ಮಾಶಾಳ ಗ್ರಾಮದ ಸರಕಾರಿ ಪಪೂ ಕಾಲೇಜಿನಲ್ಲಿಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿಉಪನ್ಯಾಸಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮುತ್ತಣ್ಣ ಬೋರುಟಿ, ಸಂಜಯಕುಮಾರ ಪಾಟೀಲ… ಇತರರಿದ್ದರು.**
ಸರಕಾರಿ ಪಪೂ ಕಾಲೇಜಿನಲ್ಲಿಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ(ಕಿಕ್ಕರ್ )
ವಿದ್ಯಾರ್ಥಿಗಳು ಉನ್ನತ ಗುರಿ ತಲುಪಲಿ
ವಿಕ ಸುದ್ದಿಲೋಕ ಕಲಬುರಗಿ
ವಿದ್ಯಾರ್ಥಿಗಳು ವಿವಿಧ ಮೂಲಗಳಿಂದ ಜ್ಞಾನ ಸಂಪಾದಿಸಿ ಉನ್ನತ ಗುರಿ ತಲುಪಬೇಕು ಎಂದು ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಮುತ್ತಣ್ಣ ಎಲ….ಬೋರುಟಿ ಹೇಳಿದರು.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸರಕಾರಿ ಪಪೂ ಕಾಲೇಜಿನಲ್ಲಿಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿಮಾತನಾಡಿದರು. ವಿದ್ಯಾರ್ಥಿಗಳು ಶಿಸ್ತು, ಹಿರಿಯರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಸಂಜಯಕುಮಾರ ಪಾಟೀಲ… ಮಾತನಾಡಿ, ಯುವಕರು ಸಂಘದ ಜವಾಬ್ದಾರಿ ವಹಿಸಿಕೊಂಡಿರುವುದು ಸಂತಸ ತಂದಿದೆ. ಅವರು ಉಪನ್ಯಾಸಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದಾರೆ ಎಂಬ ಭರವಸೆಯಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ರಾಠೋಡ, ಕಾರ್ಯಾಧ್ಯಕ್ಷ ಗುಂಡೇರಾವ ಅರವತ್ತಗಿರಿ, ಉಪಾಧ್ಯಕ್ಷೆ ಯಲ್ಲಮ್ಮ ಟಿ.ಬತ್ತಾಸೆ ಹಾಗೂ ಖಜಾಂಚಿ ಮಹಾದೇವ ಅಮರಗೊಂಡ, ವಿ.ಕೆ.ಜಿ ನಗರ ಶಿಕ್ಷಕ ಸಂಗನಬಸವ ಮುಜಗೊಂಡ ಅವರನ್ನು ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಪ್ಪ ದೇಶಟ್ಟಿ, ಉಪನ್ಯಾಸಕರಾದ ಶಿವರಾಯಗೌಡ ಪಾಟೀಲ…, ಚಿದಾನಂದ ತೆಳಗಿನತೋಟ, ದೇವೇಂದ್ರಪ್ಪ, ರಾಜು ಚವ್ಹಾಣ, ರವಿಕುಮಾರ ಕೆಸರಟ್ಟಿ, ನಾಗರಾಜ ನಾವಿ ಇದ್ದರು. ಕಾವೇರಿ ಹದರಿ ಸ್ವಾಗತಿಸಿದರು. ಸುಮತಿ ಇಟಗಾರ ನಿರೂಪಿಸಿದರು. ಸರಸ್ವತಿ ಗಡೇದ ವಂದಿಸಿದರು.