ಹಿರಿಯೂರಲ್ಲಿಡಿ.ಸುಧಾಕರ್ ನುಡಿನಮನ | ಆಕಾಂಕ್ಷಿಗಳು, ಕಾರ್ಯಕರ್ತರಿಗೆ ಸಿಎಂ ಡಿಕೆಶಿ ಕರೆ | ಕೆರೆಗಳ ತುಂಬಿಸುವ 244 ಕೋಟಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ
ವ್ಯಕ್ತಿ ಪೂಜೆ ಬಿಡಿ, ಪಕ್ಷ ಪೂಜೆ ಮಾಡಿವಿಕ ಸುದ್ದಿಲೋಕ ಹಿರಿಯೂರು
‘ಉಪಚುನಾವಣೆಗೆ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಕಾರ್ಯಕರ್ತರು, ಆಕಾಂಕ್ಷಿಗಳು ಮತ್ತು ಬೆಂಬಲಿಗರು ವ್ಯಕ್ತಿ ಪೂಜೆ ಬಿಟ್ಟು, ಪಕ್ಷದ ಪೂಜೆ ಮಾಡುವುದನ್ನು ಕಲಿಯಿರಿ,’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ನಗರದ ನೆಹರು ಮೈದಾನದಲ್ಲಿಭಾನುವಾರ ಆಯೋಜಿಸಿದ್ದ ದಿವಂಗತ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿಮಾತನಾಡಿ, ‘ಸರಕಾರ ಹಾಗೂ ಪಕ್ಷದ ಮೇಲೆ ನಂಬಿಕೆಯಿಡಿ, ಜಾತಿಯ ಮೇಲೆ ರಾಜಕಾರಣ ಬೇಡ, ನೀತಿಯ ಮೇಲೆ ಮಾಡಬೇಕು,’ ಎಂದರು.
ಚಿತ್ರದುರ್ಗ ಜಿಲ್ಲೆಅಭಿವೃದ್ಧಿ ಯೋಜನೆಗಳ ಕುರಿತು ಸುಧಾಕರ್ ನನ್ನೊಂದಿಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದರು. ಸುಧಾಕರ್ ಕನಸಿನಂತೆ ಜೆಜಿಹಳ್ಳಿ ವ್ಯಾಪ್ತಿಯ 17 ಕೆರೆಗಳಿಗೆ ನೀರು ತುಂಬಿಸುವ 244 ಕೋಟಿ ರೂ. ವೆಚ್ಚದ ಕಾಮಗಾರಿಗೆ ಆಡಳಿತ್ಮಾತಕ ಅನುಮೋದನೆ ಕೊಡಲಾಗಿದೆ. ಐಮಂಗಲ ಹೋಬಳಿ ಕೆರೆಗಳಿಗೂ ನೀರು ತುಂಬಿಸಲು ರೂಪುರೇಷೆ ಸಿದ್ಧವಾಗಿದೆ. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸುಧಾಕರ್ ಪುತ್ರ ಸುಹಾಸ್ , ಪಟ್ಟಿಯನ್ನೇ ಕೊಟ್ಟಿದ್ದಾರೆ,’ ಎಂದ ಸಿಎಂ ಡಿಕೆಶಿ, ‘ಇದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಕ್ಷೇತ್ರ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಬೇಡಿಕೆಗಳನ್ನು ಈಡೇರಿಸುತ್ತೇನೆ,’ ಎಂದರು.
