂದು ಅಂಗನವಾಡಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. ಮಹಿಳಾ ಸಬಲೀಕರಣದ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಟುಂಬಶ್ರೀಯ 180ಕ್ಕೂ ಹೆಚ್ಚು ಘಟಕಗಳು ಸ್ಥಾಪನೆಯಾಗಿವೆ.
ಕುಡಿಯುವ ನೀರಿನ ಕೊರತೆಗೆ ಬೇಕು ಶಾಶ್ವತ ಪರಿಹಾರ: ಪಂಚಾಯಿತಿಯ ನಾನಾ ಪ್ರದೇಶಗಳು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಕೊರತೆ ನೀಗಿಸಲು ಪಂಚಾಯಿತಿಯಿಂದ ಪ್ರಯತ್ನಗಳು ನಡೆಯುತ್ತಿದ್ದರೂ ಶಾಶ್ವತ ಯೋಜನೆಗಳಿಲ್ಲ. ಪ್ರಸ್ತುತ ಆನೆಕಲ್ಲುಹೊಳೆಯಿಂದ ನೀರನ್ನು ಪಂಪ್ ಮಾಡಿ ಗುವೆದಪಡ್ಪು ಜಲಶುದ್ಧೀಕರಣ ಘಟಕದ ಮೂಲಕ ಸರಬರಾಜು ಮಾಡಲಾಗುತ್ತಿದ್ದರೂ, ಸ್ಥಳೀಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ನೀರಿನ ಸೋರಿಕೆ, ಬೇಸಿಗೆ ಕಾಲದಲ್ಲಿನೀರಿನ ಲಭ್ಯತೆ ಕುಂಠಿತಗೊಳ್ಳುವುದು ಹಾಗೂ ಅಗತ್ಯದಷ್ಟು ನೀರು ಪೂರೈಸಲು ಸಾಧ್ಯವಾಗದಿರುವುದು ಪಂಚಾಯಿತಿ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ.
ಪ್ರಮುಖ ಬೇಡಿಕೆಗಳು
*ಮಹಿಳೆಯರ ಅನುಕೂಲಕ್ಕಾಗಿ ‘ಇಂದಿರಾ ಬಸ್ ’ ವಿಶೇಷ ಬಸ್ ಸೇವೆ ಆರಂಭಿಸುವ ಯೋಜನೆ.
*ಕತ್ತೆರಕೋಡಿ ಪ್ರದೇಶದ ಅಭಿವೃದ್ಧಿಗಾಗಿ ಅಂಬೇಡ್ಕರ್ ಸೆಟ್ ್ಲಮೆಂಟ್ ಯೋಜನೆಯಡಿ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
*ಮುರತ್ತಣೆ ಸಾರ್ವಜನಿಕ ಸ್ಮಶಾನದ ಅಭಿವೃದ್ಧಿ
*ತ್ಯಾಜ್ಯ ವಿಲೇವಾರಿಗಾಗಿ ವಿವಿಧ ವಾರ್ಡ್ ಗಳಲ್ಲಿಎಂಸಿಎಫ್ ಕೇಂದ್ರಗಳ ಸ್ಥಾಪನೆ
*ಸೌರ ವಿದ್ಯುತ್ ಘಟಕ ನಿರ್ಮಾಣ
*ಕುಟುಂಬ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಒದಗಿಸುವುದು
*ಯುವಜನರು ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಉತ್ತೇಜನ
*ಬಡ್ಸ್ ಶಾಲೆಯ ಸ್ಥಾಪನೆ
ಬಾಕ್ಸ್
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು: ವರ್ಕಾಡಿ, ಪಾವೂರು, ಕೊಡ್ಲಮೊಗರು, ಪಾತೂರು
ಜನಸಂಖ್ಯೆ: 25,756
ವಿಸ್ತೀರ್ಣ: 45.4 ಕಿ.ಮೀ.
ಕೋಟ್
ಆದಾಯ ಕೊರತೆ, ಅನುದಾನಗಳ ಅನಿಶ್ಚಿತತೆ ಹಾಗೂ ಭೌಗೋಳಿಕ ಸವಾಲುಗಳು ಅಭಿವೃದ್ಧಿಗೆ ಅಡ್ಡಿಯಾಗಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಈ ಗುರಿಗಳನ್ನು ಸಾಧಿಸುವ ವಿಶ್ವಾಸ ಪಂಚಾಯಿತಿಗೆ ಇದೆ. ಅಭಿವೃದ್ಧಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಆಧಾರವಾಗಿಟ್ಟು ವರ್ಕಾಡಿ ಗ್ರಾಪಂ ಪ್ರಗತಿಯತ್ತ ಮುನ್ನಡೆಯುತ್ತಿದೆ.
-ಉಮ್ಮರ್ ಬೋರ್ಕಳ, ಅಧ್ಯಕ್ಷರು, ವರ್ಕಾಡಿ ಗ್ರಾಪಂ
ಫೊಟೊ: 15ಕೆಎಸ್ ಎಲ್ ಕತ್ತೆರಕೋಡಿ
ಕತ್ತೆರಕೋಡಿ ಪ್ರದೇಶದ ಅಭಿವೃದ್ಧಿಗಾಗಿ ಅಂಬೇಡ್ಕರ್ ಸೆಟ್ ್ಲಮೆಂಟ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ.