ಸೋಂಪುರ ಗ್ರಾಪಂನ ಗ್ರಾಮಗಳಲ್ಲಿಕಸದ ಸಮಸ್ಯೆ

Contributed bymeghashree0610@gmail.com|Vijaya Karnataka
rising waste issues in somapura garbage problems in villages
ಸೋಂಪುರ ಗ್ರಾಪಂನ ಗ್ರಾಮಗಳಲ್ಲಿಕಸದ ಸಮಸ್ಯೆ

ವಿಕ ಸುದ್ದಿಲೋಕ ದಾಬಸಪೇಟೆ
ಸೋಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿಕಸದ ಸಮಸ್ಯೆ ಎದುರಾಗಿದೆ.

ಸೋಂಪುರ(ದಾಬಸಪೇಟೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಬಸಪೇಟೆ, ಎಡೇಹಳ್ಳಿ, ಭಾರತೀಪುರ, ತಿಮ್ಮನಾಯ್ಕನಹಳ್ಳಿ, ಪೆಮ್ಮನಹಳ್ಳಿ, ನಿಡವಂದ, ಮಾದೇನಹಳ್ಳಿ, ನಿಜಗಲ್ ಕೆಂಪೋಹಳ್ಳಿ, ಕರಿಮಣ್ಣೆ ತಟ್ಟೆಕೆರೆ, ಮತ್ತಿತರ ಗ್ರಾಮಗಳಲ್ಲಿರಸ್ತೆಯ ಬದಿಗಳಲ್ಲಿಕಸದ ರಾಶಿಯಿಂದ ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಕೈಗಾರಿಕಾ ವಲಯದಲ್ಲಿಈ ಗ್ರಾಮಗಳಿವೆ. ಪ್ರತಿ ಕಂಪನಿಯಿಂದ ನೇರವಾಗಿ ಕೆಐಎಡಿಬಿ ಅಧಿಕಾರಿಗಳೇ ಕೈಗಾರಿಕೆಗಳಿಂದ ಕಂದಾಯ ವಸೂಲಿ ಮಾಡುತ್ತಿದ್ದಾರೆ. ಈ ಕೈಗಾರಿಕೆಗಳಿಂದ ಮತ್ತು ಕೈಗಾರಿಕಾ ವ್ಯಾಪ್ತಿಯಲ್ಲಿಕಸ ಬಿದ್ದರೆ ಪಂಚಾಯಿತಿಯಿಂದ ಕಸ ಸಂಗ್ರಹಿಸಲು ಕಷ್ಟವಾಗುತ್ತಿದೆ ಎಂಬುದು ಪಂಚಾಯಿತಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ, ಕಸದ ರಾಶಿಯಿಂದ ಸಾಮಾನ್ಯ ಜನ ಮಾತ್ರ ತತ್ತರಿಸಿದ್ದಾರೆ. ಅಲ್ಲದೇ, ಸೊಳ್ಳೆ ನೊಣಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳಿಂದ ನರಳುವಂತಾಗಿದೆ.

ಪ್ರಮುಖವಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದರಿಯುದ್ದಕ್ಕೂ ಈ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಪ್ಲಾಸ್ಟಿಕ್ , ಕೋಳಿ ತ್ಯಾಜ್ಯ ಸೇರಿದಂತೆ ಕಂಪನಿಗಳ ಕೆಲ ವಿಷಯುಕ್ತ ತ್ಯಾಜ್ಯದಿಂದ ಇಡೀ ಪರಿಸರ ಮೇಲೆ ಪರಿಣಾಮ ಬೀರುತ್ತಿದೆ.

ರಾತ್ರಿ ವೇಳೆ ಮನೆಯ ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಹೋಗುವುದು ಸಾಮಾನ್ಯವಾಗಿದೆ. ಈ ಕಸದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿಸಂಬಂಧಪಟ್ಟವರು ಕ್ರಮ ವಹಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಕೊಟ್ 1:

ಪಂಚಾಯಿತಿ ವ್ಯಾಪ್ತಿಯ ಕೈಗಾರಿಕೆಗಳು ಕಂದಾಯ ರೂಪದಲ್ಲಿಟ್ಯಾಕ್ಸ್ ಕಟ್ಟುತ್ತಿದ್ದವು. ಈಗ ಕಂಪನಿಯರಿಂದ ಕೆಐಎಡಿಬಿ ಅಧಿಕಾರಿಗಳೇ ಟ್ಯಾಕ್ಸ್ ಪಡೆಯುತ್ತಿದ್ದಾರೆ. ಇದರಿಂದ ಪಂಚಾಯಿತಿಯಿಂದ ಕೈಗಾರಿಕಾ ವಲಯದಲ್ಲಿಕಸ ನಿರ್ವಹಣೆ ಮಾಡಲು ಕಷ್ಟವಾಗಿದೆ,

-ರವಿಶಂಕರ್ , ಪಿಡಿಒ, ಸೋಂಪುರ ಗ್ರಾಪಂ

ಕೊಟ್ 2:

ಕಸದ್ದೇ ದೊಡ್ಡ ಸಮಸ್ಯೆಯಾಗಿದೆ. ಜನಕ್ಕೆ ಅನುಕೂಲಕವಾಗುವಂತೆ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ಹೇಳುತ್ತಾರೆ. ಹೀಗಾದರೆ, ಜನಸಾಮಾನ್ಯರ ಕಷ್ಟ ಕೇಳುವವರು ಯಾರು?. ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕಸದ ಸಮಸ್ಯೆ ನಿವಾರಿಸಬೇಕು. ಜನರ ಆರೋಗ್ಯ ಕಾಪಾಡಬೇಕು.

-ಅಶೋಕ್ , ದಾಬಸಪೇಟೆ

ಪೊಟೋ 1: ದಾಬಸಪೇಟೆಯ ದೇವನಹಳ್ಳಿ ವಿಮಾನ ನಿಲ್ದಾಣದ ರಸ್ತೆಯಲ್ಲಿನ ಕಸದ ರಾಶಿ.