‘‘ಸುಧಾಕರ್ ನನ್ನ ಮಿತ್ರ ಎನ್ನುವ ಕಾರಣಕ್ಕೆ ಎಸ್ .ಎಂ.ಕೃಷ್ಣ ಅವರ ಅವಧಿಯಲ್ಲಿಅವರನ್ನು ಕರೆದುಕೊಂಡು ಬಂದು ಚಳ್ಳಕೆರೆ ಶಾಸಕನಾಗಿಸಿ, ಶಕ್ತಿ ತುಂಬುವ ಕೆಲಸ ಮಾಡಿದೆ. ಅವರ ಚಿಕ್ಕಪ್ಪ ಮತ್ತು ನಾನು ಬಂಗಾರಪ್ಪ ಸಂಪುಟದಲ್ಲಿಕೆಲಸ ಮಾಡಿದ್ದೆವು. ಈ ಕುಟುಂಬ ಎಂದಿಗೂ ಜಾತಿಯ ಮೇಲೆ ಬದುಕಿಲ್ಲ, ಮಾನವ ಜಾತಿ, ನೀತಿಯ ಮೇಲೆ ಬದುಕಿದೆ, ಬದುಕುತ್ತಿದೆ. ಎಲ್ಲವರ್ಗದ ಜನರನ್ನು ಒಗ್ಗೂಡಿಸಿ ಕುವೆಂಪು ಅವರ ಶಾಂತಿಯ ತೋಟವನ್ನು ಸುಧಾಕರ್ ನಿರ್ಮಿಸಿದ್ದಾರೆ,’’ ಎಂದು ಗುಣಗಾನ ಮಾಡಿದರು.
ಜನ ಗಳಿಕೆ ಶಾಶ್ವತ
‘‘ಸರಳತೆಗೆ ಹೆಸರಾಗಿದ್ದ ಸುಧಾಕರ್ , ಕೊಡುಗೈ ದಾನಿಯಾಗಿದ್ದರು. ಜಿಲ್ಲೆಯ ಜನರ ಬದುಕು ಹಸನಾಗಿಸಲು ಜಿಲ್ಲೆಯಲ್ಲಿನೀರಾವರಿ ಯೋಜನೆಗಳ ಜಾರಿಗಾಗಿ ಜಿಲ್ಲೆಯ ಎಲ್ಲಶಾಸಕರನ್ನು ಒಗ್ಗೂಡಿಸಿ ಶ್ರಮಿಸಿದವರು. ಹಣ ಗಳಿಕೆಗಿಂತ ಜನ ಗಳಿಕೆ ದೊಡ್ಡ ಹಾಗೂ ಶಾಶ್ವತ ಸಂಪತ್ತು ಎಂಬುದಕ್ಕೆ ಈ ನುಡಿ ನಮನ ಕಾರ್ಯಕ್ರಮ ಸಾಕ್ಷಿ,’’ ಎಂದು ಡಿ.ಕೆ.ಸಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ , ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್ .ಆಂಜನೇಯ, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ವಿರೇಂದ್ರ ಪಪ್ಪಿ, ಉಸ್ತುವಾರಿ ಮುರುಳಿಧರ್ ಹಾಲಪ್ಪ, ಎಂಎಲ್ ಸಿ ಸಲೀಂ ಅಹಮದ್ , ಮಾಜಿ ಶಾಸಕ ತನ್ವೀರ್ ಸೇಠ್ ಮಾತನಾಡಿದರು. ಸುಧಾಕರ್ ಪುತ್ರಿ ಸ್ಫೂರ್ತಿ, ಅಳಿಯ ನಿತೇಶ್ , ಸಹೋದರ ಡಿ.ಎಸ್ .ಕುಮಾರ್ , ಸುರೇಶ್ , ಮುಖಂಡರಾದ ಟಿ.ಬಿ.ಜಯಚಂದ್ರ, ಕೆ.ಪೂರ್ಣಿಮಾ, ಎಂಎಲ್ ಸಿ ಡಿ.ಟಿ.ಶ್ರೀನಿವಾಸ್ , ಜಿ.ಎಸ್ .ಮಂಜುನಾಥ್ , ಬಿ.ಎನ್ .ಚಂದ್ರಪ್ಪ, ತಾಜ್ ಪೀರ್ , ಪರಮೇಶ್ವರ ನಾಯ್ಕ ಇತರರಿದ್ದರು.
