ಆರೋಗ್ಯ ಸೇವೆಗೆ ಸೌಲಭ್ಯಗಳ ಅಪೌಷ್ಟಿಕತೆ*

Contributed byayyanagowdara@gmail.com|Vijaya Karnataka
need for health services to overcome the lack of facilities
ಸುಟ್ಟು ಕರಕಲಾದ ಪಿಎಚ್ ಸಿ, ವಸತಿಗೃಹವೇ ಕಚೇರಿ, ಹೆರಿಗೆ ನೂರಾರು, ತಾಯಿಮಗು ಆಸ್ಪತ್ರೆಗೆ ತಕರಾರು (ಕಿಕ್ಕರ್ )

ಆರೋಗ್ಯ ಸೇವೆಗೆ ಸೌಲಭ್ಯಗಳ ಅಪೌಷ್ಟಿಕತೆ
ಬಸವರಾಜ ಅಯ್ಯನಗೌಡರ ಹಗರಿಬೊಮ್ಮನಹಳ್ಳಿ

ಉದ್ಘಾಟನೆ ಕಾಣದ ಕೋಟಿ ರೂ. ಮೌಲ್ಯದ ಭವ್ಯ ಕಟ್ಟಡ, ನಿವೇಶನವಿದ್ದರೂ ತಾಯಿ ಮಗು ಆಸ್ಪತ್ರೆಗೆ ಒದಗದ ಅನುದಾನ, ವೈದ್ಯಾಧಿಕಾರಿಗಳ ವಸತಿಗೃಹವೇ ಗತಿಯಾದ ತಾಲೂಕು ಆರೋಗ್ಯಾಧಿಕಾರಿ ಕಟ್ಟಡ ಸೇರಿ ನಾನಾ ಸಮಸ್ಯೆಗಳಿಂದ ಆರೋಗ್ಯ ಇಲಾಖೆಗೆ ಸೌಲಭ್ಯಗಳ ಪೌಷ್ಟಿಕಾಂಶದ ಕೊರತೆ ಎದುರಾಗಿದೆ.

ತಾಲೂಕಿನಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಪೈಕಿ ಅತಿ ಹೆಚ್ಚು ಹೆರಿಗೆ ಖ್ಯಾತಿಯ ಮಗಿಮಾವಿನಹಳ್ಳಿ, ಬಾಚಿಗೊಂಡನಹಳ್ಳಿ, ಮೋರಿಗೇರಿ ಮತ್ತು ಹನಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಕಾಯಂ ವೈದ್ಯಾಧಿಕಾರಿಗಳ ಕೊರತೆ ಇದೆ. ಗುತ್ತಿಗೆ ಆಧಾರದ ವೈದ್ಯರಿಂದಲೇ ಸೇವೆ ಕಂಡುಕೊಳ್ಳಲಾಗುತ್ತಿದೆ. ಆದರೆ, ಆಡಳಿತಾತ್ಮಕ ನಿರ್ಣಯ ಕೈಗೊಳ್ಳಲಾಗದ ವೈದ್ಯರು ಕೆಲವೊಮ್ಮೆ ಖುದ್ದು ಸಮಸ್ಯೆಯಾಗುತ್ತಾರೆ.

ತಾಯಿ ಮಗು ಆಸ್ಪತ್ರೆ ಕನಸು:

ತಾಲೂಕಿನ 8 ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿಈವರೆಗೂ ಮಾಸಿಕ 100ಕ್ಕೂ ಹೆಚ್ಚು ಹೆರಿಗೆಗಳಾಗುತ್ತಿವೆ. ಈ ಮೊದಲು ಬಹುತೇಕ ಹೆರಿಗೆಗಳಿಗೆ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಇದೀಗ ಹೆಚ್ಚುವರಿ ಪ್ರಸೂತಿ ತಜ್ಞ ವೈದ್ಯರಿದ್ದು, ಗುಣಮಟ್ಟದ ಸೇವೆ ಒದಗುತ್ತಿದೆ. ಸ್ಥಳೀಯ 100 ಹಾಸಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಒದಗುತ್ತಿದೆ. ವಿಶೇಷವೆಂದರೆ ಮಗಿಮಾವಿನಹಳ್ಳಿ ಡಾ.ಅನುಷಾ ಸರ್ವೋತ್ತಮ ವೈದ್ಯೆ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ವೈದ್ಯಾಧಿಕಾರಿಗಳ ಉತ್ಸಾಹಕ್ಕೆ ತಾಯಿ ಮತ್ತು ಮಗುವಿನ ಪ್ರತ್ಯೇಕ ಆಸ್ಪತ್ರೆ ಇಲ್ಲದಿರುವುದು ತಣ್ಣೀರೆರಚಿದಂತಾಗಿದೆ. ನೆಲಸಮಗೊಳ್ಳಲಿರುವ ಹಳೆ ತಹಸಿಲ… ಕಚೇರಿ ಒದಗಿಸುವಂತೆ ತಾಲೂಕು ವೈದ್ಯಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ನಿವೇಶನ ಲಭ್ಯವಿದ್ದರೂ ಅನುದಾನ ಒದಗಿಸುವಲ್ಲಿಜನಪ್ರತಿನಿಧಿಗಳು ಮೀನಮೇಷ ಎಣಿಸುತ್ತಿರುವುದು ತಾಯಿಮಗುವಿನ ಪ್ರತ್ಯೇಕ ಆಸ್ಪತ್ರೆ ಪುಷ್ಟಿ ನೀಡದಾಗಿದೆ.

ವಸತಿ ಗೃಹವೇ ಕಚೇರಿ:

ಜಿಲ್ಲೆಯ ನಾನಾ ತಾಲೂಕುಗಳಲ್ಲಿಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳಿಗೆ ಪ್ರತ್ಯೇಕ ಕಚೇರಿ ಇದೆ. ಆದರೆ, ತಾಲೂಕಿನಲ್ಲಿಮಾತ್ರ ಟಿಎಚ್ ಒ ಕಚೇರಿಗೆ ವೈದ್ಯಾಧಿಕಾರಿ ವಸತಿಗೃಹವೇ ಗತಿಯಾಗಿದೆ. ಹೆಚ್ಚಿನ ಸಂಖ್ಯೆಯ ಸಿಬ್ಬಂದಿ, ಗಣಕಯಂತ್ರಗಳು, ಕಚೇರಿ ಮೂಲಸೌಲಭ್ಯಗಳಿಗೆ ಪ್ರತ್ಯೇಕ ಕಚೇರಿ ಕಟ್ಟಡ ಅಗತ್ಯವಾಗಿದ್ದರೂ ಇಲಾಖೆ ಮತ್ತು ಜನಪ್ರತಿನಿಧಿಗಳು ಕನಿಷ್ಠ ಕ್ರಮ ಕೈಗೊಂಡಿಲ್ಲ.

ಉದ್ಘಾಟನೆಗೆ ಮೀನಮೇಷ:

ತಾಲೂಕಿನ ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವಿದ್ಯುತ್ ಅವಘಡದಿಂದಾಗಿ ಸುಟ್ಟು ಕರಕಲಾಗಿದೆ. ಇಲ್ಲಿನ ಚಿಕಿತ್ಸಾ ಸಾಮಗ್ರಿ, ಗಣಕಯಂತ್ರಗಳು ಸುಟ್ಟು ಹಲವು ತಿಂಗಳಾಗಿವೆ. ಆದರೆ, ಈವರೆಗೂ ಹೊಸ ಸಾಮಗ್ರಿ ಪೂರೈಕೆಯಾಗಿಲ್ಲ. ಈಗಾಗಲೇ 3 ವರ್ಷದ ಹಿಂದೆ ಆರಂಭಗೊಂಡ 3.2 ಕೋಟಿ ರೂ.ಅಂದಾಜು ಮೊತ್ತದ ಕಟ್ಟಡ ಈವರೆಗೂ ಪೂರ್ಣಗೊಂಡಿಲ್ಲ. ಸುಸಜ್ಜಿತ ಆಸ್ಪತ್ರೆ ನಿರೀಕ್ಷಿಸಿದ ಜನರಿಗೆ ಕಟ್ಟಡದ ಉದ್ಘಾಟನೆಗೆ ಜನಪ್ರತಿನಿಧಿಗಳು ಮೀನಮೇಷ ಎಣಿಸುತ್ತಿರುವುದು ಗ್ರಾಮದ ಆರೋಗ್ಯಸೇವೆಗೆ ಕುತ್ತು ತಂದಿದೆ.

ಕೋಟ್ -

ಈ ಹಿಂದಿನ ಶಾಸಕರು ಆಸ್ಪತ್ರೆಗೆ 3 ಕೋಟಿ ರೂ. ಒದಗಿಸಿದ್ದರೂ ಹೊಸ ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿಲ್ಲ. ಹಳೆ ಆಸ್ಪತ್ರೆ ಕಟ್ಟಡ ಸುಟ್ಟು ಸೇವೆಗೆ ಸೂಕ್ತವಾಗಿರದ ಹಿನ್ನೆಲೆಯಲ್ಲಿಕೂಡಲೇ ಹೊಸ ಕಟ್ಟಡ ತ್ವರಿತವಾಗಿ ಪೂರ್ಣಗೊಳಿಸಿ, ಸೇವೆಗೆ ಅನುವು ಮಾಡಬೇಕು.

-ಎ.ಎಂ.ಗಂಗಾಧರಯ್ಯ, ಮಾಜಿ ಅಧ್ಯಕ್ಷರು, ಗ್ರಾಪಂ ಹನಸಿ

ಕೋಟ್ -

ಹಳೆ ತಹಸಿಲ… ಕಚೇರಿಯನ್ನೇ ತಾಯಿ ಮಗು ಪ್ರತ್ಯೇಕ ಆಸ್ಪತ್ರೆ ಕಟ್ಟಡಕ್ಕೆ ಒದಗಿಸಲು ಕೋರಲಾಗಿದೆ. ಕಟ್ಟಡದ ಅಗತ್ಯತೆ ಕುರಿತಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹನಸಿ ಆಸ್ಪತ್ರೆ ಕಟ್ಟಡ ಇಲಾಖೆಗೆ ಹಸ್ತಾಂತರವಾಗಿಲ್ಲ. ಶಾಸಕರು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

- ಡಾ.ಪ್ರವೀಣ್ ಕುಮಾರ್ ಹಿರೇಮಠ, ಟಿಎಚ್ ಒ, ಹಗರಿಬೊಮ್ಮನಹಳ್ಳಿ

---

20ಎಚ್ ಬಿಎಚ್ 2: ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿವಿದ್ಯುತ್ ಅವಘಡದಿಂದಾಗಿ ಸುಟ್ಟು ಸೇವೆಗೆ ಬಾರದಂತಾದ

ಪ್ರಾಥಮಿಕ ಆರೋಗ್ಯಕೇಂದ್ರ.

20ಎಚ್ ಬಿಎಚ್ 3: ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿಆಸ್ಪತ್ರೆಯ ಅಪೂರ್ಣ ಕಟ್ಟಡ.