ಹೆಚ್ಚುವರಿ ವಿಷಯ ಎಐ ಆರಂಭಿಸಿ: ಮನವಿ

Contributed bysubedarcb@gmail.com|Vijaya Karnataka
ai for students english and artificial intelligence ai
ಹೆಚ್ಚುವರಿ ವಿಷಯ ಎಐ ಆರಂಭಿಸಿ: ಮನವಿ

ನರಗುಂದ: ನರಗುಂದ ಸರಕಾರಿ ಉರ್ದು ಶಾಲೆಯಲ್ಲಿಬೋಧಿಸಲಾಗುತ್ತಿರುವ ತೃತೀಯ ಭಾಷೆ ಇಂಗ್ಲಿಷ್ ವಿಷಯ ಮುಂದುವರಿಸಬೇಕು. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಆರ್ಟಿಫಿಶೀಯಲ್ ಇಂಟಿಲಿಜೆನ್ಸ್ (ಎಐ) ಹೆಚ್ಚುವರಿ ವಿಷಯವನ್ನಾಗಿ ಆರಂಭಿಸಲು ಅನುಮತಿ ನೀಡುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸರಕಾರಿ ಉರ್ದು ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಮೊಹಮದ್ ರಫಿ ಜೋರಂ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿತಿಳಿಸಿರುವ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣವು ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಯಲು ಹಾಗೂ ಮುಂದಿನ ಉದ್ಯೋಗಾವಕಾಶಗಳಿಗೆ ಸಹಕಾರಿಯಾಗಲಿದೆ. ಆದರೆ ತೃತೀಯ ಭಾಷೆಯನ್ನು ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತಾಸಕ್ತಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಇಂಗ್ಲಿಷ್ ಭಾಷೆಯನ್ನು ಮುಂದುವರಿಸಿ ಎಐ ವಿಷಯವನ್ನು ಹೆಚ್ಚುವರಿಯಾಗಿ ಜಾರಿಗೊಳಿಸುವಂತೆ ಮನವಿಯಲ್ಲಿಕೋರಲಾಗಿದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಶಿಕ್ಷಕರು ಹಾಗೂ ಸೌಲಭ್ಯಗಳನ್ನು ಒದಗಿಸಿ ಎಐ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.