--
ಜಾತ್ಯತೀತ ನಾಯಕ ಸುಧಾಕರ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘‘ಅತ್ಯಂತ ಕ್ರೀಯಾಶೀಲ, ಜನಪರ ವ್ಯಕ್ತಿತ್ವ ಹೊಂದಿದ್ದ ಡಿ.ಸುಧಾಕರ್ , ಎಲ್ಲಜಾತಿ-ಧರ್ಮಗಳ ಜನರನ್ನು ಪ್ರೀತಿಸುತ್ತಿದ್ದ ಜಾತ್ಯತೀತ ನಾಯಕ. ಚುನಾವಣೆಯಲ್ಲಿಸ್ಪರ್ಧಿಸಲು ಸ್ವಜಾತಿಯ ಮತಗಳು ಇರಬೇಕು, ಇಲ್ಲವೇ ಸ್ವಜಾತಿ ಮತಗಳೇ ಇರಬಾರದು ಎಂದು ದೇವರಾಜ ಅರಸು ಹೇಳುತ್ತಿದ್ದರು. ಅದರಂತೆ ಹಿರಿಯೂರು ಕ್ಷೇತ್ರದಲ್ಲಿಜೈನ ಸಮುದಾಯದ ಮತಗಳು ಬೆರಳಣಿಕೆಯಷ್ಟು ಮಾತ್ರ. ಆದಾಗ್ಯೂ ಸುಧಾಕರ್ ಈ ಕ್ಷೇತ್ರದಲ್ಲಿಸತತವಾಗಿ ಗೆಲ್ಲುತ್ತಿದ್ದರು ಎಂದರೆ, ಅವರು ಜಾತಿ ಆಧಾರದ ಮೇಲೆ ಮತ ಕೇಳಲಿಲ್ಲ. ಜಾತ್ಯತೀತವಾಗಿ ಎಲ್ಲವರ್ಗದ ಜನರ ಪ್ರೀತಿ ಗಳಿಸಿದ್ದರು ಎಂಬುದು ಸ್ಪಷ್ಟ,’’ ಎಂದು ಹೇಳಿದರು.
--
ಮಗನನ್ನು ಸಿಎಂ ಮಡಿಲಿಗೆ ಹಾಕಿದ್ದೇನೆ
ಹರ್ಷಿಣಿ ಸುಧಾಕರ್ ಮಾತನಾಡಿ, ‘‘ನಮ್ಮ ಮನೆಯವರು ಆಸ್ಪತ್ರೆಯಲ್ಲಿದ್ದಾಗ ಇಡೀ ಸರಕಾರವೇ ಜತೆಗಿತ್ತು. ಕಾರ್ಯಕರ್ತರು ವಿಶೇಷ ಪೂಜೆ, ಹರಕೆ ಸಲ್ಲಿಸಿದರು. ಆದರೆ, ಅವರನ್ನು ಉಳಿಸಿಕೊಳ್ಳುವ ಭಾಗ್ಯವಿರಲಿಲ್ಲ. ಹಿರಿಯೂರು ಎಂದರೆ ನಮ್ಮವರಿಗೆ ಬಹಳ ಪ್ರೀತಿ, ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದರು. ಆ ಕನಸು ನನಸು ಮಾಡಲು ಕುಟುಂಬ ತೀರ್ಮಾನಿಸಿದೆ. ನಮ್ಮ ಮನೆಯವರನ್ನು ಬೆಂಬಲಿಸಿ, ಬೆಳೆಸಿದ ರೀತಿಯಲ್ಲೇ ನನ್ನ ಮಗನನ್ನೂ ಸರಕಾರ ಹಾಗೂ ಕ್ಷೇತ್ರದ ಜನತೆ ಬೆಂಬಲಿಸಿ, ಆಶೀರ್ವದಿಸಬೇಕು. ನನ್ನ ಮಗನನ್ನು ಸಿಎಂ ಮಡಿಲಿಗೆ ಹಾಕುತ್ತಿದ್ದೇನೆ. ಅವನಿಗೆ ರಾಜಕೀಯ ಶಕ್ತಿ ನೀಡಿ ಬೆಳೆಸಿ,’’ ಎಂದು ಭಾವನತ್ಮಾಕ ಸಂದೇಶ ನುಡಿದರು.
