ಡೈಜೆಸ್ಟ್

Contributed bychitravathi.k@timesgroup.com|Vijaya Karnataka
digest fire control in other countries and indian technology services
ಅಂಚೆ ವಿತರಣಾ ಒಪ್ಪಂದ ಅಂಚೆ ಇಲಾಖೆ ಮೂಲಕ ಗ್ರಾಹಕರಿಗೆ ಸರಕುಗಳನ್ನು ತಲುಪಿಸಲು ಫ್ಲಿಪ್ ಕಾರ್ಟ್ , ಅಂಚೆ ಇಲಾಖೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದಿಂದ ಅಂಚೆ ಇಲಾಖೆಯ ಬೃಹತ್ ಜಾಲವನ್ನು ಬಳಸಿ ನಗರ, ಅರೆ-ನಗರ ಹಾಗೂ ದುರ್ಗಮ ಪ್ರದೇಶಗಳೂ ಸೇರಿದಂತೆ ಗ್ರಾಮೀಣ ಭಾಗದಲ್ಲೂಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಇದರಲ್ಲಿಮುಂಗಡ ಹಾಗೂ ನಂತರ ಹಣ ಪಾವತಿ ಎರಡೂ ಸೇವೆಗಳು ಲಭ್ಯವಿರಲಿವೆ. ಅಲ್ಲದೆ, ಒಟಿಪಿ ಆಧರಿತ ದೃಢೀಕರಣ ಮತ್ತು ಸರಕುಗಳ ನೇರ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಡಿಸೆಂಬರ್ ನಲ್ಲಿಅಂಚೆ ಇಲಾಖೆಯು ಅಮೆಜಾನ್ ಜತೆಗೆæ ಇದೇ ರೀತಿಯ ಒಪ್ಪಂದ ಮಾಡಿಕೊಂಡಿತ್ತು. ಕ್ಷಿಪಣಿ ದಾಳಿ ಇರಾನ್ ಮೇಲೆ ಹೊಸದಾಗಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಸೌದಿ ಅರೇಬಿಯಾದ ಜಿಜಾನ್ ನಗರದ ಮೇಲೆ ಯೆಮೆನ್ ನ ಹೂಥಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ದಾಳಿಯ ಬಳಿಕ ಸೌದಿಯ ರಕ್ಷಣಾ ಪಡೆ, ನೈರುತ್ಯ ಕರಾವಳಿ ಹಾಗೂ ಉತ್ತರದ ಯಾನ್ಬು ನಗರದಲ್ಲಿಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದೆ ಎಂದು ಹೂಥಿ ಮಾಧ್ಯಮ ತಿಳಿಸಿದೆ. ಜಿಜಾನ್ ನಲ್ಲಿರುವ ‘ಸೌದಿ ಅರಾಮ್ಕೊ’ಗೆ ಸೇರಿದ ತೈಲ ಸಂಸ್ಕರಣಾ ಘಟಕದಲ್ಲಿಬೆಂಕಿ ಹೊತ್ತಿಕೊಂಡಿರುವ ಹಾಗೂ ದಟ್ಟಹೊಗೆ ಕಾಣಿಸಿಕೊಂಡಿರುವ ದೃಶ್ಯಗಳು ವೀಡಿಯೊದಲ್ಲಿದಾಖಲಾಗಿವೆ. ಫ್ರಾನ್ಸ್ -ಸ್ಪೇನ್ ಕಾಳ್ಗಿಚ್ಚು ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿವ್ಯಾಪಿಸುತ್ತಿರುವ ಭೀಕರ ಕಾಳ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು, ಸುರಕ್ಷಿತ ಕ್ರಮವಾಗಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಫ್ರಾನ್ಸ್ ನಿಂದ 1,97,000 ಜನರನ್ನು ಹಾಗೂ ಸ್ಪೇನ್ ನಿಂದ 70,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಳ್ಗಿಚ್ಚು ಸಂಪೂರ್ಣ ಹತೋಟಿಗೆ ಬರುತ್ತಿಲ್ಲಎಂದು ಫ್ರಾನ್ಸ್ ಸಚಿವ ಲಾರೆಂಟ್ ನೂನೇಜ್ ತಿಳಿಸಿದ್ದಾರೆ. ಫ್ರಾನ್ಸ್ ನಾದ್ಯಂತ ಸಂಭವಿಸಿದ ಈ ಕಾಳ್ಗಿಚ್ಚಿಗೆ ಅಂದಾಜು 98,000 ಎಕರೆ ಅರಣ್ಯ ಹಾಗೂ ಭೂಪ್ರದೇಶ ಅಗ್ನಿಗೆ ಆಹುತಿಯಾಗಿದ್ದು, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿಹಾನಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಭಿಟ್ ಚಾಟ್ ಆಪ್ ಬ್ಯಾನ್ ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುವ ‘ಭಿಟ್ ಚಾಟ್ ’ ಆಪ್ ಗೆ ಸಂಬಂಧಿಧಿಸಿದ ಸಂಗ್ರಹಗಳನ್ನು ತೆಗೆದುಹಾಕುವಂತೆ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಗಿಟ್ ಹಬ್ ಗೆ ಸೂಚನೆ ನೀಡಿದೆ. ಇಂಟರ್ನೆಟ್ ಅಥವಾ ಮೊಬೈಲ್ ನೆಟ್ ವರ್ಕ್ ಅಗತ್ಯವಿಲ್ಲದೆ ಬ್ಲೂಟೂತ್ ಮೆಶ್ ನೆಟ್ ವರ್ಕ್ ಮೂಲಕ ಕಾರ್ಯನಿರ್ವಹಿಸುವ ಈ ಆಪ್ ನ ಅನಾಮಧೇಯ ಸ್ವಭಾವವು ಕಾನೂನು ಜಾರಿ ಸಂಸ್ಥೆಗಳಿಗೆ ತನಿಖೆ ನಡೆಸಲು ಕಷ್ಟಕರವಾಗಿಸಿದೆ ಎಂದು ಸರಕಾರ ತಿಳಿಸಿದೆ. ಐಟಿ ಕಾಯಿದೆಯ ನಿಬಂಧನೆಗಳಡಿ ಈ ಕ್ರಮ ಕೈಗೊಳ್ಳಲಾಗಿದೆ.