ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ತಾಲೂಕು ಕೆಮ್ಮಿಂಜೆ ವಲಯದ ವೀರಮಂಗಲ ಕಾರ್ಯಕ್ಷೇತ್ರದ ಶುಭೋದಯ ಜ್ಞಾನವಿಕಾಸ ಕೇಂದ್ರದಲ್ಲಿಪೌಷ್ಟಿಕ ಆಹಾರ ಕಾರ್ಯಕ್ರಮ ನಡೆಯಿತು.ಜ್ಞಾನವಿಕಾಸ ಕೇಂದ್ರದ ಸದಸ್ಯೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಉದ್ಘಾಟಿಸಿದರು. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಹಿಳೆಯರಲ್ಲಿಬಹಳಷ್ಟು ಬದಲಾವಣೆ ತಂದಿದೆ. ಮಹಿಳಾ ಸಬಲೀಕರಣವಾಗಿದೆ ಎಂದವರು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಸದಸ್ಯರಿಗೆ ಅಭಯ ನೀಡುವ ಕಾರ್ಯ ಮಾಡುತ್ತಿದೆ. ಸಂಘಟನಾ ಶಕ್ತಿಯನ್ನು ಹೆಚ್ಚಿಸಿ ಸದಸ್ಯರಲ್ಲಿ ಧೈರ್ಯ, ಸಹಬಾಳ್ವೆ ಅಭಿವೃದ್ಧಿ ತಂದಿದೆ. ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿಮಹತ್ತರ ಬದಲಾವಣೆ ತಂದು ಅವರಲ್ಲಿಆತ್ಮ ವಿಶ್ವಾಸ ಹೆಚ್ಚಿಸಿದೆ. ಬ್ಯಾಂಕಿಂಗ್ ವ್ಯವಹಾರ ತಿಳಿದುಕೊಂಡು ಮಹಿಳೆಯರು ಉತ್ತಮ ರೀತಿಯಲ್ಲಿವ್ಯವಹಾರ ನಡೆಸಿ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿ ಸುನೀತಾ ಮಾತನಾಡಿ, ಪೌಷ್ಟಿಕ ಆಹಾರದ ಕೊರತೆಯಿಂದ ಇಂದಿನ ಜನಾಂಗ ಸಮಸ್ಯೆ ಎದುರಿಸುತ್ತಿದೆ. ಅಪೌಷ್ಟಿಕತೆಯು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ ಎಂದರು. ಆಟಿ ತಿಂಗಳಿನ ಮಹತ್ವ ಹಾಗೂ ಸೊಬಗು, ಈ ಸಮಯದಲ್ಲಿತಿನ್ನುವ ಆಹಾರ ಪದಾರ್ಥಗಳಲ್ಲಿರುವ ಪೌಷ್ಟಿಕತೆ ಕುರಿತು ಮಾಹಿತಿ ನೀಡಿದರು.
ಜನಜಾಗೃತಿ ಗ್ರಾಮ ಸಮಿತಿ ಸದಸ್ಯರಾದ ಗೋಪಾಲಕೃಷ್ಣ, ವಲಯ ಮೇಲ್ವಿಚಾರಕರಾದ ಗಿರೀಶ್ , ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಸೇವಾಪ್ರತಿನಿಧಿ ಯಮುನಾ ಉಪಸ್ಥಿತರಿದ್ದರು.
ಫೊಟೊ: 21ಪಿ-ಪೌಷ್ಟಿಕ
ಜ್ಞಾನವಿಕಾಸ ಕೇಂದ್ರದಲ್ಲಿಪೌಷ್ಟಿಕ ಆಹಾರ ಕಾರ್ಯಕ್ರಮ ನಡೆಯಿತು.