--
ಸುಹಾಸ್ ಚಿತ್ರ ಹಿಡಿದು ಘೋಷಣೆ
ನುಡಿ-ನಮನ ಕಾರ್ಯಕ್ರಮ ವೇಳೆ ಮುಖ್ಯಮಂತ್ರಿ, ಮಾಜಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು, ಸಚಿವರು ವೇದಿಕೆಗೆ ಬರುವಾಗ ಹಾಗೂ ಭಾಷಣ ಮಾಡುವ ವೇಳೆ ಕಾರ್ಯಕ್ರಮದಲ್ಲಿನೆರದಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸುಧಾಕರ್ ಅಭಿಮಾನಿಗಳು, ಸುಹಾಸ್ ಸುಧಾಕರ್ ಭಾವಚಿತ್ರ ಹಿಡಿದು ಟಿಕೆಟ್ ನೀಡುವಂತೆ ಘೋಷಣೆ ಮೊಳಗಿಸಿದರು. ಆದರೆ ಕಾರ್ಯಕ್ರಮದ ವೇದಿಕೆಯಲ್ಲಿಸಿಎಂ ಆಗಲಿ, ಕೆಪಿಸಿಸಿ ಅಧ್ಯಕ್ಷರಾಗಲು ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಿಸಲಿಲ್ಲ.
--
ಕೋಟ್ ...
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ಆದರೆ ದಾನ, ಧರ್ಮ ಮಾಡುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಚೆಂದ. ಜನತೆಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದಿದೆ. ಇದರಿಂದ ಬಿಜೆಪಿ-ಜೆಡಿಎಸ್ ಮತ ಕೇಳುವ ನೈತಿಕತೆ ಕಳೆದುಕೊಂಡಿವೆ.
-ಡಿ.ಕೆ.ಶಿವಕುಮಾರ್ , ಮುಖ್ಯಮಂತ್ರಿ.
--
ಕಾಂಗ್ರೆಸ್ ಸರಕಾರದ ಅವಧಿಯಲ್ಲಿಐದು ಉಪಚುನಾವಣೆ ನಡೆದಿದ್ದು, ಎಲ್ಲದರಲ್ಲೂನಾವೇ ಗೆದ್ದಿದ್ದೇವೆ. ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ, ಜನತೆಯ ವಿಶ್ವಾಸ ಉಳಿಸಿಕೊಂಡಿದ್ದೇವೆ. ಹಿರಿಯೂರಿನಲ್ಲಿಕೂಡ ನಾವೇ ಗೆಲ್ಲುತ್ತೇವೆ. 2028ರಲ್ಲೂಕಾಂಗ್ರೆಸ್ ಗೆಲ್ಲುತ್ತದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
--
26 ಪಿಎಚ್ ವೈಆರ್ 1
ಹಿರಿಯೂರು ನಗರದ ನೆಹರು ಮೈದಾನದಲ್ಲಿಭಾನುವಾರ ಆಯೋಜಿಸಿದ್ದ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿಸುಧಾಕರ್ ಭಾವಚಿತ್ರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ಇತರರು ಪುಷ್ಪ ಅರ್ಪಿಸಿದರು.
26 ಪಿಎಚ್ ವೈಆರ್ 1ಎ
ಹಿರಿಯೂರಿನಲ್ಲಿಭಾನುವಾರ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿಮೌನಾಚರಣೆ ಮೂಲಕ ಸುಧಾಕರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
26 ಪಿಎಚ್ ವೈಆರ್ 1ಬಿ
ಹಿರಿಯೂರಿನಲ್ಲಿಭಾನುವಾರ ನಡೆದ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿನೆರದಿದ್ದ ಜನಸ್ತೋಮ